ಬೀದರ್: ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಮತ್ತು ಡಿಸಿ ಡಾ.ಎಚ್.ಆರ್ ಮಹದೇವ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ.
ನಗರದ ಹೊರ ವಲಯದ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮದ ನಂತರ ಮಾತನಾಡಿದ ಚವ್ಹಾಣ್, ಡಿಸಿ ಮಹದೇವ ಮೊದಲಿನ ಸರ್ಕಾರದ ಸಚಿವರೊಂದಿಗೆ ಸಣ್ಣಪುಟ್ಟ ಸಮಾರಂಭಗಳಲ್ಲೂ ಹಾಜರಿದ್ದು ಜನರ ಮುಂದೆ ಕಾಣ್ತಿದ್ದರು. ಆದ್ರೆ ಬಿಜೆಪಿ ನೇತೃತ್ವದ ಬಿಜೆಪಿ ಸರ್ಕಾರದ ಸಂಪುಟ ರಚನೆಯಾಗಿ 20 ದಿನಗಳಾಗಿದ್ದು ಜಿಲ್ಲೆಯಾದ್ಯಂತ ನಡೆದ ಒಂದೇ ಒಂದು ಕಾರ್ಯಕ್ರಮದಲ್ಲೂ ಅವರು ಭಾಗಿಯಾಗಿಲ್ಲ. ನನ್ನನ್ನು ಸೌಜನ್ಯಕ್ಕಾದ್ರೂ ಭೇಟಿ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಮಾತನಾಡುವಾಗಲೂ ಜಿಲ್ಲಾಡಳಿತ ಕಡೆಯಿಂದ ಯಾರಾದ್ರೂ ಬಂದಿದ್ದಾರಾ ಎಂದು ಸಚಿವರು ಪ್ರಶ್ನೆ ಮಾಡಿದರು. ನಂತರ ಡಿಸಿ ಸಾಹೇಬ್ರು ಅವರ ಕೆಲಸ ಅವರು ಮಾಡಲಿ, ನಮ್ಮ ಕೆಲಸ ನಾವು ಮಾಡ್ತಿವಿ ಎಂದು ಸಮಜಾಯಿಷಿ ನೀಡಿದರು.