ETV Bharat / state

ಹೈನುಗಾರಿಕೆಯಲ್ಲಿ ಸ್ವಾವಲಂಬಿ ಬದುಕು ಕಂಡ ಗಣಿನಾಡಿನ ಯುವಕ

author img

By

Published : Apr 7, 2019, 9:54 AM IST

Updated : Apr 7, 2019, 9:28 PM IST

ಹೈನುಗಾರಿಕೆಯಲ್ಲಿ ಸ್ವಾವಲಂಬಿ ಬದುಕು ಕಂಡ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರದ ಮನ್ಮತಕೇರಿಯ ಯುವಕನೋರ್ವ ಯುವ ಸಮುದಾಯಕ್ಕೆ ಮಾದರಿಯಾಗಿದ್ದಾನೆ.

ಜಂಬುನಾಥ್

ಬಳ್ಳಾರಿ: ಇಂದಿನ ದಿನಗಳಲ್ಲಿ ಯುವ ಸಮುದಾಯ ವಿದ್ಯಾಭ್ಯಾಸ ನಡೆಸಿ ಮಹಾ ನಗರಗಳಲ್ಲೇ ಬದುಕು ಕಂಡುಕೊಳ್ಳಲು ಬಯಸುವುದು ಹೆಚ್ಚು. ಆದರೆ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರದ ಮನ್ಮತಕೇರಿಯ ಯುವಕನೋರ್ವ ವಿದ್ಯಾಭ್ಯಾಸದ ನಂತರ ಹೈನುಗಾರಿಕೆಯನ್ನೇ ಉದ್ಯಮವನ್ನಾಗಿಸಿ ಸ್ವಾವಲಂಬಿ ಜೀವನ ನಡೆಸುತ್ತಿದ್ದಾನೆ.

ಮನ್ಮತಕೇರಿಯ ಎ. ನಾಗರಾಜ್​ ಹಾಗೂ ನಿರ್ಮಲಾ ದಂಪತಿಯ ಪುತ್ರ 24 ವರ್ಷದ ಜಂಬುನಾಥ್ ಎಂಬಾತ 2012 - 2013ನೇ ಸಾಲಿನಲ್ಲಿ ಬಾಗಲಕೋಟೆ ಕೃಷಿ ವಿಶ್ವವಿದ್ಯಾಲಯದ ಅಂಗಸಂಸ್ಥೆಯದ ( ಧಾರವಾಡದಲ್ಲಿ ) ತೋಟಗಾರಿಕೆಯಲ್ಲಿ ಎರಡು ವರ್ಷದ ತರಬೇತಿ ಪಡೆದುಕೊಂಡಿದ್ದಾರೆ. ಬಳಿಕ 2014ರಲ್ಲಿ ಗುಜರಾತ್​ನ ಜೂನಾಗಡ ಜಿಲ್ಲೆಯ ರಾಜುಬಾಯಿಯಿಂದ 5 ಗಿರ್ ತಳಿ ಹಸುಗಳು ಮತ್ತು ಒಂದು ಗಿರ್ ತಳಿಯ ಹೋರಿ ಖರೀದಿಸಿದರು. ಅದರ ವೆಚ್ಚ 2 ಲಕ್ಷ 30 ರೂಪಾಯಿ ಮತ್ತು ವಾಹನದ ಬಾಡಿಗೆ 50,000 ಸಾವಿರ.

ಈ ಹಸುಗಳಿಂದ ಬೆಳಗ್ಗೆ ಮತ್ತು ಸಂಜೆ ಒಟ್ಟು 35 ಲೀಟರ್ ಹಾಲು ಸಿಗುತ್ತಿತ್ತು. 1 ಲೀಟರ್​ ಹಾಲಿಗೆ 70 ರೂಪಾಯಿ ಇದಿದ್ದರಿಂದ ದಿನಕ್ಕೆ 2,450 ರೂಪಾಯಿ ಬಂದರೆ ತಿಂಗಳಿಗೆ 73,500 ರೂಪಾಯಿ ಸಿಗುತ್ತಿತ್ತು. ಆದರೆ ಗಿರ್ ತಳಿಯ ಹಸುಗಳಿಗೆ ಅದರ ಆರೋಗ್ಯ, ಮೇವು, ಕೆಲಸ ಮಾಡುವ ಕೂಲಿಗರಿಗೆ ಆಗುವ ಒಟ್ಟು ಖರ್ಚು 50,000 ರೂಪಾಯಿ ಕಳೆದರೆ 23,500 ಉಳಿತಾಯವಾಗುತ್ತಿತ್ತು‌ . ಆದರೆ ನಂತರದಲ್ಲಿ ಗಿರ್ ತಳಿ ಹಸು ಹಾಲು ಕಡಿಮೆ ನೀಡುತ್ತೇ ಹಾಗೇ ಲಾಭ ಕಡಿಮೆ ಇತ್ತು ಎನ್ನುವ ಕಾರಣದಿಂದ ಆ ಎಲ್ಲಾ ಗಿರ್ ತಳಿಯನ್ನು 2,30,000 ಸಾವಿರ ರೂ.ಗೆ ಹೊಸಪೇಟೆ ರೈತನಿಗೆ ಮಾರಾಟ ಮಾಡಿದರು. ನಂತರ ಹರಿಯಾಣದಿಂದ 5 ಮುರ್ರಾ ತಳಿಯ ಎಮ್ಮೆಗಳನ್ನು 4 ಲಕ್ಷ 90 ಸಾವಿರ ನೀಡಿ ಹಾಗೂ ಎರಡನೇ ಬಾರಿ ಮತ್ತದೇ 4 ಮುರ್ರಾ ತಳಿಯನ್ನು 4 ಲಕ್ಷ 20 ಸಾವಿರ ಕೊಟ್ಟು ತಂದರು.

ಜಂಬುನಾಥ್

ಮುರ್ರಾ ತಳಿ ಎಮ್ಮೆಗಳ ಆರೈಕೆ ಹೇಗೆ ?

ಪ್ರಾಣಿಗಳ ಮೇಲೆ ಬಹಳ ಪ್ರೀತಿ ಇರಬೇಕು ಅದಕ್ಕೆ ಆಹಾರ ಹಾಕುವುದರಿಂದ, ಅವುಗಳಿಗೆ ಸ್ನಾನ ಮಾಡಿಸುವುದು, ಹಾಲು ಹಿಂಡುವುದು, ಈಜಾಡಲು ಕೆರೆಗೆ ಬಿಡುವುದು ಬಹಳ ಮುಖ್ಯವಾಗಿದೆ. ಪ್ರಾಣಿಗಳು ಸಹ ನಮ್ಮನ್ನು ಕಾಯುತ್ತಾ ಇರುತ್ತವೆ. ಬೆಳಗಿನ ಜಾವ 3 ಗಂಟೆಯಿಂದ 6 ಗಂಟೆವರೆಗೆ ಹಾಲು ಕರೆಯಲಾಗುತ್ತದೆ. ಅದೇ ಸಮಯದಲ್ಲಿ ಮೇವು ಇನ್ನಿತರ ಆಹಾರ ನೀಡಲಾಗುತ್ತದೆ. 9 ಗಂಟೆಗೆ ಕೆರೆಗೆ ‌ಈಜಾಡಲು ಬಿಡಲಾಗುತ್ತದೆ. ಎರಡು ತಾಸು ಮಾತ್ರ, ಕೆಲ ಸಮಯದಲ್ಲಿ ಡೈರಿಯಲ್ಲಿಯೇ ಸ್ನಾನ ಮಾಡಿಸಲಾಗುತ್ತದೆ ಅವುಗಳಿಗೆ ನೀರೆಂದರೇ ಬಹಳ ಪ್ರೀತಿ ಎನ್ನುತ್ತಾರೆ.

ಪ್ರಸ್ತುತ ಜಂಬುನಾಥನ ಬಳಿ ಎಂಟು ಮುರ್ರಾ ತಳಿ ಎಮ್ಮೆ ಮತ್ತು 6 ಮುರ್ರಾ ಕರುಗಳಿವೆ. ಅದರಲ್ಲಿ 5 ಹೆಣ್ಣು ಮತ್ತು ಒಂದು ಗಂಡು ಇದೆ. ಇವುಗಳಿಗೆ ಪಾಪಿನಾಯಕನ ಹಳ್ಳಿಯ ರೈತ ಮುಂಗಡವಾಗಿ ಹಣ ನೀಡಿದ್ದಾರೆ. ಆರು ತಿಂಗಳವರೆಗೆ ಬೆಳೆಸಿದ ನಂತರ 50,000 ರೂಪಾಯಿ ಕೊಟ್ಟು ತೆಗೆದುಕೊಂಡು ಹೋಗುತ್ತಾರೆ. ಮುರ್ರಾ ತಳಿಯ ಎಮ್ಮೆಗಳ ಕರುಗಳಿಗೂ ಬೇಡಿಕೆ ಇದೆ ಎನ್ನುತ್ತಾರೆ ಜಂಬುನಾಥ.

ಡೈರಿ ನಿರ್ಮಾಣ ವೆಚ್ಚ:

ಇನ್ನು ಈ ಮುರ್ರಾ ತಳಿ 8 ಎಮ್ಮೆ ವಾಸವಾಗಲು ಕಬ್ಬಿಣ ಬಳಸಿ ಕೊಠಡಿ ನಿರ್ಮಾಣಕ್ಕೆ 3 ಲಕ್ಷ ಖರ್ಚಾಗಿದೆ. ಇವರ ತಂದೆ ನಾಗರಾಜ್ ಅವರು ಜಂಬುನಾಥ, ಓದಿದವನಾಗಿದ್ದು, ಈತನಿಗೆ ಇವೆಲ್ಲಾ ಏಕೆ? ಓದಲಾರದವರು ಇಂತಹ ಕೆಲಸ ಮಾಡಬೇಕೆಂದು ಹೇಳಿದ್ದಲ್ಲದೇ ನಿನಗೆ ಮಾಡಲಾಗುವುದಿಲ್ಲ, ನಾನು ದುಡ್ಡು ಕೊಡುತ್ತಿಲ್ಲ ಸಣ್ಣ ಹುಡುಗ ನೀನು ಎಂದಿದ್ದರಂತೆ ಆದರೆ, ಜಂಬುನಾಥ ದೊಡ್ಡಪ್ಪ ಸಿದ್ದೇಶ್ವರ ಮತ್ತು ಚಿಕ್ಕಪ್ಪ ಹನುಮನಗೌಡ ಅವರು ಹಣದ ಪ್ರೋತ್ಸಾಹ ಮಾಡಿದ ಪರಿಣಾಮ ಇಂದು ಈ ಯುವಕ ಹೈನುಗಾರಿಕೆಯಲ್ಲಿ ಸ್ವಾವಲಂಬಿಯಾಗುವುದಲ್ಲದೇ ಇತರ ವಿದ್ಯಾವಂತ ಯುವಕರಿಗೂ ಮಾದರಿಯಾಗಿದ್ದಾನೆ.

Intro:ಪ್ರಾಣಿಗಳ ಮೇಲೆ ಪ್ರೀತಿ, ಅವುಗಳ ಆರೋಗ್ಯ, ಆಹಾರದ ಬಗ್ಗೆ ಮಾಹಿತಿ, ಸಮಯ ಪಾಲನೆ ಇದ್ದರೇ ಮಾತ್ರ ಸ್ವಾವಲಂಬಿ ಬದುಕಲು ಮತ್ತು ಲಾಭ ಪಡೆಯಲು ಹೈನುಗಾರಿಕೆ ಉತ್ತಮ : ಯುವಕ ಜಂಬುನಾಥ.

( ತಿಂಗಳಿಗೆ 45,000 - 50,000 ಸಾವಿರ ರೂಪಾಯಿವರೆಗೆ ಲಾಭ ಪಡೆಯುವ ಯುವಕ.)

Body:ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರದ ಹಳ್ಳಿಕೆರೆಯ ತನ್ನ ಜಮೀನಿನಲ್ಲಿ ಹರಿಯಾಣ ರಾಜ್ಯ ಮುರ್ರಾ ತಳಿಯ ಎಂಟು ಎಮ್ಮೆಗಳನ್ನು ಸಾಕಿದ ಯುವಕ ಕಮಲಾಪುರದ ಮಮ್ಮತಕೆರೆ ನಿವಾಸಿ ಎ.ಜಂಬುನಾಥ.

ಜನನ ಮತ್ತು ವಿಧ್ಯಾಭ್ಯಾಸ:

ತಂದೆ ಎ. ನಾಗರಾಜ್, ತಾಯಿ ಎ.ನಿರ್ಮಲ ದಂಪತಿಗೆ ಎರಡನೇ ಮಗನಾದ ಎ. ಜಂಬುನಾಥ, ವಯಸ್ಸು 24, ವಿದ್ಯಾಭ್ಯಾಸ 2012 - 2013ನೇ ಸಾಲಿನಲ್ಲಿ ಬಾಗಲಕೋಟೆಯ ವಿಶ್ವವಿದ್ಯಾಲಯದ ಅಂಗಸಂಸ್ಥೆ ಯ ( ಧಾರವಾಡದಲ್ಲಿ ) ತೋಟಗಾರಿಕೆಯಲ್ಲಿ ಎರಡು ವರ್ಷ ತರಬೇತಿ ಪಡೆದುಕೊಂಡಿದ್ದಾರೆ.

ಹೈನುಗಾರಿಕೆ ಆರಂಭ :

ಒಂದನೇ ಹಂತದಲ್ಲಿ :

2014 ರಲ್ಲಿ ಗುಜರಾತ್ ನ ಜೂನಾಗಡ ಜಿಲ್ಲೆಯ ರಾಜುಬಾಯಿಯಿಂದ 5 ಗಿರ್ ತಳಿ ಹಸುಗಳು ಮತ್ತು ಒಂದು ಗಿರ್ ತಳಿಯ ಹೋರಿ ಖರೀದಿಸಿದರು. ಅದರ ವೆಚ್ಚ 2 ಲಕ್ಷ 30 ರೂಪಾಯಿ ಮತ್ತು ವಾಹನದ ಬಾಡಿಗೆ 50,000 ಸಾವಿರ ಆಯಿತು ಎಂದರು.

2014 - 2015ನೇ ಸಾಲಿನಲ್ಲಿ ಗಿರ್ ತಳಿ ಸಾಕಿದೆ. ಅದರಿಂದ ಬೆಳಿಗ್ಗೆ ಮತ್ತು ಸಂಜೆ ಒಟ್ಟು 35 ಲೀಟರ್ ಹಾಲು ನೀಡುತ್ತಾ ಇತ್ತು. 1 ಲೀಟರ್ ಗೆ 70 ರೂಪಾಯಿ ಇತ್ತು. ದಿನಕ್ಕೆ 2,450 ರೂಪಾಯಿ ಬಂದ್ರೇ ತಿಂಗಳಿಗೆ 73,500 ರೂಪಾಯಿ ಆಗುತ್ತಿತ್ತು ಆದ್ರೇ ಗಿರ್ ತಳಿಯ ಹಸುಗಳಿಗೆ ಅದರ ಆರೋಗ್ಯ, ಮೇವು, ಕೆಲಸ ಮಾಡುವ ಕೂಲಿಗಗರಿಗೆ ಒಟ್ಟು ಖರ್ಚು 50,000 ರೂಪಾಯಿ ಇದ್ರೇ 23,500 ಉಳಿತಾಯವಾಗುತ್ತಿತ್ತು‌ .

ಗಿರ್ ತಳಿ ಹಸು ಹಾಲು ಕಡಿಮೆ ನೀಡುತ್ತೇ ಹಾಗೇ ಲಾಭ ಕಡಿಮೆ ಇತ್ತು ಎನ್ನುವ ಕಾರಣದಿಂದ ಆ ಎಲ್ಲಾ ಗಿರ್ ತಳಿಯನ್ನು ತಂದ 2,30,000 ಸಾವಿರ ರೂಪಾಯಿಗೆ ಹೊಸಪೇಟೆ ರೈತನಿಗೆ ಮಾರಾಟ ಮಾಡಿದರು.

ಎರಡನೇ ಹಂತ:

ಮೊದಲನೇ ಬಾರಿ ಹರಿಯಾಣದ 5 ಮುರ್ರಾ ತಳಿಯ ಎಮ್ಮೆಗಳನ್ನು 4 ಲಕ್ಷ 90 ಸಾವಿರ ಮತ್ತು ಎರಡನೇ ಬಾರಿ 4 ಮುರ್ರಾ ತಳಿ 4 ಲಕ್ಷ 20 ಸಾವಿರ ಕೊಟ್ಟು ತಂದೆ, ಅದರಲ್ಲಿ ಒಂದು ಸರಿಇರದ ಕಾರಣ ವಾಪಸ್ಸು ಕಳಿಸಿದೆ ಎಂದರು.

ಡೈರಿ ನಿರ್ಮಾಣ ವೆಚ್ಚ:

ಈ ಮುರ್ರಾ ತಳಿ 8 ಎಮ್ಮೆ ವಾಸವಾಗಲು ಕಬ್ಬಿಣದ ಬಳಸಿ ಕೊಠಡಿ ನಿರ್ಮಾಣಕ್ಕೆ 3 ಲಕ್ಷ ಖರ್ಚು ಆಗಿದೆ.

ತಂದೆ ನಾಗರಾಜ್ ಅವರು ಜಂಬುನಾಥನಿಗೆ ಓದಿದವನಾಗಿ ಏಕೆ ? ಇವೆಲ್ಲ ಓದಲಾರದವರು ಇಂತ ಕೆಲಸ ಮಾಡಬೇಕೆಂದರು. ನಿನಗೆ ಮಾಡಲಾಗುವುದಿಲ್ಲ - ನಾನು ದುಡ್ಡು ಕೊಡುತ್ತಿಲ್ಲ ಸಣ್ಣ ಹುಡುಗ ನೀನು ಎಂದರು. ಅದಕ್ಕೆ ಜಂಬುನಾಥ ದೊಡ್ಡಪ್ಪ ಸಿದ್ದೇಶ್ವರ ಮತ್ತು ಚಿಕ್ಕಪ್ಪ ಹನುಮನಗೌಡ ಅವರು ಹಣದ ಪ್ರೋತ್ಸಾಹ ಮಾಡಿದರು.

ಈ ತಳಿಯ ಎಮ್ಮೆಗೆ ಮೇವು :

3 ಎಕರೆಯಲ್ಲಿ ನೆಪಿಯಾರ್, ಸಿಓಎಫ್ಎಸ್ - 29, ಗಿನಿ ಪ್ಯಾರಾ ಮೇವಿನ ತಳಿಗಳನ್ನು ಬೆಳೆಯುತ್ತಾರೆ ಅದನ್ನು ಹಸುವಿಗೆ ನೀಡುತ್ತಾರೆ.

ಹಾಲು ಉತ್ಪಾದಕ ಹೇಗೆ :

ಎಂಟು ಮುರ್ರಾ ತಳಿಯ ಎಮ್ಮೆಗಳಿಂದ ಬೆಳಿಗ್ಗೆ ಮತ್ತು ಸಂಜೆ ಸೇರಿ ಒಟ್ಟು 60 ಲೀಟರ್ ನೀಡುತ್ತವೆ. ಒಂದು ಲೀಟರ್ ಗೆ 55 ರೂಪಾಯಿ ಸಿಗುತ್ತದೆ ಎಂದರು.
60*30 = 3300 ರೂಪಾಯಿ ದೊರೆಯುತ್ತದೆ.

30 ದಿನಗಳಲ್ಲಿ 99,600 ರೂಪಾಯಿ ಆಗುತ್ತದೆ ಅದರಲ್ಲಿ ( ಖರ್ಚು : ಕೆಲಸ ಮಾಡುವ ಇಬ್ಬರು ಕಾರ್ಮಿಕರಿಗೆ ತಿಂಗಳಿಗೆ 12,000 ಮತ್ತು 6,000 ರೂಪಾಯಿ, ಹಸುವಿನ ಆರೋಗ್ಯ, ಮೇವು, ಆಹಾರ ಇನ್ನಿತರ ಅಂಶಗಳಿಗೆ 30,000 ಸಾವಿರ ಒಟ್ಟು 48,000 ಸಾವಿರ )

99,600 - 48,000 = 51,600 ಉಳಿತಾಯ ಆಗುತ್ತೆ.
ಸರಾಸರಿಯಾಗಿ ತಿಂಗಳಿಗೆ 45,000 ಸಾವಿರದಿಂದ 50,000 ವರೆಗೆ ಉಳಿತಾಯವಾಗುತ್ತೆ ಎನ್ನುತ್ತಾರೆ ಜಂಬುನಾಥ.

ಪ್ರಸ್ತುತ ಮುರ್ರಾ ತಳಿ ಎಮ್ಮೆ ಮತ್ತು ಕರುಗಳು :

ಎಂಟು ಮುರ್ರಾ ತಳಿ ಎಮ್ಮೆ ಮತ್ತು 6 ಮುರ್ರಾ ಕರುಗಳಿವೆ ಅದರಲ್ಲಿ 5 ಹೆಣ್ಣು ಮತ್ತು ಒಂದು ಗಂಡು ಇದೆ. ಇವುಗಳನ್ನು ಪಾಪಿನಾಯಕನ ಹಳ್ಳಿಯ ರೈತ ಮುಂಗಡವಾಗಿ ಹಣ ನೀಡಿದ್ದಾರೆ. ಆರು ತಿಂಗಳವರೆಗೆ ಬೆಳಸಿದ ನಂತರ 50,000 ರೂಪಾಯಿ ಕೊಟ್ಟು ತೆಗೆದುಕೊಂಡು ಹೋಗುತ್ತಾರೆ. ಮುರ್ರಾ ತಳಿಯ ಎಮ್ಮೆಗಳ ಕರುಗಳಿಗೂ ಬೇಡಿಕೆ ಇದೆ ಎಂದ ಜಂಬುನಾಥ.

ಮುರ್ರಾ ತಳಿ ಎಮ್ಮೆಗಳ ಆರೈಕೆ ಹೇಗೆ ?

ಪ್ರಾಣಿಗಳ ಮೇಲೆ ಬಹಳ ಪ್ರೀತಿ ಇರಬೇಕು ಅದು ಆಹಾರ ಹಾಕುವದರಿಂದ, ಅವುಗಳಿಗೆ ಸ್ನಾನ ಮಾಡಿಸುವುದು, ಹಾಲು ಹಿಂಡುವುದು, ಈಜಾಡಲು ಕೆರೆಗೆ ಬೀಡುವುದು ಬಹಳ ಮುಖ್ಯವಾಗಿದೆ. ಪ್ರಾಣಿಗಳು ಸಹ ನಮ್ಮನ್ನು ಕಾಯುತ್ತಾ ಇರುತ್ತವೆ.

ಬೆಳಗಿನ ಜಾವ 3 ಗಂಟೆಯಿಂದ 6 ಗಂಟೆವರೆಗೆ ಹಾಲು ಕರೆಯಲಾಗುತ್ತದೆ. ಅದೇ ಸಮಯದಲ್ಲಿ ಮೇವು ಇನ್ನಿತರ ಆಹಾರ ನೀಡಲಾಗುತ್ತದೆ. 9 ಗಂಟೆಗೆ ಕೆರೆಗೆ ‌ಈಜಾಡಲು ಬಿಡಲಾಗುತ್ತದೆ. ಎರಡು ತಾಸು ಮಾತ್ರ, ಕೆಲ ಸಮಯದಲ್ಲಿ ಡೈರಿಯಲ್ಲಿಯೇ ಸ್ನಾನ ಮಾಡಿಸಲಾಗುತ್ತದೆ ಅವುಗಳಿಗೆ ನೀರೆಂದರೇ ಬಹಳ ಪ್ರೀತಿ.

ಮನೆಯಲ್ಲಿಯೇ ಪನ್ನಿರ್ :

ಆರು ಲೀಟರ್ ಗೆ ಒಂದು ಕೀಲೋ ಗ್ರಾಂ ಪನ್ನಿರ ತಯಾರು ಮನೆಯಲ್ಲಿಯೇ ಮಾಡತ್ತಾರೆ. ಒಂದು ಕಿಲೋಗ್ರಾಂ ಗೆ 340 ರೂಪಾಯಿ. ಅದನ್ನು ಹಂಪಿ, ಹೊಸಪೇಟೆ, ಕಮಲಾಪುರದ ಹೋಟೆಲ್ ಗಳಲ್ಲಿ ಮಾರಾಟ ಮಾಡುತ್ತಾರೆ.

ಹಾಲು ಮಾರಾಟ ಹೇಗೆ ?

ಬೆಳಿಗ್ಗೆ 20 ಲೀಟರ್ ಹಾಲು ಹೊಸಪೇಟೆಯ ಮಲ್ಲಿಗೆ ಹೋಟಲ್ ಗೆ, 15 ಲೀಟರ್ ಹಾಲು ಮಾನಸ ಹೋಟಲ್, ಸಂಜೆ ಸ್ನೇಹಿತರ ಮನೆಗೆ 10 ಲೀಟರ್ ಹಾಲು ಪ್ಯಾಕೆಟ್ ಮಾಡಿ ನೀಡೋದು, 20 ಲೀಟರ್ ಹಂಪಿಯ ಮ್ಯಾಗ್ರೋಟ್ರಿ ಹೋಟಲ್ ಗೆ ಇವರೆ ಕುದ್ದಾಗಿ ಹಾಲು ಹಾಕುತ್ತಾರೆ ಎಂದರು. ಅಥವಾ ಉಳಿದರೇ ಪನ್ನಿರ್ ಮಾಡಲಾಗುತ್ತದೆ ಎಂದರು.

ಬಹುಮುಖ ಪ್ರತಿಭೆ ಈ ಜಂಬುನಾಥ:

ಹೈನುಗಾರಿಕೆ ಮಾಡುವ ಸಮಯದಲ್ಲಿ ಹಾಲು ಕರಿಯೋದು, ಮೇವು ಕತ್ತಿರಸುವುದು, ಎಮ್ಮೆಗಳಿಗೆ ಸ್ನಾನ ಮಾಡಿಸುವುದು, ಟ್ರ್ಯಾಕ್ಟರ್ ಹೋಡಿಸುವುದು ಮತ್ತು ಅತಿಮುಖ್ಯವಾಗಿ ಪ್ರಾಣಿಗಳ ಮೇಲೆ ಪ್ರೀತಿ ಪ್ರೇಮ ಬಹಳ ಎನ್ನುವ ಮಾತನ್ನು ಈಟಿವಿ ಭಾರತ್ ನೊಂದಿಗೆ ಹಂಚಿಕೊಂಡರು.

Conclusion:ಒಟ್ಟಾರೆಯಾಗಿ ಪ್ರಾಣಿಗಳ ಮೇಲೆ ಪ್ರೀತಿ ಇದ್ದರೇ ಮಾತ್ರ ಹೈನುಗಾರಿಕೆ ಮಾಡಿ ಉತ್ತಮ ಜೀವನ ಹಾಗೇ ಲಾಭವನ್ನು ಪಡೆಯಬಹುದು ಎನ್ನುವುದಕ್ಕೆ ಕಮಲಾಪುರದ ಯುವಕ ಜಂಬುನಾಥ ಪ್ರತ್ಯಕ್ಷ ಸಾಕ್ಷಿ.
Last Updated : Apr 7, 2019, 9:28 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.