ಬಳ್ಳಾರಿ: ಐತಿಹಾಸಿಕ ಹಂಪಿಯ ವಿರೂಪಾಕ್ಷೇಶ್ವರ ರಥ ಬೀದಿಯಲ್ಲಿ 6ನೇ ವರ್ಷದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸುಮಾರು 50 ರಷ್ಟು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪಾಲ್ಗೊಂಡು ಅತಿ ಮುಖ್ಯ ಪ್ರಾಣಾಯಾಮ ಮತ್ತು ಸೂರ್ಯ ನಮಸ್ಕಾರ ಮಾಡಿದರು.
ಈ ವೇಳೆ ಯೋಗ ಶಿಕ್ಷಕಿ ರಂಜಾನ್.ಬಿ ಮಾತನಾಡಿ, ಸಂಜು ಆರ್ಟ್ಸ್ ಮತ್ತು ಹಂಪಿ ಯೋಗ ಪಿರಮಿಡ್ ನೇತೃತ್ವದಲ್ಲಿ 6 ನೇ ವರ್ಷದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ನಾವಿಂದು ವಿರೂಪಾಕ್ಷೇಶ್ವರ ರಥ ಬೀದಿಯಲ್ಲಿ ಯೋಗಾಭ್ಯಾಸ ಮಾಡಿದ್ದೇವೆ. ಎಲ್ಲರಿಗೂ ಯೋಗ ದಿನಾಚರಣೆ ಶುಭಾಶಯಗಳು ಎಂದರು.