ಬಳ್ಳಾರಿ: ಜಿಲ್ಲೆಯ ಹೊಸಪೇಟೆ ತಾಲೂಕಿನ ನಲ್ಲಾಪುರ ಗ್ರಾಮದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಬಾಲಕ ಗಾದೆಗಳನ್ನು ನಿರರ್ಗಳವಾಗಿ ಹೇಳುವ ಮೂಲಕ ಗಮನ ಸೆಳೆದಿದ್ದಾನೆ.
ನಲ್ಲಾಪುರದ ಸರ್ಕಾರಿ ಶಾಲೆಯಲ್ಲಿ 5ನೇ ತರಗತಿ ವ್ಯಾಸಂಗ ಮಾಡುತ್ತಿರುವ ಕೆ. ಎರಿಲಿಂಗ ಗಾದೆಮಾತುಗಳನ್ನು ಅರಳು ಹುರಿದಂತೆ ಪಟಪಟನೆ ಹೇಳಬಲ್ಲ. ಈ ತನ ಪ್ರತಿಭೆ ಮತ್ತು ಆಸಕ್ತಿ ಗುರುತಿಸಿದ ಶಿಕ್ಷಕ ವೈ.ಎಂ.ಡಿ ಸಂತೋಷ್, ಅಕ್ಷರಮಾಲೆಗಳಿಂದ ಗಾದೆ ಮಾತುಗಳನ್ನು ಹೇಳಿಸುವ ಪ್ರಯತ್ನ ಮಾಡಿಸಿದ್ದಾರೆ. ಕನ್ನಡ ವರ್ಣಮಾಲೆ 'ಅ' ಇಂದ 'ಳ' ವರೆಗೆ ಸರಾಗವಾಗಿ ಹೇಳುವ ಗಾದೆ ಮಾತುಗಳನ್ನು ಹೇಳುವ ಬಾಲಕವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.