ETV Bharat / state

ಬಳ್ಳಾರಿಯಲ್ಲಿ ಸ್ಕಿಡ್ ಆಗಿ ಬಿದ್ದ ಮಹಿಳಾ ಕಾನ್​ಸ್ಟೇಬಲ್​ ಬೈಕ್ : ಲಾರಿ ಹರಿದು ಕಾಲು ಕಟ್​

ಬಳ್ಳಾರಿ ನಗರದ ವಾಲ್ಮೀಕಿ ವೃತ್ತದಲ್ಲಿ ಮಹಿಳಾ ಠಾಣೆಯ ಹೆಡ್​ ಕಾನ್​ಸ್ಟೇಬಲ್ ಗೌಸಿಯಾ ಅವರು ಡಿವೈಎಸ್ಪಿ ಕಚೇರಿಗೆ ಟಪಾಲು ಕೊಟ್ಟು ವಾಪಸ್​ ಬರುವ ವೇಳೆ ಅವರ ಬೈಕ್ ಸ್ಕಿಡ್ ಆಗಿ ಜಾರಿ ಬಿದ್ದಿದ್ದಾರೆ. ಆಗ ಹಿಂಬದಿಯಿಂದ ಬಂದ ಲಾರಿ ಕಾಲಿನ ಮೇಲೆ ಹರಿದ ಪರಿಣಾಮ ಬಲಗಾಲು ತುಂಡಾಗಿದೆ. ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯಲಾಗಿದೆ.

bellary
ಅಪಘಾತದಲ್ಲಿ ಕಾಲು ಮುರಿತ
author img

By

Published : Dec 24, 2020, 10:49 AM IST

ಬಳ್ಳಾರಿ: ಮಹಿಳಾ ಠಾಣೆಯ ಹೆಡ್ ಕಾನ್​ಸ್ಟೇಬಲ್ ಗೌಸಿಯಾ ಎಂಬುವರು ಬೈಕ್​ನಲ್ಲಿ ಹೋಗುತ್ತಿದ್ದಾಗ ಜಾರಿ ಬಿದ್ದಾಗ, ಅವರ ಕಾಲಿನ ಮೇಲೆ ಲಾರಿ ಹರಿದಿದೆ.

ನಗರದ ವಾಲ್ಮೀಕಿ ವೃತ್ತದಲ್ಲಿ (ಎಸ್.ಪಿ ಸರ್ಕಲ್‌) ಮಹಿಳಾ ಠಾಣೆಯ ಹೆಡ್​ ಕಾನ್​ಸ್ಟೇಬಲ್ ಗೌಸಿಯಾ ಅವರು ಡಿವೈಎಸ್ಪಿ ಕಚೇರಿಗೆ ಟಪಾಲು ಕೊಟ್ಟು, ಮಹಿಳಾ ಠಾಣೆಗೆ ವಾಪಸ್​ ಬರುವಾಗ ರಸ್ತೆಯಲ್ಲಿ ಮಣ್ಣು ಇರುವುದರಿಂದಾಗಿ ಬೈಕ್ ಸ್ಕಿಡ್ ಆಗಿ ಬಿದ್ದಿದೆ. ಅದೇ ಸಮಯದಲ್ಲಿ ಹಿಂಬದಿಯಿಂದ ಬಂದ ಲಾರಿಯೊಂದು ಗೌಸಿಯಾ ಅವರ ಬಲಗಾಲಿನ ಮೇಲೆ ಹರಿದಿದೆ. ಹೀಗಾಗಿ ಬಲಗಾಲು ತುಂಡಾಗಿದ್ದು, ಅವರನ್ನು ವಿಮ್ಸ್​​ಗೆ ದಾಖಲಿಸಿದ್ದಾರೆ. ಆದರೆ ತೀವ್ರ ರಕ್ತಸ್ರಾವ ಆಗಿದ್ದರಿಂದಾಗಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದರು.

ನಗರದ ಮೋತಿ ವೃತ್ತ, ಒಂದನೇ ರೈಲ್ವೆ ಗೇಟ್ ಮೇಲ್ ಸೇತುವೆ, ಎಸ್.ಪಿ. ಸರ್ಕಲ್, ಗೃಹ ರಕ್ಷಕದಳದ ಕಚೇರಿ‌ ಮುಂಭಾಗ, ಸುಧಾಕ್ರಾಸ್ ರಸ್ತೆಗಳಲ್ಲಿ ತಗ್ಗು, ಗುಂಡಿಗಳಿಂದ ಕೂಡಿದೆ. ತಗ್ಗುಗಳಲ್ಲಿ ಕಲ್ಲು, ಮಣ್ಣನ್ನು ಹಾಕಿದ್ದಾರೆ. ಇದರಿಂದಾಗಿ ರಸ್ತೆಗಳಲ್ಲಿ ಸಂಚಾರ ಮಾಡುವ ಬೈಕ್​​ಗಳು, ಆಟೋ, ಸೈಕಲ್ ಸವಾರಿಗೆ ತೊಂದರೆಯಾಗಿ ಜಾರಿ ಬಿದ್ದು ಗಂಭೀರ ಗಾಯಗಳನ್ನು ಮಾಡಿಕೊಂಡಿದ್ದಾರೆ. ಕೆಲವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಓದಿ: ಮದುವೆಗೆ ನಿರಾಕರಿಸಿದ ಪ್ರಿಯಕರ : ಬೆಂಕಿ ಹಚ್ಚಿಕೊಂಡು ಯುವತಿ ಆತ್ಮಹತ್ಯೆಗೆ ಯತ್ನ

ಒಟ್ಟಾರೆಯಾಗಿ ಜಿಲ್ಲಾಡಳಿತ ಬಳ್ಳಾರಿ ನಗರದಲ್ಲಿ ರಸ್ತೆಗಳನ್ನು ಸರಿ‌ಪಡಿಸಬೇಕಾಗಿದೆ. ಜನರು ಸಂಚಾರ ನಿಯಮಗಳ ಉಲ್ಲಂಘನೆ ಮಾಡಿದರೆ ದಂಡ ಹಾಕುವ ಜಿಲ್ಲಾಡಳಿತ, ರಸ್ತೆಗಳ ಬಗ್ಗೆ ಕಾಳಜಿ ವಹಿಸಿ, ಜನರ ಪ್ರಾಣವನ್ನು ಉಳಿಸಬೇಕಾಗಿದೆ. ನಗರದ ಸಂಚಾರಿ ಠಾಣೆಯ ಪೊಲೀಸ್​ ಅಧಿಕಾರಿಗಳು, ಸಿಬ್ಬಂದಿ ಭೇಟಿ ‌ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.