ಹೊಸಪೇಟೆ: ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಶಿವ ಮತ್ತು ಪಾರ್ವತಿ ಕಲ್ಯಾಣ ಮಹೋತ್ಸವ ಜರುಗಲಿದ್ದು, ಗ್ರಾಮದ ಹೆಣ್ಣು ಮಕ್ಕಳು ಕಲ್ಯಾಣೋತ್ಸವ ನಿಮಿತ್ತ ಕೈಯಲ್ಲಿ ಮೆಹೆಂದಿ ಬಿಡಿಸಿಕೊಂಡು ಸಂಭ್ರಮಿಸುತ್ತಿದ್ದಾರೆ.
ಪಟೇಲ್ ನಗರದ 2ನೇ ಕ್ರಾಸ್ನಲ್ಲಿ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಶಿವ ಪಾರ್ವತಿ ಕಲ್ಯಾಣ ಮಹೋತ್ಸವ ಕಾರ್ಯಕ್ರಮದ ನಿಮಿತ್ತ ಗ್ರಾಮದ ಹೆಣ್ಣು ಮಕ್ಕಳು ಮೆಹೆಂದಿ ಹಚ್ಚಿಕೊಳ್ಳುವುದು ಮತ್ತು ಹೂವುಗಳನ್ನು ಪೋಣಿಸುವುದು ಹಾಗೂ ಶಿವ ಮತ್ತು ಪಾರ್ವತಿ ಪೂಜೆಗೆ ಸಿದ್ಧತೆಗಳನ್ನು ಮಾಡುವುದೇ ವಿಶೇಷವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಶಿವ ಮತ್ತು ಪಾರ್ವತಿಯ ಕಲ್ಯಾಣೋತ್ಸವ ಕಾರ್ಯಕ್ರಮಕ್ಕೆ ಹಂಪಿ ವಿರುಪಾಕ್ಷ ದೇವಾಲಯದ ಮುಖ್ಯ ಅರ್ಚಕರಾದ ಶ್ರೀನಾಥ ಅವರು ಆಗಮಿಸಿ ವಿಶೇಷ ಪೂಜೆ ನೇರವೇರಿಸಲಿದ್ದಾರೆ. ಶಿವನಿಗೂ ಮತ್ತು ಪಾರ್ವತಿಗೂ ಮದುವೆಯನ್ನು ಮಾಡಿಸಲಾಗುತ್ತದೆ.
ದೇವಸ್ಥಾನದಲ್ಲಿ ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ದೇವಾಲಯದಲ್ಲಿ ಅಮವಾಸ್ಯೆ ಮತ್ತು ಹುಣ್ಣಿಮೆಯಂದು ವಿಶೇಷ ಪೂಜೆ ಮಾಡಲಾಗುತ್ತದೆ. ಈ ಕಲ್ಯಾಣೋತ್ಸವ ಕಾರ್ಯಕ್ರಮವು ಮಂಗಳವಾರ ಇಂದು ಮಧ್ಯಾಹ್ನದವರೆಗೆ ನಡೆಯಲಿದ್ದು, ಸಂಜೆ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಗುವುದು ಎಂದು ಸ್ಥಳೀಯ ನಾಗೇಂದ್ರ ಎಂಬುವರು ಮಾಹಿತಿ ನೀಡಿದರು.