ETV Bharat / state

ನಿಜಾಮುದ್ದೀನ್‌ ಸಭೆಗೆ ತೆರಳಿದ್ದ ಆರು ಮಂದಿ ಪತ್ತೆ.. ಬಳ್ಳಾರಿಯಲ್ಲಿ ಇನ್ನೂ ಆರು ಮಂದಿಗಾಗಿ ಹುಡುಕಾಟ.. - bellary news

ನಿನ್ನೆ ಓರ್ವ ವ್ಯಕ್ತಿ ಸ್ವಯಂ ಪ್ರೇರಣೆಯಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ. ಈ ದಿನ ಮತ್ತೆ ಐದು ಮಂದಿಯನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ಜಿಲ್ಲಾಸ್ಪತ್ರೆಗೆ ಕರೆ ತಂದಿದ್ದಾರೆ.

ಬಳ್ಳಾರಿಯಲ್ಲಿ ಆರುಮಂದಿ ಕೊರೊನಾ ಸೋಂಕಿತರ ಪತ್ತೆ

author img

By

Published : Apr 1, 2020, 1:45 PM IST

ಬಳ್ಳಾರಿ: ದೆಹಲಿಯ ನಿಜಾಮುದ್ದೀನ್ ಜಮಾತ್ ಮಸೀದಿಯಲ್ಲಿನ ಧಾರ್ಮಿಕ ಕಾರ್ಯಕ್ರಮದಲ್ಲಿ ಗಣಿನಾಡಿನ 12 ಮಂದಿ ಭಾಗಿಯಾಗಿದ್ದರು. ಆ ಪೈಕಿ ಆರು ಮಂದಿಯನ್ನ ಜಿಲ್ಲಾಸ್ಪತ್ರೆಯಲ್ಲಿನ ಐಸೋಲೇಷನ್​ಗೆ ಜಿಲ್ಲಾಡಳಿತ ಕರೆ ತಂದಿದೆ.

ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯ ಸಹಯೋಗದಲ್ಲಿ ತೀವ್ರ ಕಾರ್ಯಾಚರಣೆ ನಡೆಸಿ 12ರಲ್ಲಿ ಆರು ಮಂದಿಯನ್ನ ಪತ್ತೆ ಹಚ್ಚುವ ಕಾರ್ಯದಲ್ಲಿ ಯಶಸ್ವಿಯಾಗಿದೆ. ಮಾರ್ಚ್‌ 10ರಂದು ಧಾರ್ಮಿಕ ಕಾರ್ಯಕ್ರಮದಲ್ಲಿ ಗಣಿನಾಡು ಬಳ್ಳಾರಿ ಜಿಲ್ಲೆಯ 12 ಮಂದಿ ಭಾಗಿಯಾಗಿದ್ದರು. ನಿನ್ನೆ ಓರ್ವ ವ್ಯಕ್ತಿ ಸ್ವಯಂ ಪ್ರೇರಣೆಯಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ. ಈ ದಿನ ಮತ್ತೆ ಐದು ಮಂದಿಯನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ಜಿಲ್ಲಾಸ್ಪತ್ರೆಗೆ ಕರೆ ತಂದಿದ್ದಾರೆ.

ಸೋಮವಾರ ರಾತ್ರಿಯಿಡೀ ಹುಡುಕಾಟ ನಡೆಸಿ 5 ಮಂದಿಯನ್ನು ಕರೆ ತಂದಿದ್ದಾರೆ. ಈವರೆಗೆ ಒಟ್ಟು 6 ಮಂದಿಯ ಗುರುತು ಪತ್ತೆಯಾಗಿದೆ. ಇನ್ನೂ 6 ಮಂದಿಯನ್ನ ಜಿಲ್ಲಾಡಳಿತ ಪತ್ತೆಹಚ್ಚಲು ಮುಂದಾಗಿದೆ. ದೆಹಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಲ್ಲರೂ ಸ್ವಯಂ ಪ್ರೇರಣೆಯಿಂದ ಜಿಲ್ಲಾಸ್ಪತ್ರೆಗೆ ಆಗಮಿಸಿ ಟೆಸ್ಟ್ ಮಾಡಿಸಿಕೊಳ್ಳಿ ಎಂದು ನಿನ್ನೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ಮನವಿ ಮಾಡಿದ್ದರು. ಆದರೆ, ಯಾರೂ ಬಾರದ ಕಾರಣ ಜಿಲ್ಲಾಡಳಿತ ಈ‌ ‌ನಿರ್ಧಾರಕ್ಕೆ ಬಂದಿದೆ‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.