ಬಳ್ಳಾರಿ: ರಾಜ್ಯದಲ್ಲಿ ಉಂಟಾದ ನೆರೆ ಹಾವಳಿಗೆ ಬಳ್ಳಾರಿ ಜಿಲ್ಲೆಯಿಂದ 1 ಸಾವಿರ ಕಿಟ್ಗಳನ್ನು ಸಿದ್ಧಪಡಿಸಿ ನೀಡಲಾಗಿದೆ. ಇಲ್ಲಿನ ನಿಮಗಾಗಿ ನಾವು ಸಂಸ್ಥೆಯು 35 ಅಗತ್ಯ ವಸ್ತುಗಳಿರುವ ಸಾವಿರ ಕಿಟ್ಗಳನ್ನು ತಯಾರಿಸಿದೆ.
ಜಿಲ್ಲೆಯ ಸಿಗ್ನಲ್ಗಳಲ್ಲಿ, ಪ್ರಮುಖ ಬೀದಿಗಳಲ್ಲಿ ಹಾಗೂ ಮೈದಾನ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಬಾಕ್ಸ್ ಹಿಡಿದು ಹಣ ಸಂಗ್ರಹಿಸಿ, ಸಂತ್ರಸ್ತರಿಗೆ ನೆರವು ನೀಡಲಾಗಿದೆ. ಜೊತೆಗೆ 5 ಸಾವಿರ ಹೊಸ ಸೀರೆಗಳನ್ನೂ ಈಗಾಗಲೇ ನಿಮಗಾಗಿ ನಾವು ಸಂಸ್ಥೆ ವಿತರಿಸಿದೆ.