ETV Bharat / state

ಅಂಜನಾದ್ರಿ ಬೆಟ್ಟದಿಂದ ರಾಮಮಂದಿರಕ್ಕೆ ಶಿಲೆ ತೆಗೆದುಕೊಂಡು ಹೋಗುತ್ತಿದ್ದೇವೆ: ಮುತಾಲಿಕ್ - Srirama Sena chief Muthalik

ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣದ ಕಾರ್ಯ ಆಗಸ್ಟ್ 05, 2020 ರಂದು ಜರುಗಲಿದೆ. ಅಲ್ಲಿ ಕರ್ನಾಟಕದ ಹೆಸರು ಉಳಿಯಲು ಅಂಜನಾದ್ರಿಯಿಂದ ಒಂದು ಶಿಲೆಯನ್ನುತೆಗೆದುಕೊಂಡು ಹೋಗುತ್ತಿದ್ದೇವೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಮುತಾಲಿಕ್ ತಿಳಿಸಿದ್ದಾರೆ.

Srirama Sena chief Muthalik
ಶ್ರೀರಾಮ ಸೇನಾ ಮುಖ್ಯಸ್ಥ ಮುತಾಲಿಕ್
author img

By

Published : Jul 30, 2020, 12:07 AM IST

ಬಳ್ಳಾರಿ: ಶ್ರೀರಾಮ ಮಂದಿರ ನಿರ್ಮಾಣ ಹಿನ್ನೆಲೆ ಅಲ್ಲಿ ನಮ್ಮ ಕರ್ನಾಟಕದ ಹೆಸರು ಉಳಿಯುವ ಹಾಗೆ ಮಾಡಲು ಅಂಜನಾದ್ರಿಯಿಂದ ಒಂದು ಶಿಲೆಯನ್ನು ತೆಗೆದುಕೊಂಡು ಹೋಗುತ್ತಿದ್ದೇವೆ ಎಂದು ಶ್ರೀರಾಮ ಸೇನಾ ಮುಖ್ಯಸ್ಥ ಮುತಾಲಿಕ್ ತಿಳಿಸಿದ್ದಾರೆ.

ಶ್ರೀರಾಮ ಸೇನೆ ಮುಖ್ಯಸ್ಥ ಮುತಾಲಿಕ್

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ದೇವಸ್ಥಾನದಲ್ಲಿ ಮಾತನಾಡಿದ ಅವರು, ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣದ ಕಾರ್ಯ ಆಗಸ್ಟ್ 05, 2020 ರಂದು ಜರುಗಲಿದ್ದು ಈ ಐತಿಹಾಸಿಕ ಕ್ಷಣಕ್ಕೆ ಕರ್ನಾಟಕವು ಅಭೂತಪೂರ್ವ ಸಾಕ್ಷಿ ಆಗಲಿದೆ. ಕಾರಣ ರಾಮನ ಬಂಟ, ರಾಮದೂತ ಹನುಮಾನ್ ಜನ್ಮ ಸ್ಥಳ ಅಂಜನಾದ್ರಿ ಬೆಟ್ಟದಿಂದ ಒಂದು ಶಿಲೆಯನ್ನು ಬೆಳ್ಳಿ ಲೇಪನ ಕವಚ ಮಾಡಿಸಿ ಅಯೋಧ್ಯ ವಸ್ತು ಸಂಗ್ರಹಾಲಯದಲ್ಲಿ ಪ್ರತಿಷ್ಠಾಪಿಸಲು ಭರದ ಸಿದ್ಧತೆ ನಡೆಯುತ್ತಿದೆ ಎಂದು ಅವರು ತಿಳಿಸಿದರು.

ಅಂಜನಾದ್ರಿಯಿಂದ(ಹೊಸಪೇಟೆ) ಅಯೋಧ್ಯೆಯ ಶ್ರೀರಾಮ ಮಂದಿರದವರೆಗೆ ರೈಲು ಬಿಡುವ ವ್ಯವಸ್ಥೆ ಮಾಡಿ ಎಂದು ಕೇಂದ್ರ ಸರ್ಕಾರದ ಕೇಂದ್ರ ರೈಲ್ವೆ ಸಚಿವರಲ್ಲಿ ಸಹ ಮನವಿ ಮಾಡುತ್ತೇನೆ ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.