ಹೊಸಪೇಟೆ (ಬಳ್ಳಾರಿ): ಪಂಚಮಸಾಲಿ ಸಮುದಾಯದ ಶಾಸಕರು ಹಾಗೂ ಪೀಠದವರು ಬೀದಿಗಿಳಿದು ಪಾದಯಾತ್ರೆ ಮಾಡಲಿ ಎಂದು ಪಂಚಮಸಾಲಿ ಮುಖಂಡ ಹಾಗೂ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಆಗ್ರಹಿಸಿದ್ದಾರೆ.
ಬಳ್ಳಾರಿ ಜಿಲ್ಲೆಯಲ್ಲಿ ಹಗರಿಬೊಮ್ಮನಹಳ್ಳಿ ಮೀಸಲಾತಿ ನೀಡುವಂತೆ ಆಗ್ರಹಿಸಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೀಸಲಾತಿಯನ್ನು ನೀಡುವವರೆಗೂ ಬಿಡುವುದಿಲ್ಲ. ಪೂಜ್ಯರು 250 ಕಿ.ಮೀ ಪಾದಯಾತ್ರೆ ಮಾಡಿ ಬಂದಿದ್ದಾರೆ.
ಯಡಿಯೂರಪ್ಪ ಅವರಿಗೆ ಕರುಣೆ ಬರುತ್ತಿಲ್ಲವೇ?. ಮಹಿಳೆಯರು, ಮಕ್ಕಳು ಬಿಸಿಲಿನಲ್ಲಿ ಪಾದಯಾತ್ರೆಯನ್ನು ಮಾಡಿಕೊಂಡು ಬರುತ್ತಿದ್ದಾರೆ. ಮೀಸಲಾತಿಯನ್ನು ನೀಡುವುದಕ್ಕೆ ಏನು ತೊಂದರೆ ಎಂದು ಆಕ್ರೋಶ ಹೊರ ಹಾಕಿದರು.
ಬಳಿಕ ಮಾತನಾಡಿದ ಮಾಜಿ ಶಾಸಕ ಶಿವಶಂಕರ್, ಪೀಠ ಇರುವುದು ಯಾರೋ ಒಬ್ಬರನ್ನು ಮಂತ್ರಿ ಮಾಡುವುದಕ್ಕೆ ಅಲ್ಲ, ಸಮಾಜದ ಬಂಧುಗಳಿಗೆ ಸವಲತ್ತನ್ನು ನೀಡಲು ಪೀಠ ಇರಬೇಕು ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ನನ್ನ ಮುಗಿಸಲು ಅಕ್ರಮ ಆಸ್ತಿಗಾಗಿ ಹುಡುಕಾಡುತ್ತಿದ್ದಾರೆ: ಯತ್ನಾಳ್ ವಾಗ್ದಾಳಿ