ETV Bharat / state

ಎಸ್​ಎಸ್​ಎಲ್​ಸಿ ಪರೀಕ್ಷಾ ಕೇಂದ್ರಕ್ಕೆ ಶಾಸಕ ಭೇಟಿ: ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬಿದ ಸೋಮಶೇಖರರೆಡ್ಡಿ - ಬಳ್ಳಾರಿಯಲ್ಲಿ ಎಸ್​​ಎಸ್​ಎಲ್​ಸಿ ಪರೀಕ್ಷೆ

ಎಸ್​​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಕೇವಲ ಉಡುಪಿ, ಮಂಗಳೂರು, ಮೈಸೂರು, ಶಿವಮೊಗ್ಗ ಸೇರಿದಂತೆ ಇನ್ನಿತರೆ ದಕ್ಷಿಣ ಕರ್ನಾಟಕ ಭಾಗದವರೇ ಮೊದಲನೆಯ ಸ್ಥಾನದಲ್ಲಿ ಬರುತ್ತಾರೆ. ನೀವು ಚೆನ್ನಾಗಿ ಓದಿದ್ದೀರಿ. ಡಿಸ್ಟಿಂಕ್ಷನ್ ಬರುತ್ತೀರಿ ಎಂಬ ಆಶಾಭಾವನೆ ನನ್ನಲ್ಲಿದೆ ಎಂದು ಶಾಸಕ ಗಾಲಿ ಸೋಮಶೇಖರರೆಡ್ಡಿ ಬಳ್ಳಾರಿ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು.

MLA Somashekhara Reddy visits SSLC Examination Center at bellary
ಗಾಲಿ ಸೋಮಶೇಖರರೆಡ್ಡಿ
author img

By

Published : Jun 19, 2020, 1:55 PM IST

ಬಳ್ಳಾರಿ: ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿಗಿಂದು ಶಾಸಕ ಗಾಲಿ ಸೋಮಶೇಖರರೆಡ್ಡಿ ಭೇಟಿ ನೀಡಿ ಎಸ್​​ಎಸ್​ಎಲ್​ಸಿ ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬಿದರು.

ಕಾಲೇಜಿನ ಆವರಣಕ್ಕೆ ಆಗಮಿಸಿದ ಶಾಸಕರನ್ನು ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರು ಆತ್ಮೀಯವಾಗಿ ಸ್ವಾಗತಿಸಿದ್ರು. ಬಳಿಕ, ಎಸ್​​ಎಸ್​ಎಲ್​ಸಿ ವಿದ್ಯಾರ್ಥಿಗಳಿಗೆ ಸ್ಕ್ರೀನಿಂಗ್ ಮಾಡುವ ಮುಖೇನ ಹ್ಯಾಂಡ್ ಸ್ಯಾನಿಟೈಸರ್​ನ್ನು ಕಡ್ಡಾಯವಾಗಿ ಬಳಸುವಂತೆ ಜಾಗೃತಿ ಮೂಡಿಸಿದರು.

ಎಸ್​ಎಸ್​ಎಲ್​ಸಿ ಪರೀಕ್ಷಾ ಕೇಂದ್ರಕ್ಕೆ ಶಾಸಕ ಗಾಲಿ ಸೋಮಶೇಖರರೆಡ್ಡಿ ಭೇಟಿ
ನಮ್ಮ ಜಿಲ್ಲೆ ಹತ್ತನೇ ಸ್ಥಾನದೊಳಗೆ ಬರಲು ಶ್ರಮಿಸಿ: ಈ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ಶಾಸಕರು, ಎಸ್​​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಕೇವಲ ಉಡುಪಿ, ಮಂಗಳೂರು, ಮೈಸೂರು, ಶಿವಮೊಗ್ಗ ಸೇರಿದಂತೆ ಇನ್ನಿತರೆ ದಕ್ಷಿಣ ಕರ್ನಾಟಕ ಭಾಗದವರೇ ಮೊದಲನೆಯ ಸ್ಥಾನದಲ್ಲಿ ಬರುತ್ತಾರೆ. ನೀವು ಚೆನ್ನಾಗಿ ಓದಿದ್ದೀರಿ. ಡಿಸ್ಟಿಂಕ್ಷನ್ ಬರುತ್ತೀರಿ ಎಂಬ ಆಶಾಭಾವನೆ ನನ್ನಲ್ಲಿದೆ. ಹೀಗಾಗಿ, ಬಳ್ಳಾರಿ‌ ಜಿಲ್ಲೆಗೆ ಒಳ್ಳೆಯ ಹೆಸರು ತನ್ನಿ. ಪರೀಕ್ಷೆಯನ್ನ ಸಮರ್ಥವಾಗಿ ಎದುರಿಸಿ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.