ಬಳ್ಳಾರಿ: ಜಿಲ್ಲೆಯ ತೋರಣಗಲ್ಲಿನ ವಿದ್ಯಾನಗರದ ಜೆಎಸ್ಡಬ್ಲ್ಯು ಸ್ಟೀಲ್ಸ್ ಉತ್ಪಾದನಾ ಘಟಕದಲ್ಲಿ ಫ್ಯಾನ್ ಬಿಚ್ಚಿಕೊಂಡು ಬಿದ್ದ ಪರಿಣಾಮ ಕಾರ್ಮಿಕ ಮೃತಪಟ್ಟಿರುವ ಘಟನೆ ನಡೆದಿದೆ.
ಜೀತೆಂದ್ರ ಸಿಂಗ್ ಮೃತ ದುರ್ದೈವಿ. ಫ್ಯಾನ್ ಬಿದ್ದಿದ್ದರಿಂದ ಕಬ್ಬಿಣದ ಸರಳುಗಳು ಈತನಿಗೆ ಚುಚ್ಚಿಕೊಂಡು ಗಂಭೀರ ಗಾಯಗೊಂಡಿದ್ದ. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.
ಈ ಸಂಬಂಧ ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.