ಹೊಸಪೇಟೆ: ತಾಲೂಕಿನ ಕಮಲಾಪುರ ಪಟ್ಟಣದ 17ನೇ ಬಡಾವಣೆಯಲ್ಲಿರುವ ಚರ್ಚ್‌ನಲ್ಲಿರುವ ಯೇಸುವಿನ ವಿಗ್ರಹವನ್ನು ಕಿಡಿಗೇಡಿಗಳು ಭಗ್ನಗೊಳಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಮಲಾಪುರದ ಚರ್ಚ್‌ನಲ್ಲಿರುವ ಯೇಸುವಿನ ವಿಗ್ರಹದ ತಲೆಯ ಭಾಗವನ್ನು ಧ್ವಂಸಗೊಳಿಸಲಾಗಿದೆ. ಕ್ರೈಸ್ತ ಧರ್ಮೀಯರು ಯೇಸುವಿನ ಮೂರ್ತಿ ಭಗ್ನಗೊಂಡಿರುವುದಕ್ಕೆ ಆತಂಕಗೊಂಡಿದ್ದಾರೆ. ಸ್ಥಳಕ್ಕೆ ಕಮಲಾಪುರದ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.