ವಿಜಯನಗರ: ಹೊಸಪೇಟೆಯಲ್ಲಿ ದೇಶದ ಅತಿ ಎತ್ತರದ ಧ್ವಜಸ್ತಂಭ ಸ್ಥಾಪಿಸುವ ಕೆಲಸ ಶನಿವಾರ ಸಂಜೆಯಿಂದ ಶುರುವಾಗಿದೆ. 405 ಅಡಿ ಎತ್ತರದ ಧ್ವಜಸ್ತಂಭ ಇದಾಗಿದೆ. ಮಹಾರಾಷ್ಟ್ರದಿಂದ ಪರಿಕರಗಳನ್ನು ಹೊತ್ತು ಬಂದ ವಾಹನಗಳಿಗೆ ಸ್ಥಳೀಯರು ಅದ್ಧೂರಿ ಸ್ವಾಗತ ನೀಡಿದರು.
ರಾಜ್ಯ ಪ್ರವಾಸೋದ್ಯಮ ಇಲಾಖೆ ವತಿಯಿಂದ ಧ್ವಜಸ್ತಂಭ ಸ್ಥಾಪನೆ ಕಾಮಗಾರಿ ಹೊಸಪೇಟೆಯ ಪುನೀತ್ ರಾಜ್‌ಕುಮಾರ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಲಾರಿಯಲ್ಲಿ ಬಂದ ಕಬ್ಬಿಣದ ಕಂಬಗಳನ್ನು ಶನಿವಾರ ಬೈಕ್ ಸವಾರರು ಭವ್ಯ ಮೆರವಣಿಗೆಯ ಮೂಲಕ ಬರಮಾಡಿಕೊಂಡರು.
ರಾತ್ರಿ ವೇಳೆ ಧ್ವಜಸ್ತಂಭ ಸ್ಥಾಪನೆ ಕಟ್ಟೆಗೆ ಪೂಜೆ ನೆರವೇರಿಸಿ, ಧ್ವಜಸ್ತಂಭ ಜೋಡಿಸುವ ಕೆಲಸ ಆರಂಭಿಸಲಾಯಿತು. ವಿವಿಧ ಇಲಾಖೆಯ ಅಧಿಕಾರಿಗಳು ಸೇರಿದಂತೆ ಇತರರು ಭಾಗಿಯಾಗಿದ್ದರು. ಸ್ತಂಭದ ಒಂದು ಭಾಗ ಪ್ರತಿಷ್ಠಾಪನೆ ನಿನ್ನೆ ನಡೆಯಿತು.
ಇದನ್ನೂ ಓದಿ: ಹರ್ ಘರ್ ತಿರಂಗಾ: ಬಾಗಲಕೋಟೆ ಮಹಿಳೆಯರಿಂದ ರಾಷ್ಟ್ರಧ್ವಜ ನಿರ್ಮಾಣ ಕಾರ್ಯ