ಹೊಸಪೇಟೆ: ಸರ್ಕಾರ ರಚನೆ ಕಾರಣರಾದವರಿಗೆ ಸಚಿವ ಸ್ಥಾನ ಸಿಗಬಹುದು. ಯಾಕೆಂದರೆ ಅವರಿಗೆ ಬಿ.ಎಸ್.ಯಡಿಯೂರಪ್ಪ ಈಗಾಗಲೇ ಮಾತು ಹಾಗೂ ಆಶ್ವಾಸನೆ ನೀಡಿದ್ದಾರೆ ಎಂದು ಅರಣ್ಯ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಹೇಳಿದರು.
ಇಲ್ಲಿನ ಪಟೇಲನಗರದಲ್ಲಿರುವ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಅವರು ಕೊಟ್ಟ ಮಾತಿಗೆ ತಕ್ಕಂತೆ ನಡೆದುಕೊಂಡಿದ್ದಾರೆ. ಇದಕ್ಕೆ ವಿಜಯನಗರವನ್ನು ನೂತನ ಜಿಲ್ಲೆಗೆ ಮಾಡಿರುವುದೇ ಉತ್ತಮ ಉದಾಹರಣೆಯಾಗಿದೆ. ಬಹಿರಂಗವಾಗಿ ವಿಜಯನಗರ ಜಿಲ್ಲೆಯ ಕುರಿತು ಹೇಳಿಕೆಯನ್ನು ನೀಡಿರಲಿಲ್ಲ. ಆದರೂ ಸಹ ಜಿಲ್ಲೆ ಘೋಷಣೆ ಮಾಡಿದರು ಎಂದರು.
ಸಚಿವ ಸಂಪುಟ ವಿಸ್ತರಣೆಗೆ 3+4 ಸೂತ್ರ..ಆಕಾಂಕ್ಷಿಗಳಿಂದ ಹೆಚ್ಚಿದ ಲಾಬಿ!
ಅದರಂತೆ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನವನ್ನು ಸಹ ನೀಡಲಿದ್ದಾರೆ. ಸಂಪುಟ ರಚನೆ ಮಾಡುತ್ತಾರೊ ಅಥವಾ ವಿಸ್ತರಣೆ ಮಾಡುತ್ತಾರೋ ಎಂಬುದು ತಿಳಿದಿಲ್ಲ. ಸಚಿವ ಸ್ಥಾನ ತ್ಯಜಿಸಲು ಈಗಲು ಸಿದ್ಧ ಎಂದು ನಗುತ್ತಾ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.