ಬಳ್ಳಾರಿ: ಶಾಸಕ ಗಾಲಿ ಸೋಮಶೇಖರ ರೆಡ್ಡಿ ಸುಮಾರು 250 ಕುಟುಂಬಗಳಿಗೆ ಪಡಿತರ ಕಿಟ್ ವಿತರಿಸಿದ್ದಾರೆ.
ಕೊರೊನಾ ಹಿನ್ನೆಲೆ ಲಾಕ್ಡೌನ್ ಮಾಡಿರುವುದರಿಂದ ನಗರದ ಎಸ್ ಪಿ ವೃತ್ತದ ಬಳಿಯಿರುವ ಮಾರುತಿ ಕಾಲೊನಿಯ ಜನರಿಗೆ ಪಡಿತರ ವಿತರಣೆ ಮಾಡಿದ್ದಾರೆ.
ಮೇ 1ರಂದು ಪಡಿತರ ವಿತರಿಸಲು ಕೇಂದ್ರ ಸರ್ಕಾರ ಆದೇಶ ಹೊರಡಿಸಿದ್ದು, ಅಲ್ಲಿಯವರೆಗೆ ಸುಧಾರಿಸಿಕೊಳ್ಳಲಿ ಎಂದು ಈ ಕಿಟ್ ವಿತರಣೆ ಮಾಡುತ್ತಿದ್ದೇನೆ ಎಂದು ಇದೇ ವೇಳೆ ಹೇಳಿದರು.