ಬಳ್ಳಾರಿ: ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ಕಟ್ಟಿಗೆ ಕೂಡಿಟ್ಟಿದ್ದ ಒಂದು ಅಂಗಡಿ ಹಾಗೂ ಪಕ್ಕದ ಮೂರು ಅಂಗಡಿಗಳು ಬೆಂಕಿಗಾಹುತಿಯಾಗಿವೆ. ನಗರದ ಲಾರಿ ಟರ್ಮಿನಲ್ನಲ್ಲಿ ಸಂಜೆ 4 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಅಂಗಡಿಗಳಲ್ಲಿ ವಾಹನದ ಬಿಡಿ ಭಾಗಗಳು, ಟೈರ್ ಮತ್ತಿತರ ವಸ್ತುಗಳಿದ್ದವು ಎಂದು ತಿಳಿದುಬಂದಿದೆ.
ಬಳಿಕ ಸ್ಥಳೀಯ ಯುವಕರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕದಳದ ಇನ್ಸ್ಪೆಕ್ಟರ್ ಬಸವರಾಜ್ ಮತ್ತು ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.