ETV Bharat / state

ನಾಯಕತ್ವ ಬದಲಾವಣೆ ಬಗ್ಗೆ ಚರ್ಚಿಸಿರೋದು ನಿಜ, ಆದ್ರೆ ನಮ್ಮಲ್ಲಿ ಭಿನ್ನಮತ ಇಲ್ಲ: ಲಕ್ಷ್ಮಣ್​​‌ ಸವದಿ - ರಾಜ್ಯ ಬಿಜೆಪಿಯಲ್ಲಿನ ನಾಯಕತ್ವ ಬದಲಾವಣೆ ಕುರಿತು ಚರ್ಚೆ

ರಾಜ್ಯ ಬಿಜೆಪಿಯಲ್ಲಿನ ನಾಯಕತ್ವ ಬದಲಾವಣೆ ಕುರಿತು ಚರ್ಚಿಸಿರೋದು ನಿಜವಾದ್ರೂ ಅದು ನಮ್ಮೊಳಗಿನ ಆಂತರಿಕ ವಿಚಾರ. ಮುಖ್ಯಮಂತ್ರಿ ಬಿಎಸ್ ವೈ ನಮ್ಮ ಪ್ರಶ್ನಾತೀತ ನಾಯಕ. ಅವರೇ ನಮ್ಮ‌ ನಾಯಕರು ಎಂದು ಡಿಸಿಎಂ ಲಕ್ಷ್ಮಣ್​​‌ ಸವದಿ ಸ್ಪಷ್ಟಪಡಿಸಿದರು.

DCM Laxman savadhi
ಡಿಸಿಎಂ ಲಕ್ಷ್ಮಣ್​​‌ ಸವದಿ
author img

By

Published : Jun 1, 2020, 2:23 PM IST

Updated : Jun 1, 2020, 6:29 PM IST

ಬಳ್ಳಾರಿ: ರಾಜ್ಯ ಬಿಜೆಪಿಯಲ್ಲಿ ಯಾವುದೇ ಭಿನ್ನಮತ ಇಲ್ಲ. ಆದರೆ, ನಾಯಕತ್ವ ಬದಲಾವಣೆ ಕುರಿತು ಚರ್ಚಿಸಿರೋದು ನಿಜವೆಂದು ಡಿಸಿಎಂ ಲಕ್ಷ್ಮಣ್​​‌ ಸವದಿ ಒಪ್ಪಿಕೊಂಡಿದ್ದಾರೆ.

ನಗರದ ಎಸ್ಪಿ ವೃತ್ತದಲ್ಲಿರುವ ಬಿಜೆಪಿ ಕಚೇರಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಉಮೇಶ ಕತ್ತಿ ಬೆಂಗಳೂರಿನ‌ ನಿವಾಸದಲ್ಲಿ ಭೋಜನಕೂಟ ಆಯೋಜಿಸಿದ್ದು ನಿಜ. ಆದರೆ, ರಾಜ್ಯ ಬಿಜೆಪಿಯಲ್ಲಿನ ನಾಯಕತ್ವ ಬದಲಾವಣೆ ಕುರಿತು ಚರ್ಚಿಸಿರೋದು ನಿಜವಾದ್ರೂ ಅದನ್ನ‌ ನಮ್ಮೊಳಗೆ ಆಂತರಿಕ‌ವಾಗಿ ಚರ್ಚೆ ಮಾಡಿದ್ದೇವೆ. ಮುಖ್ಯಮಂತ್ರಿ ಬಿಎಸ್ ವೈ ನಮ್ಮ ಪ್ರಶ್ನಾತೀತ ನಾಯಕ. ಅವರೇ ನಮ್ಮ‌ ನಾಯಕರು ಎಂದು ಸ್ಪಷ್ಟಪಡಿಸಿದರು.

ಭಿನ್ನಮತದ ವಿಚಾರ ಕುರಿತು ಡಿಸಿಎಂ ಲಕ್ಷ್ಮಣ್​​‌ ಸವದಿ ಸ್ಪಷ್ಟನೆ

ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ: ರಾಜ್ಯ ಬಿಜೆಪಿಯಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಶಾಸಕ ಬಸನಗೌಡ ಪಾಟೀಲ್​ ಯತ್ನಾಳ ತಮ್ಮ‌ ವೈಯಕ್ತಿಕ ಅಭಿಪ್ರಾಯವನ್ನ‌ ವ್ಯಕ್ತಪಡಿಸಿದ್ದಾರೆ. ರಮೇಶ್ ಕತ್ತಿಗೆ ಎಂಎಲ್ ಸಿ ಟಿಕೆಟ್​​​​​ ನೀಡೋ ವಿಚಾರವನ್ನ ಶಾಸಕ ಉಮೇಶ್ ಕತ್ತಿ ಪ್ರಸ್ತಾಪಿಸಿದ್ದಾರೆ. ಶಾಸಕರೆಲ್ಲರಿಗೂ ಅನುದಾನದ ಕೊರತೆ ಇದೆ. ಅದನ್ನ‌ ಅಲ್ಲಗಳೆಯಲ್ಲ. ಆದ್ರೆ, ಈ‌ ಕೊರೊನಾ ಸಂದರ್ಭದಲ್ಲಿ ಶಾಸಕರ ಕ್ಷೇತ್ರಗಳತ್ತ ಹೆಚ್ಚಿನ ಗಮನ ಹರಿಸಲಾಗುತ್ತಿಲ್ಲ.‌ ಅದಕ್ಕೆ ಸಣ್ಣ- ಪುಟ್ಟ ಭಿನ್ನಾಭಿಪ್ರಾಯಗಳಿದ್ದರೆ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಬಗೆಹರಿಸಿಕೊಳ್ಳುವುದಾಗಿ ಸವದಿ ಹೇಳಿದರು.

Last Updated : Jun 1, 2020, 6:29 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.