ಬಳ್ಳಾರಿ: ಗಾಂಧೀಜಿ ಕನಸನ್ನು ಸಕಾರಗೊಳಿಸಲು ಬಿಜೆಪಿ ಸಂಕಲ್ಪ ಯಾತ್ರೆ ನಡೆಸಲಿದೆ ಎಂದು ಹೊಸಪೇಟೆ ತಾಲೂಕು ಬಿಜೆಪಿ ಅಧ್ಯಕ್ಷ ಅನಂತ ಪದ್ಮನಾಭ ಹೇಳಿದ್ದಾರೆ.
ನಗರ ಬಿ.ಜೆ.ಪಿ ಪಕ್ಷದ ತಾಲೂಕು ಭವನದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಇನ್ನೂ ದಲಿತರು ದಲಿತರಾಗಿದ್ದಾರೆ. ಕಾಂಗ್ರೆಸ್ನವರು ಸ್ವಾತಂತ್ರ್ಯ ಹೋರಾಟಗಾರರ ನೆಪದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ದೇಶದ ಹಿತಕ್ಕಾಗಿ ಕಾಂಗ್ರೆಸ್ ಪಕ್ಷದ ಕೊಡುಗೆ ಶೂನ್ಯ, ಸಂಕಲ್ಪ ಯಾತ್ರೆಯಲ್ಲಿ ದಲಿತರ ಕೇರಿಗಳಿಗೆ ಭೇಟಿ ನೀಡಿ, ಉಪಹಾರ ಸೇವಿಸಲಾಗುತ್ತದೆ ಎಂದರು.