ETV Bharat / state

ಬಳ್ಳಾರಿ ಮಹಾನಗರ ಪಾಲಿಕೆ ವಿರುದ್ಧ ಸಾರ್ವಜನಿಕರು ಕಿಡಿ: ಮೂಲಸೌಲಭ್ಯಕ್ಕೆ ಆಗ್ರಹಿಸಿ ಪ್ರತಿಭಟನೆ - Public protest against basic needs in bellary latest news

ಹತ್ತು ವರ್ಷಗಳ ಬೇಡಿಕೆಗಳನ್ನು ಮಹಾನಗರ ಪಾಲಿಕೆ ಈಡೇರಿಸಿಲ್ಲ. ಮೂಲ ಸೌಲಭ್ಯಗಳನ್ನು ಈಡೇರಿಸಬೇಕು ಎಂದು ಬಳ್ಳಾರಿಯಲ್ಲಿ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಮೂಲಸೌಲಭ್ಯಕ್ಕೆ ಆಗ್ರಹಿಸಿ ಪ್ರತಿಭಟನೆ
author img

By

Published : Oct 17, 2019, 1:07 PM IST

ಬಳ್ಳಾರಿ: ಇಲ್ಲಿನ ಮಹಾನಗರ ಪಾಲಿಕೆ ವಿರುದ್ಧ ಮೂಲಸೌಲಭ್ಯಕ್ಕೆ ಆಗ್ರಹಿಸಿ ಸತ್ಯನಾರಾಯಣಪೇಟೆ ನಿವಾಸಿಗಳು ಪ್ರತಿಭಟನೆ ನಡೆಸಿದ್ದಾರೆ.

ಬಿಜೆಪಿ ಮುಖಂಡ ಡಾ.ಸುಂದರ್ ಮಾತನಾಡಿದರು.

ಕಳೆದ 10 ವರುಷಗಳಿಂದಲೂ ಸತ್ಯನಾರಾಯಣ ಪೇಟೆ, ಗೊಲ್ಲ ನರಸಪ್ಪ ಕಾಲೊನಿ, ಸಿದ್ಧಿಕಿ ಕಾಂಪೌಂಡ್ ಸೇರಿದಂತೆ ಇತರೆಡೆ ಅಗತ್ಯ ಸೌಲಭ್ಯ ಕಲ್ಪಿಸುವಲ್ಲಿ ಮಹಾನಗರ ಪಾಲಿಕೆ ವಿಫಲವಾಗಿದೆ. ಒಳಚರಂಡಿ ಸಮಸ್ಯೆಯಂತೂ ಹೇಳತೀರದಾಗಿದೆ. ಈ ಬಗ್ಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ರೂ ಪ್ರಯೋಜನವಾಗಿಲ್ಲ ಎಂದು ಬಿಜೆಪಿ ಮುಖಂಡ ಡಾ.ಸುಂದರ್ ದೂರಿದ್ದಾರೆ.

ಮಹಾನಗರ ಪಾಲಿಕೆ ಹಾಗೂ ಕಾಲೊನಿ ನಿವಾಸಿಗಳ ನಡುವೆ ಸಮನ್ವಯತೆ ಕೊರತೆಯಿದೆ. ಅದನ್ನು ನೀಗಿಸುವಲ್ಲಿ ಪಾಲಿಕೆ ಆಯುಕ್ತರು ಮುಂದಾಗಬೇಕಿತ್ತು. ಈಗ ಅದು ಎಲ್ಲೇ ಮೀರಿದೆ. ಹಾಗಾಗಿ ಪಾಲಿಕೆ ಈ ಕೂಡಲೇ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಬಿಜೆಪಿ ಯುವ ಮೋರ್ಚಾ ನಗರ ಘಟಕದ ಅಧ್ಯಕ್ಷ ಕೆ.ಎಸ್. ಅಶೋಕ್​, ಮುಖಂಡ ಪ್ರಭು, ಮಹಾನಗರ ಪಾಲಿಕೆ ಕೆಡಬ್ಲ್ಯುಎಸ್ ಖಾಜಾ ಮಹಮ್ಮದ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Intro:ಹತ್ತು ವರುಷದ ಸಿಟ್ಟಿದು ಈಗ ಹೊರಹಾಕಿದ್ದೇವೆ: ಡಾ.ಸುಂದರ್
ಬಳ್ಳಾರಿ: ಹತ್ತು ವರುಷದ ಸಿಟ್ಟಿದು. ಅದನ್ನ ನಾವು ಈಗ ಹೊರ ಹಾಕಿದ್ದೇವೆ. ಇದೇ ರೀತಿಯಾಗಿ ಮುಂದುವರಿದರೆ ಪರಿಣಾಮ ಬೇರೆ ಆಗುತ್ತೆ.
ಅರ್ರೇರ್ರೇ ಇದೇನಿದು ಇಷ್ಟೊಂದು ಸಾವಧಾನವಾಗಿ ಮೊನಚಾದ ಚೂಜಿಯಿಂದ ಪರೋಕ್ಷವಾಗಿ ಮಹಾನಗರ ಪಾಲಿಕೆ ವಿರುದ್ಧ ಹರಿಹಾಯ್ದ ಘಟನೆಯು ಬಳ್ಳಾರಿ ನಗರದಲ್ಲಿಂದು ನಡೆಯಿತು.
ಹೌದು, ಇದೇನಿದು. ಇಂಥ ಮಾತನ್ನ ಯಾರಿಗೆ ಹೇಳುತ್ತಾರೆಂಬ ಕಾತರ ನಿಮಗಿದೆಯಾ. ಹಾಗಾದ್ರೆ ಒಮ್ಮೆ ಈ ಸ್ಟೋರಿಯನ್ನ ನೋಡಿ.
ಬಳ್ಳಾರಿ ನಗರದ ಸತ್ಯನಾರಾಯಣಪೇಟೆ ಮುಖ್ಯರಸ್ತೆಯಲ್ಲಿನ ರಾಘವೇಂದ್ರಸ್ವಾಮಿ ವೃತ್ತದ ಬಳಿ ಬಿಜೆಪಿ‌ ಯುವ ಮೋರ್ಚಾ ವತಿಯಿಂದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಬಿಜೆಪಿಯ ಮುಖಂಡ ಡಾ.ಬಿ.ಕೆ.ಸುಂದರ್ ಅಲ್ಲಿ ನೆರೆದಿದ್ದ ಪ್ರತಿಭಟನಾ ಕಾರರನ್ನ ಉದ್ದೇಶಿಸಿ ಮಾತನಾಡುವಾಗ ಈ‌ ಮೇಲಿನ ಧಾಟಿ ಯಲ್ಲೇ ಎಚ್ಚರಿಕೆ ನೀಡಿದ್ದಾರೆ.
ಕಳೆದ ಹತ್ತು ವರುಷಗಳಿಂದಲೂ ಕೂಡ ಸತ್ಯನಾರಾಯಣ ಪೇಟೆ, ಗೊಲ್ಲ ನರಸಪ್ಪ ಕಾಲೊನಿ, ಸಿದ್ಧಿಕಿ ಕಂಪೌಂಡ್ ಸೇರಿ ದಂತೆ ಇತರೆಡೆ ಅಗತ್ಯ ಸೌಲಭ್ಯ ಕಲ್ಪಿಸುವಲ್ಲಿ ಮಹಾನಗರ ಪಾಲಿಕೆ ವಿಫಲವಾಗಿದ್ದು, ಒಳಚರಂಡಿ ಸಮಸ್ಯೆಯಂತೂ ಹೇಳತೀರದಾಗಿದೆ. ಹೀಗಾಗಿ, ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ರೂ ಪ್ರಯೋಜನವಾಗಿಲ್ಲ ಎಂದು ಡಾ.ಸುಂದರ್ ದೂರಿದ್ದಾರೆ.

Body:ಇನ್ಮುಂದೆ ಇದೇ ರೀತಿಯಾಗಿ ಮುಂದುವರಿದರೆ ಸುಮ್ಮನೆ ಕೂರಲಾಗದು. ಸತ್ಯನಾರಾಯಣಪೇಟೆ ಸೇರಿದಂತೆ ಇತರೆ ಕಾಲೊನಿಗಳಲ್ಲಿ ವೈದ್ಯರು, ನಿವೃತ್ತ ನೌಕರರು ಹೆಚ್ಚಾಗಿ ವಾಸ ಮಾಡುತ್ತಿದ್ದು. ಇಷ್ಟುದಿನ ಕಾದುಕಾದು ಸಾಕಾಗಿ ಹೋಗಿದೆ. ಇದೇ ಮೊದಲ ಬಾರಿಗೆ ನಾವು ಬೀದಿಗೆ ಬಂದು ಪ್ರತಿಭಟನೆ ನಡೆಸುತ್ತಿದ್ದೇವೆ.‌ ಅದು ಇನ್ಮುಂದೆ ನಿರಂತರವಾದ್ರೂ ಅಚ್ಚರಿ ಏನಿಲ್ಲ ಎಂದು ಎಚ್ಛರಿಕೆ ಸಂದೇಶವನ್ನು ಡಾ.ಸುಂದರ್ ರವಾ ನಿಸಿದ್ದಾರೆ.
ಮಹಾನಗರ ಪಾಲಿಕೆ ಹಾಗೂ ಕಾಲೊನಿ ನಿವಾಸಿಗಳ ಸಮನ್ವಯದ ಕೊರತೆಯಿದೆ. ಅದನ್ನು ನೀಗಿಸುವಲ್ಲಿ ಪಾಲಿಕೆ ಆಯುಕ್ತರು ಮುಂದಾಗಬೇಕಿತ್ತಾದ್ರೂ ಈಗ ಅದು ಎಲ್ಲೇ ಮೀರಿದೆ ಎಂದಿದ್ದಾರೆ ಡಾ.ಸುಂದರ್.
ಬಿಜೆಪಿ ಯುವ ಮೋರ್ಚಾ ನಗರ ಘಟಕದ ಅಧ್ಯಕ್ಷ ಕೆ.ಎಸ್.ಅಶೋಕ, ಮುಖಂಡ ಪ್ರಭು ಸೇರಿದಂತೆ ಇತರರು ಪಾಲ್ಗೊಂಡಿದ್ದರು. ಮಹಾನಗರ ಪಾಲಿಕೆ ಕೆಡಬ್ಲ್ಯು ಎಸ್ ನ ಖಾಜಾ ಮಹಮ್ಮದ ಇದ್ದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_7_SN_PET_BASIC_FACILITIES_PROTES_7203310

KN_BLY_7_SN_PET_BASIC_FACILITIES_PROTEST_VISUALS_7203310

KN_BLY_7_SN_PET_BASIC_FACILITIES_PROTEST_7203310

ETV Bharat Logo

Copyright © 2025 Ushodaya Enterprises Pvt. Ltd., All Rights Reserved.