ಹೊಸಪೇಟೆ: ನಗರದಲ್ಲಿ ಕೊರೊನಾ ಭೀತಿ ಇರುವುದರಿಂದ ಯಾರೂ ರಸ್ತೆಯಲ್ಲಿ ತಿರುಗಾಡಬಾರದೆಂದು ಸಾರ್ವಜನಿಕರು ತಮ್ಮ ತಮ್ಮ ಬಡಾವಣೆಗಳಿಗೆ ಮುಳ್ಳಿನ ಬೇಲಿಗಳನ್ನು ಹಾಕುತ್ತಿದ್ದಾರೆ.
ಕೆಲ ಪುಂಡರು ಮನೆಯಲ್ಲಿರದೆ ಪೊಲೀಸರ ಕಣ್ಣು ತಪ್ಪಿಸಿ ಗಲ್ಲಿ ಗಲ್ಲಿಯಲ್ಲಿ ತಿರುಗಾಡುತ್ತಿದ್ದಾರೆ. ಅದಕ್ಕಾಗಿ ನಗರದ ಆಶ್ರಯ ಕಾಲೋನಿ, ಹೊಸುರು ಚಿತ್ತವಾಡಗಿ, ಹೊಸುರು ಮಾಗಾಣಿ, ಬಸನದರ್ಗ ಗ್ರಾಮಗಳು ಸೇರಿದಂತೆ ರಸ್ತೆಗಳಿಗೆ ಮುಳ್ಳಿನ ಪೊದೆಗಳನ್ನು ಹಾಕಿ ಬಂದ್ ಮಾಡಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ಜಾಗೃತಿ ಮೂಡಿಸಲಾಗುತ್ತಿದೆ.
ಜನರು ಆರೋಗ್ಯ ಕಾಪಾಡಬೇಕು. ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂದು ಸರಕಾರವು ಎಲ್ಲರೂ ಮನೆಯಲ್ಲಿರಿ ಎಂದು ತಿಳಿಸಿದರೂ ಕೂಡಾ ಕೆಲವರು ಮನೆಯಲ್ಲಿರದೆ ದ್ವಿಚಕ್ರ ವಾಹನಗಳ ಮೂಲಕ ರಸ್ತೆಯಲ್ಲಿ ತಿರುಗಾಡುತ್ತಿದ್ದಾರೆ. ಪೊಲೀಸರಿಗೆ ಯಾವುದಾದ್ರು ನೆಪ ಹೇಳಿಕೊಂಡು ತಿರುಗಾಡುತ್ತಾರೆ.
ಯಾರೂ ಹೊರಗಡೆಯಿಂದ ಒಳಗೆ ಪ್ರವೇಶ ಮಾಡಬಾರದು ಹಾಗೂ ಒಳಗಿನಿಂದ ಹೊರಗಡೆ ಹೋಗಬಾರದು ಎಂದು ಮುಳ್ಳಿನ ಪೊದೆಗಳನ್ನು ಕಡಿದು ಗ್ರಾಮಸ್ಥರು ಬೇಲಿ ಹಾಕುತ್ತಿದ್ದಾರೆ. ನಗರದಿಂದ ಯಾವ ಮುಖ್ಯ ರಸ್ತೆಗಳಿಗಳಿಗೂ ಸಂಪರ್ಕ ಕಲ್ಪಿಸಬಾರದೆಂದು ತಿರ್ಮಾನಿಸಿದ್ದಾರೆ.