ಬಳ್ಳಾರಿ: ಕೊರೊನಾ ವೈರಸ್ಗೂ ಚಿಕನ್ ಬಿರಿಯಾನಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ಚಿಕನ್ ತಿಂದರೆ ಕೊರೊನಾ ವೈರಸ್ ಬರಲಿದೆ ಎಂಬುದು ಶುದ್ಧ ಸುಳ್ಳು ಎಂಬುದರ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ನಾಳೆ ಬೃಹತ್ ಚಿಕನ್ ಮೇಳವನ್ನು ಕೋಳಿ ಫಾರಂ ಮಾಲೀಕರಾದ ದುರ್ಗಾ ಪ್ರಸಾದ ಆಯೋಜಿಸಿದ್ದಾರೆ.
ಬಳ್ಳಾರಿ ನಗರದ ಕೋರ್ಟ್ ರಸ್ತೆಯಲ್ಲಿರುವ ಕಮ್ಮ ಕಲ್ಯಾಣ ಮಂಟಪದಲ್ಲಿ ನಾಳೆ ಬೆಳಿಗ್ಗೆ 11 ಗಂಟೆಗೆ ಈ ಬೃಹತ್ ಚಿಕನ್ ಮೇಳ ಪ್ರಾರಂಭಗೊಳ್ಳಲಿದ್ದು, ಸಾವಿರಕ್ಕೂ ಅಧಿಕ ಜನರು ಈ ಮೇಳದಲ್ಲಿ ಭಾಗವಹಿಸಿ ಬಗೆ ಬಗೆಯ ಚಿಕನ್ ಖಾದ್ಯಗಳನ್ನು ಸವಿಯಲಿದ್ದಾರೆ.
ಕೋಳಿ ಫಾರಂ ಮಾಲೀಕರಾದ ದುರ್ಗಾ ಪ್ರಸಾದ ಈ ಬಗ್ಗೆ ಮಾತನಾಡಿದ್ದು, ಚಿಕನ್ ತಿನ್ನುವುದರಿಂದ ಕೊರೊನಾ ರೋಗ ಬರುವುದಿಲ್ಲ ಎಂದು ಖಾತರಿಯಾಗಿದೆ. ಆದರೆ ನಮ್ಮ ಜನರು ಈ ಬಗ್ಗೆ ತೀವ್ರ ಭಯಭೀತರಾಗಿದ್ದು, ಚಿಕನ್ನಿಂದಾಗಿ ಯಾವುದೇ ಹಾನಿ ಇಲ್ಲ ಎಂಬುದರ ಬಗ್ಗೆ ತಿಳಿಹೇಳಲು ಕೇವಲ 149 ರೂಪಾಯಿಗಳಿಗೆ ಬಗೆ ಬಗೆ ಚಿಕನ್ ಖಾದ್ಯಗಳನ್ನ ನೀಡಲಿದ್ದೇವೆ ಎಂದಿದ್ದಾರೆ.