ಬಳ್ಳಾರಿ: ಗಣಿ ನಾಡಲ್ಲಿ ಆಟೋ ಚಾಲಕರು ಇದೀಗ ತಮ್ಮ ಪ್ರಯಾಣ ದರದಲ್ಲಿ ಏರಿಕೆ ಮಾಡಲು ನಿರ್ಧರಿಸಿದ್ದು, ಆರ್ಥಿಕ ಸಂಕಷ್ಟದಿಂದ ಪಾರಾಗಲು ಈ ಕ್ರಮಕ್ಕೆ ಮುಂದಾಗಿದ್ದಾರೆ. ಲಾಕ್ಡೌನ್ ಬಳಿಕ ತೀವ್ರ ನಷ್ಟ ಅನುಭವಿಸಿದ್ದ ಆಟೋ ಚಾಲಕರು ಇತ್ತೀಚಿನ ಡೀಸೆಲ್ ದರದ ಏರಿಕೆಗೆ ಸಿಲುಕಿ ಇನ್ನಷ್ಟು ಸಮಸ್ಯೆಗೆ ಒಳಗಾಗಿದ್ದಾರೆ.
ನಗರದಲ್ಲಿ ದೂರದೂರಿಗೆ ಜನತೆ ಆಟೋಗಳನ್ನೇ ಅವಲಂಭಿಸಿದ್ದು, ಮೊದಲು ಕೆಎಸ್ಆರ್ಟಿಸಿ ಬಸ್ಗಿಂತಲೂ ಒಂದೆರಡು ರೂಪಾಯಿ ಕಡಿಮೆ ದರದಲ್ಲಿ ಬಾಡಿಗೆ ಪಡೆಯುತ್ತಿದ್ದರು. ಹೀಗಾಗಿ ಜನತೆ ಸಹ ಬಸ್ಗಳ ಬದಲಿಗೆ ಆಟೋವನ್ನೇ ಹೆಚ್ಚಾಗಿ ಪ್ರಯಾಣಕ್ಕಾಗಿ ಬಳಸುತ್ತಿದ್ದರು. ಇನ್ನು ದರ ಏರಿಕೆಗೆ ಪ್ರಯಾಣಿಕರು ಸಹ ಸಹಮತ ನೀಡಿದ್ದು, ಪ್ರಯಾಣಿಕರಿಗೆ ಹೊರೆಯಾಗದಂತೆ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾರೆ.
ಈ ಸಂಬಂಧ ಈಟಿವಿ ಭಾರತದೊಂದಿಗೆ ಮಾತನಾಡಿದ ಅಮರಾಪುರ ಗ್ರಾಮದ ಪ್ಯಾಸೆಂಜರ್ ಆಟೋ ಚಾಲಕ ಕುಮಾರ್, ದರ ಹೆಚ್ಚಳ ಅನಿವಾರ್ಯತೆ ಸದ್ಯದ ಮಟ್ಟಿಗೆ ಇದೆ. ಹೀಗಾಗಿ, ಬಸ್ ದರಕ್ಕಿಂತಲೂ ಸರಿಸಮಾನವಾಗಿ ದರ ಹೆಚ್ಚಳ ಮಾಡಲಾಗಿದೆ ಎಂದರು.
ಇದನ್ನೂ ಓದಿ: ಬಳ್ಳಾರಿ: ಆಟೋ ರಿಕ್ಷಾ ಓಡಿಸಿ ಜೀವನ ನಡೆಸುತ್ತಿರುವ ಅತಿಥಿ ಉಪನ್ಯಾಸಕ