ETV Bharat / state

15 ದಿನದಲ್ಲಿ 4 ಲಕ್ಷ ಲೀಟರ್ ಹಾಲಿನ ಸಂಗ್ರಹ ಹೆಚ್ಚಳ.. ನಂದಿನಿ ಪ್ರಾಡಕ್ಟ್ ಬಿಟ್ಟು ಬೇರೆ ಬ್ರಾಂಡ್​ ಮಾರಿದ್ರೆ ಡೀಲರ್​ಶಿಪ್ ರದ್ದು ಎಚ್ಚರಿಕೆ - etv bharat kannada

ನಂದಿನಿ ಪಾರ್ಲರ್​ನಲ್ಲಿ ಬೇರೆ ಪ್ರಾಡಕ್ಟ್ ಮಾರಾಟ ಮಾಡಿದ್ರೆ ಡೀಲರ್ ಶಿಪ್ ರದ್ದು ಮಾಡುತ್ತೇವೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ ಎಚ್ಚರಿಕೆ ನೀಡಿದ್ದಾರೆ.

4-lakh-liters-milk-collection-hiked-with-in-15-days-says-kmf-president-bheema-naik
15 ದಿನದಲ್ಲಿ 4 ಲಕ್ಷ ಲೀಟರ್ ಹಾಲಿನ ಸಂಗ್ರಹ ಹೆಚ್ಚಳ: ಕೆಎಂಎಫ್​ ಅಧ್ಯಕ್ಷ ಭೀಮಾ ನಾಯ್ಕ
author img

By

Published : Aug 14, 2023, 4:36 PM IST

Updated : Aug 14, 2023, 5:04 PM IST

ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ

ವಿಜಯನಗರ: ಕಳೆದ 15 ದಿನಗಳಲ್ಲಿ 4 ಲಕ್ಷ ಲೀಟರ್ ಹಾಲು ಹೆಚ್ಚಳವಾಗಿದೆ ಎಂದು ಕೆಎಂಎಫ್ ರಾಜ್ಯಾಧ್ಯಕ್ಷ ಭೀಮಾ ನಾಯ್ಕ ಹೇಳಿದರು. ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಾಲಿನ ದರ 3 ರೂ. ಏರಿಕೆ ಮಾಡಿದ ಬಳಿಕ ಹಾಲಿನ ಸಂಗ್ರಹ ಹೆಚ್ಚಾಗಿದೆ. 83 ಲಕ್ಷ ಲೀಟರ್ ಇದ್ದಿದ್ದು, ಈಗ 87 ಲಕ್ಷ ಲೀಟರ್​ಗೆ ಏರಿಕೆಯಾಗಿದೆ ಎಂದು ತಿಳಿಸಿದರು.

ಒಂದು ಕೋಟಿ ಗುರಿ: ಕೇಂದ್ರ ಸರ್ಕಾರ ಅಕ್ಕಿ ಕೋಡೋದ್ರಲ್ಲೂ ರಾಜಕೀಯ ಮಾಡುತ್ತಿದೆ. ಅಕ್ಕಿ ಹಣವನ್ನು ನೇರವಾಗಿ ಫಲಾನುಭವಿ ಅಕೌಂಟ್​ಗೆ ಜಮೆ ಮಾಡುತ್ತಿದೆ. ಕಾಂಗ್ರೆಸ್ ಐದು ಗ್ಯಾರಂಟಿಯಲ್ಲಿ ನಾಲ್ಕು ಗ್ಯಾರಂಟಿ ಈಡೇರಿಸಿದೆ. ಹಾಲಿನ ದರ ಏರಿಕೆ ಮೂಲಕ ನೇರವಾಗಿ ಹಣ ರೈತರಿಗೆ ಕೊಡುತ್ತೇವೆ. ಬಿಜೆಪಿ ರೈತರ ವಿಚಾರದಲ್ಲಿ ವಿರೋಧ ಮಾಡಬಾರದು. ಬಿಜೆಪಿ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳಲಿಕ್ಕೆ ಕೆಲವು ಸ್ಟೇಟ್​ಮೆಂಟ್ ಕೊಡುತ್ತಾರೆ. ನಾನು ಅಧ್ಯಕ್ಷ ಆದಮೇಲೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ನಂದಿನಿ ಬ್ರ್ಯಾಂಡ್ ಬಹಳ ವೇಗವಾಗಿ ಬೆಳೆಯುತ್ತಿದೆ. ನಮ್ಮ ದೇಶದಲ್ಲಿ ಮಾತ್ರವನ್ನು ಹೊರ ದೇಶದಲ್ಲಿಯೂ ನಂದಿನಿ ಬ್ರ್ಯಾಂಡ್​ಗೆ ಬೇಡಿಕೆ ಇದೆ ಎಂದರು.

ಬೇರೆ ಪ್ರಾಡಕ್ಟ್ ಮಾರಿದರೆ ಡೀಲರ್​​ಶಿಪ್ ರದ್ದು: ನಂದಿನಿ ಪಾರ್ಲರ್ ನಲ್ಲಿ ಬೇರೆ ಪ್ರಾಡಕ್ಟ್ ಮಾರಾಟ ವಿಚಾರವಾಗಿ ದೂರುಗಳು ಬಂದಿವೆ. ನಂದಿನಿ ಪಾರ್ಲರ್ ನಲ್ಲಿ ನಮ್ಮ ಪ್ರಾಡಕ್ಟ್ ಬಿಟ್ಟು ಬೇರೆ ವಸ್ತು ಮಾರಾಟ ಮಾಡುವಂತಿಲ್ಲ. ಒಂದು ವೇಳೆ ಮಾರಾಟ ಮಾಡಿದರೆ ಅಂತವರ ಡೀಲರ್​ಶಿಪ್ ರದ್ದು ಮಾಡುತ್ತೇವೆ. ಕೆಲವು ಮಾರ್ಕೆಟಿಂಗ್ ವಿಚಾರದಲ್ಲಿ ಬಹಳ ಹಿಂದೆ ಇದ್ದೇವೆ. ಅದನ್ನು ಯಾವ ರೀತಿ ಬಲಪಡಿಸಬೇಕು ಅನ್ನೋದನ್ನು ನಿರ್ಧಾರ ಮಾಡುತ್ತೇವೆ. ಕೆಎಂಎಫ್ ಆಯಾ ಸರ್ಕಾರ ಸಂದರ್ಭದಲ್ಲಿ ಅವರ ಅಣತಿಯಂತೆ ನಡೆಯುತ್ತದೆ ಅನ್ನೋ ವಿಚಾರ ಕೆಎಂಎಫ್​ನಲ್ಲಿ ನಡೆಯೋದಿಲ್ಲ. ಸಿದ್ದರಾಮಯ್ಯನವರು ಸಿಎಂ ಆದ ಮೇಲೆ ನಿರ್ಧಾರ ಮಾಡಿದರು. ಮೂರು ರೂಪಾಯಿ ಹೆಚ್ಚಿಸಿ ನೇರವಾಗಿ ರೈತರಿಗೆ ಕೊಡುತ್ತಿದ್ದೇವೆ. ಕೆಎಂಎಫ್ ನೂರು ಕೋಟಿ ಲಾಭದಲ್ಲಿ ಇದೆ ಎಂದು ಮಾಹಿತಿ ನೀಡಿದರು.

ಬ್ರಾಂಡ್ ಫ್ರೀಯಾಗಿ ಪ್ರಚಾರ: ರೈತರ ಪರವಾಗಿ ರಾಜ್ ಕುಟುಂಬ ಕೆಲಸ ಮಾಡುತ್ತಾ ಬಂದಿದೆ. ಅಪ್ಪು ಕೂಡಾ ನಂದಿನಿ ಬ್ರಾಂಡ್​ಅನ್ನು ಫ್ರೀಯಾಗಿ ಪ್ರಚಾರ ಮಾಡಿದ್ದಾರೆ. ಈಗ ಬ್ರಾಂಡ್ ಅಂಬಾಸಿಡರ್ ಆಗಿ ಶಿವರಾಜಕುಮಾರ್ ನೇಮಕವಾಗಿದ್ದಾರೆ. ಸಿನಿಮಾಗಳಲ್ಲಿ ಕೆಲವು ವೇಳೆ ನಂದಿನಿ ಬ್ರಾಂಡ್ ಬಳಸಿ ಅಂತ ವಾಯ್ಸ್ ಮೂಲಕ ಹೇಳ್ತಿದ್ರು. ರೈತರ ಪರವಾಗಿ ರಾಜ್ ಕುಟುಂಬ ಅಪಾರ ಅಭಿಮಾನ ಹೊಂದಿದೆ. ಹೀಗಾಗಿ ಶಿವರಾಜಕುಮಾರ್ ಅವ​ರನ್ನೇ ನೇಮಕ ಮಾಡಬೇಕು ಅಂತ ಮಾಡಿದ್ದೇವೆ. ಶಿವರಾಜಕುಮಾರ್ ಒಂದೇ ಒಂದು ರೂಪಾಯಿ ಸಂಭಾವನೆ ಪಡೆದಿಲ್ಲ ಎಂದು ಕೆಎಂಎಫ್​ ಅಧ್ಯಕ್ಷ ಭೀಮಾ ನಾಯ್ಕ ಹೇಳಿದರು.

ಇದನ್ನೂ ಓದಿ:ಅಂಜನಾದ್ರಿಯಲ್ಲಿ 350ಕ್ಕೂ ಹೆಚ್ಚು ತಾಳೆ ಮರದ ಬೀಜ ಬಿತ್ತನೆ: ಪರಿಸರ ಸಂರಕ್ಷಣೆಗೆ ಸಂಕಲ್ಪ

Last Updated : Aug 14, 2023, 5:04 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.