ಹೊಸಪೇಟೆ (ವಿಜಯನಗರ): 10 ವರ್ಷಗಳಿಂದ ಬರಡಾಗಿದ್ದು ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಚಟ್ನಳ್ಳಿ ಕೆರೆ ತುಂಬಿ ತುಳುಕುತ್ತಿದೆ. ಈ ಕೆರೆ 100 ಎಕೆರೆ ವ್ಯಾಪ್ತಿಯನ್ನು ಹೊಂದಿದೆ.
ಒಂದು ರಾತ್ರಿಯಲ್ಲಿ ಸುರಿದ ಧಾರಾಕಾರ ಮಳೆಗೆ ನೀರು ತುಂಬಿದ್ದು, ಕೋಡಿ ಒಡೆದಿದೆ. ಅಲ್ಲದೇ, ಉಚ್ಚಂಗಿ ದುರ್ಗ ಭಾಗದ ರಾಮಘಟ್ಟ, ಚಟ್ನಳ್ಳಿ, ಕುರೆ ಮಾಗೇನಹಳ್ಳಿ, ಕೆಂಚಾಪುರ ಭಾಗದಲ್ಲಿ ಭಾರಿ ಮಳೆಯಾಗಿದೆ. ಹೀಗಾಗಿ ಈ ಭಾಗದ ರೈತರಲ್ಲಿ ಸಂತಸ ಮೂಡಿದೆ.
ಈ ಬಗ್ಗೆ ಮಾತನಾಡಿದ ರೈತ ಲಿಂಗರಾಜ ಎಂಬುವರು, ಶನಿವಾರ ರಾತ್ರಿ ಹರಪನಹಳ್ಳಿಯಲ್ಲಿ ಧಾರಾಕಾರ ಮಳೆಯಾಗಿದ್ದು, ಇದರಿಂದ ಕಳೆದ 10-15 ವರ್ಷಗಳವರೆಗೆ ತುಂಬದ ಕೆರೆ ತುಂಬಿ ಕೋಡಿ ಬಿದ್ದಿದೆ ಎಂದರು.