ಬೆಳಗಾವಿ : ಮಹಾನಗರ ಪೊಲೀಸ್ ಆಯುಕ್ತ ಬಿ. ಲೋಕೇಶ್ ಕುಮಾರ್ ಅವರನ್ನು ವರ್ಗ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯ ಆಂತರಿಕ ಭದ್ರತಾ ವಿಭಾಗ(ISD)ದ ಡಿಐಜಿಯಾಗಿ ಲೋಕೇಶ್ ಕುಮಾರ್ ಅವರು ಬೆಂಗಳೂರಿಗೆ ವರ್ಗ ಆಗಿದ್ದಾರೆ. ಕಳೆದ ಒಂದೂವರೆ ವರ್ಷಗಳಿಂದ ಲೋಕೇಶ್ ಕುಮಾರ್ ಅವರು ನಗರ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ್ದಾರೆ.
ಬೆಳಗಾವಿ ನೂತನ ಪೊಲೀಸ್ ಆಯುಕ್ತರಾನ್ನಾಗಿ ಕೆ.ತ್ಯಾಗರಾಜನ್ ಅವರನ್ನು ಸರ್ಕಾರ ನೇಮಕ ಮಾಡಿದೆ. ಇವರು 2006 ನೇ ಐಪಿಎಸ್ ಬ್ಯಾಚ್ ನ ಅಧಿಕಾರಿ. ಈ ಮೊದಲು ಇವರು ಸಿಐಡಿ ಡಿಐಜಿ ಆಗಿದ್ದರು.