ETV Bharat / state

COVID: ರಾಜ್ಯದಲ್ಲಿಂದು 504 ಮಂದಿಗೆ ಕೊರೊನಾ, 20 ಸೋಂಕಿತರ ಸಾವು - ಕರ್ನಾಟಕದಲ್ಲಿ ಕಂಡು ಬಂದ ಕೊರೊನಾ ಪ್ರಕರಣಗಳ ಮಾಹಿತಿ

ರಾಜ್ಯದಲ್ಲಿ ಸುಮಾರು 504 ಮಂದಿಗೆ ಇಂದು ಕೊರೊನಾ ಸೋಂಕು ತಗುಲಿದ್ದು, 893 ಮಂದಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಈ ದಿನ 20 ಜನರು ಸೋಂಕಿಗೆ ಬಲಿಯಾಗಿದ್ದಾರೆ.

ಕೋವಿಡ್
corona
author img

By

Published : Sep 27, 2021, 7:47 PM IST

ಬೆಂಗಳೂರು: ರಾಜ್ಯದಲ್ಲಿ ಇಂದು 1,03,800 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 504 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 29,73,899ಕ್ಕೆ ಏರಿಕೆಯಾಗಿದೆ.

ಈ ದಿನ 893 ಮಂದಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದು, 29,23,320 ಸೋಂಕಿತರು ಗುಣಮುಖರಾಗಿದ್ದಾರೆ. ಇಂದು ಸೋಂಕಿನಿಂದ 20 ಜನ ಬಲಿಯಾಗಿದ್ದು, ಮೃತರ ಸಂಖ್ಯೆ 37,746 ಕ್ಕೆ ಏರಿಕೆ ಕಂಡಿದೆ. ಸದ್ಯ 12,804 ಪ್ರಕರಣಗಳು ಸಕ್ರಿಯವಾಗಿವೆ. ಈ ಮೂಲಕ ಸೋಂಕಿತರ ಪ್ರಮಾಣ ಶೇ.0.48 ರಷ್ಟಿದ್ದು, ಸಾವಿನ ಪ್ರಮಾಣ 3.96 ರಷ್ಟಿದೆ.

ವಿಮಾನ‌ ನಿಲ್ದಾಣದಿಂದ 4019 ಪ್ರಯಾಣಿಕರು ಆಗಮಿಸಿದ್ದು, ಯುಕೆಯಿಂದ ಬಂದ 470 ಪ್ರಯಾಣಿಕರು ಕೋವಿಡ್ ತಪಾಸಣೆಗೆ ಒಳಪಟ್ಟಿದ್ದಾರೆ.

ರಾಜಧಾನಿಯ ಕೋವಿಡ್​ ಕೇಸ್​ ಮಾಹಿತಿ :

ಬೆಂಗಳೂರು ನಗರದಲ್ಲಿ ಇಂದು 181 ಮಂದಿಗೆ ಸೋಂಕು ದೃಢಪಟ್ಟಿದ್ದು, 265 ಸೋಂಕಿತರು ಡಿಸ್ಚಾರ್ಜ್ ಆಗಿದ್ದಾರೆ.‌ ಇನ್ನು ಸಿಲಿಕಾನ್​ ಸಿಟಿಯಲ್ಲಿ 7,393 ಸಕ್ರಿಯ ಪ್ರಕರಣಗಳಿವೆ. 5 ಜನರು ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 16,137 ಏರಿಕೆಯಾಗಿದೆ.

ಇದನ್ನೂ ಓದಿ: GST ವಿನಾಯಿತಿ ಪಟ್ಟಿ ಪರಿಶೀಲನೆಗೆ ಕೇಂದ್ರದಿಂದ 2 ಸಮಿತಿ ರಚನೆ.. ಒಂದಕ್ಕೆ ಸಿಎಂ ಬೊಮ್ಮಾಯಿ ನೇತೃತ್ವ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.