ETV Bharat / state

ಪ್ರೇಮಕವಿ ದಾಂಪತ್ಯದಲ್ಲಿ ಹುಳಿ ಹಿಂಡಿದ್ದ ಮಂತ್ರವಾದಿಗೆ ಷರತ್ತು ಬದ್ಧ ಜಾಮೀನು! - K Kalyan Latest News

ಪ್ರೇಮಕವಿ, ಚಿತ್ರಸಾಹಿತಿ ಕೆ.ಕಲ್ಯಾಣ್​ ದಾಂಪತ್ಯದಲ್ಲಿ ಬಿರುಕು ಹುಟ್ಟುಹಾಕಿದ್ದ ಮಂತ್ರವಾದಿ ಶಿವಾನಂದ ವಾಲಿಗೆ ಷರತ್ತು ಬದ್ಧ ಜಾಮೀನು ಮಂಜೂರು ನೀಡಲಾಗಿದೆ. ಆದರೆ, ಜಾಮೀನು ಸಿಕ್ಕರೂ ತವರಿಗೆ ತೆರಳಲು ಅವಕಾಶ ನೀಡಿಲ್ಲ.

ಪ್ರೇಮಕವಿ ದಾಂಪತ್ಯದಲ್ಲಿ ಹುಳಿ ಹಿಂಡಿದ್ದ ಮಂತ್ರವಾದಿಗೆ ಷರತ್ತು ಬದ್ಧ ಜಾಮೀನು

author img

By

Published : Oct 22, 2020, 9:02 PM IST

Updated : Oct 22, 2020, 9:37 PM IST

ಬೆಳಗಾವಿ: ಚಂದನವನದ ಪ್ರೇಮಕವಿ ಕೆ.ಕಲ್ಯಾಣ ದಾಂಪತ್ಯ ಕಲಹಕ್ಕೆ ಕಾರಣವಾಗಿದ್ದ ಮಂತ್ರವಾದಿ ಶಿವಾನಂದ ವಾಲಿಗೆ ಬೆಳಗಾವಿಯ ಎರಡನೇ ಜೆಎಂಎಫ್​ಸಿ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.

ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಶಿವಾನಂದ ವಾಲಿಗೆ 50 ಸಾವಿರ ಸ್ಯೂರಿಟಿ, ತಿಂಗಳಿಗೊಮ್ಮೆ ಠಾಣೆಗೆ ಭೇಟಿ ನೀಡಬೇಕು ಹಾಗೂ ಈ ಹಿಂದೆ ಮಾಡಿದ ಪ್ರಮಾದ ಮರಳಿ ಮಾಡದಂತೆ ಷರತ್ತು ವಿಧಿಸಿ ನ್ಯಾಯಾಧೀಶೆ ಬಿ.ವಿ. ಲಲಿತಾಶ್ರೀ ಆದೇಶ‌ ಹೊರಡಿಸಿದ್ದಾರೆ.

ಬೆಳಗಾವಿ ಜ್ಯೂಡಿಷಿಯಲ್ ಬಿಟ್ಟು ತೆರಳದಂತೆ ಕೋರ್ಟ್ ಆರೋಪಿಗೆ ಸೂಚಿಸಿದ್ದು, ಜಾಮೀನು ಸಿಕ್ಕರೂ ಶಿವಾನಂದ ವಾಲಿಗೆ ತವರಿಗೆ ತೆರಳಲು ಅವಕಾಶ ನೀಡಿಲ್ಲ. ಹಾಗಾಗಿ ಕೋರ್ಟ್ ಆದೇಶದಿಂದ ಶಿವಾನಂದ ವಾಲಿ ಬೆಳಗಾವಿಯಲ್ಲೇ ವಾಸಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಕೆ.ಕಲ್ಯಾಣ ಪತ್ನಿ ಅಶ್ವಿನಿ ಖಾತೆಯಿಂದ ಶಿವಾನಂದ ಲಕ್ಷಾಂತರ ರೂ. ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದನು. ಅಲ್ಲದೇ ಕೆ.ಕಲ್ಯಾಣ ಅವರ ಕುಟುಂಬಸ್ಥರ ಕೊಟ್ಯಂತರ ರೂ. ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಂಡಿದ್ದನು. ಕೆ.ಕಲ್ಯಾಣ ಅವರ ಮನೆಯಲ್ಲಿ ಅಡುಗೆ ಮಾಡುತ್ತಿದ್ದ ಗಂಗಾ ಕುಲಕರ್ಣಿ ಜತೆಗೂಡಿ ಶಿವಾನಂದ ವಾಲಿ ಈ‌ ವಂಚನೆ ಎಸಗಿದ್ದನು. ಈ ಕುರಿತು ಕೆ.ಕಲ್ಯಾಣ ಮಾಳ ಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

Last Updated : Oct 22, 2020, 9:37 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.