ETV Bharat / state

ರಾಜ್ಯದಲ್ಲಿ ಮದರಸಾ ಶಾಲೆಗಳನ್ನು ಬಂದ್ ಮಾಡುವುದು ಅಸಾಧ್ಯ: ಸತೀಶ್ ಜಾರಕಿಹೊಳಿ

ಯುಗಾದಿ ದಿನದಂದು ಕಾಂಗ್ರೆಸ್ ಅಭ್ಯರ್ಥಿಗಳ ಲೀಸ್ಟ್ ಬಿಡುಗಡೆ - ಬೇರೆ ಪಕ್ಷದ ನಾಯಕರು ಕಾಂಗ್ರೆಸ್ ಹೈಕಮಾಂಡ್ ಹಾಗೂ ರಾಜ್ಯ ನಾಯಕರ ಜೊತೆ ಸಂಪರ್ಕದಲ್ಲಿದ್ದಾರೆ - ಸತೀಶ್ ಜಾರಕಿಹೊಳಿ

author img

By

Published : Mar 18, 2023, 7:22 PM IST

Updated : Mar 18, 2023, 7:33 PM IST

Satish Jarakiholi reaction on Yatnal statement
ರಾಜ್ಯದಲ್ಲಿ ಮದರಸಾ ಶಾಲೆಗಳನ್ನು ಬಂದ್ ಮಾಡುವುದು ಅಸಾಧ್ಯ: ಸತೀಶ್ ಜಾರಕಿಹೊಳಿ
ರಾಜ್ಯದಲ್ಲಿ ಮದರಸಾ ಶಾಲೆಗಳನ್ನು ಬಂದ್ ಮಾಡುವುದು ಅಸಾಧ್ಯ: ಸತೀಶ್ ಜಾರಕಿಹೊಳಿ

ಬೆಳಗಾವಿ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಮದರಸಾ ಬಂದ್ ಮಾಡಲಾಗುವುದು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದಾರೆ. ಚುನಾವಣೆ ಸಮೀಪ ಬಂದಿರುವುದರಿಂದ ಇಂತಹ ಹೇಳಿಕೆ ನೀಡುತ್ತಾರೆ. ಬಿಜೆಪಿಗೆ ವಿಷಯಗಳು ಬೇಕು, ಹೀಗಾಗಿ ಅವರು ಈ ರೀತಿಯ ವಿಷಯಗಳನ್ನು ಮುಂದುವರಿಸಿಕೊಂಡು ಹೋಗುತ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.

ಬೆಳಗಾವಿ ನಗರದಲ್ಲಿ ಯುವ ಸಮಾವೇಶ ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿ ಆಗಮನ ಹಿನ್ನೆಲೆ ಕಾರ್ಯಕ್ರಮದ ಪೂರ್ವ ಸಿದ್ದತೆ ವೀಕ್ಷಣೆ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಅವರು, ಬಿಜೆಪಿ ಅವರಿಗೆ ಏನಾದರೂ ವಿಷಯ ಬೇಕು, ಚುನಾವಣೆ ಬಂತು ಅಂದರೆ ಏನಾದರೂ ಹೇಳುತ್ತಾರೆ. ಮದರಸಾ ಬಂದ್ ಮಾಡುವುದಕ್ಕೆ ಆಗುವುದಿಲ್ಲ, ಅವು ನಿರಂತರವಾಗಿ ನಡೆದುಕೊಂಡು ಬಂದಿರುವ ಶಾಲೆಗಳು ಎಂದರು.

ನಾವು ಸಿದ್ದರಾಮಯ್ಯ ಅವರಿಗೆ ಬೆಳಗಾವಿ ಸವದತ್ತಿ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ನಾವು ಒತ್ತಾಯದ ಜೊತೆಗೆ ಮನವಿ ಮಾಡಿದ್ದೆವು. ಆದರೆ ಅವರು ತಿರಸ್ಕಾರ ಮಾಡಿ ಕೋಲಾರದಿಂದ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಈಗಾಗಲೇ ಬಹಿರಂಗ ಸಭೆಯಲ್ಲಿ ಕೋಲಾರದಿಂದ ಸ್ಪರ್ಧೆ ಮಾಡುತ್ತೇನೆ ಎಂದಿದ್ದಾರೆ. ಸವದತ್ತಿಯಲ್ಲಿ ಸ್ಥಳೀಯರಿಗೆ ಟಿಕೆಟ್ ನೀಡಲಾಗುವುದು ಎಂದು ಹೇಳಿದರು.

ಮಾ.20ಕ್ಕೆ ಬೆಳಗಾವಿಗೆ ರಾಹುಲ್ ಗಾಂಧಿ ಆಗಮನ: ದಿನಾಂಕ 20ರಂದು ಕುಂದಾನಗರಿ ಬೆಳಗಾವಿಗೆ ರಾಹುಲ್ ಗಾಂಧಿ ಆಗಮಿಸುತ್ತಿದ್ದಾರೆ. ಬೆಳಗಾವಿಯಲ್ಲಿ ಯುವ ಸಮಾವೇಶ ಮಾಡಲಿಕ್ಕೆ ಬರಲಿದ್ದಾರೆ. ಈಗಾಗಲೇ ಮಹಿಳಾ ಹಾಗೂ ರೈತ ಸಮಾವೇಶ ಮಾಡಲಾಗಿದೆ. ಒಂದು ವರ್ಷದಲ್ಲಿ ಹಲವು ಸಮಾವೇಶ ಮಾಡಲಾಗಿದೆ, ಯುವಕರಿಗೆ ಮತ್ತೊಂದು ಸಂದೇಶ ಕೊಡಲು ರಾಹುಲ್ ಗಾಂಧಿ ಅವರ ಆಸೆಯಾಗಿದೆ. ಬೆಳಗಾವಿಂದ ಈ ಕಾರ್ಯಕ್ರಮಕ್ಕೆ ಆಚರಣೆ ಮಾಡಲಾಗುವುದು, ಸಮಾವೇಶದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಜನರು ಸೇರಲಿದ್ದಾರೆ. ಯುವಕರನ್ನು ಮುಖ್ಯವಾಹಿನಿಗೆ ತರುವುದಕ್ಕೆ ಏನಾದರೂ ಘೋಷಣೆ ಮಾಡಲಿದ್ದಾರೆಯಾ ಎಂಬುದು ನನಗೂ ಗೊತ್ತಿಲ್ಲ ಎಂದು ಹೇಳಿದರು.

ಬಿಜೆಪಿಯವರು ಯುವಕರಿಗೆ ಎರಡು ಕೋಟಿ ಉದ್ಯೋಗಗಳು ಕೊಡುತ್ತೇನೆ ಎಂದು ಹೇಳಿದರು ಆದರೆ ಕಳೆದ ಒಂಬತ್ತು ವರ್ಷಗಳಿಂದ ಇದನ್ನೇ ಹೇಳುತ್ತಿದ್ದಾರೆ ಆದರೆ ಕಾಂಗ್ರೆಸ್ ಏನು ಹೇಳಿದೆ ಅದನ್ನು ಮಾಡಿದ್ದೆ ಎಂದರು. ಶುಕ್ರವಾರ ದೆಹಲಿಯಲ್ಲಿ ನಡೆದ ಸ್ಕ್ರೀನಿಂಗ್​ ಕಮಿಟಿಯಲ್ಲಿ ಸಿದ್ದರಾಮಯ್ಯ ಅವರಿಗೆ ಟಿಕೆಟ್ ಘೋಷಣೆ ಆಗಿಲ್ಲ ಎಂಬುದು ನನಗೆ ಗೊತ್ತಿಲ್ಲ. ಸಿದ್ದರಾಮಯ್ಯನವರು ಎಲ್ಲಿಂದ ಸ್ಪರ್ಧೆ ಮಾಡುತ್ತಾರೆ ಎಂಬುದನ್ನು ಹೈಕಮಾಂಡ್ ತೀರ್ಮಾನ ಎಂದು ತಿಳಿಸಿದರು.

ಸಂಭಾವ್ಯರ ಪಟ್ಟಿಯಲ್ಲಿ ಹಾಲಿ 6 ಜನ ಶಾಸಕರಿಗೆ ಟಿಕೆಟ್ ಸಿಗುವುದಿಲ್ಲ ಎಂದು ಚರ್ಚೆ ನಡೆಯುತ್ತಿದೆ. ಇದರಲ್ಲಿ ಬೆಳಗಾವಿ ಜಿಲ್ಲೆಯವರು ಯಾರೂ ಇಲ್ಲ, ಆದರೆ ಅಂತಿಮವಾಗಿ ಪಟ್ಟಿ ಬಿಡುಗಡೆ ಆದಮೇಲೆ ಗೊತ್ತಾಗುತ್ತದೆ. ಯುಗಾದಿ ದಿನದಂದು ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು. ಇದರಲ್ಲಿ 130ಜನರನ್ನು ಆಯ್ಕೆ ಮಾಡಲಾಗಿದೆ, 80ರಿಂದ 90 ಅಭ್ಯರ್ಥಿಗಳ ಲಿಸ್ಟ್ ಬಿಡುಗಡೆ ಮಾಡಲಾಗುವುದು. ಯಾವ ಕ್ಷೇತ್ರದಲ್ಲಿ ಗೊಂದಲವಿದೆಯೋ ಅಲ್ಲಿ ನಾವು ಎರಡನೇ ಪಟ್ಟಿಯಲ್ಲಿ ಬಿಡುಗಡೆ ಮಾಡಿ ಅಭ್ಯರ್ಥಿಯನ್ನು ಘೋಷಿಸುತ್ತೇವೆ. ಬೇರೆ ಪಕ್ಷದ ನಾಯಕರು ಕಾಂಗ್ರೆಸ್ ಹೈಕಮಾಂಡ್, ಹಾಗೂ ರಾಜ್ಯ ನಾಯಕರ ಜೊತೆ ಸಂಪರ್ಕದಲ್ಲಿದ್ದಾರೆ. 27ಕ್ಕೆ ನೀತಿ ಸಂಹಿತೆ ಜಾರಿಯಾಗಬಹುದು, ಅಲ್ಲಿವರೆಗೆ ಕಾದು ನೋಡಬೇಕಾಗಿದೆ ಎಂದು ಸತೀಶ್​ ಜಾರಕಿಹೊಳಿ ಹೇಳಿದರು.

ಇದನ್ನೂ ಓದಿ:ತಂದೆಗಾಗಿ ಕ್ಷೇತ್ರ ತ್ಯಾಗಕ್ಕೂ ಸಿದ್ಧ: ಯತೀಂದ್ರ ಸಿದ್ದರಾಮಯ್ಯ

Last Updated : Mar 18, 2023, 7:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.