ETV Bharat / state

ಗೋಕಾಕ್​​ನಲ್ಲಿ ಪ್ರತಿಭಟನಾ ಕಿಚ್ಚು: ಮೈ ಮೇಲೆ ಡೀಸೆಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ರಮೇಶ್ ಬೆಂಬಲಿಗರು

author img

By

Published : Mar 5, 2021, 12:30 PM IST

Updated : Mar 5, 2021, 1:52 PM IST

ಮಾಜಿ ಸಚಿವ ರಮೇಶ್​ ಜಾರಕಿಹೊಳಿಯವರ ಸಿಡಿ ಪ್ರಕರಣ ಬಹಿರಂಗವಾಗುತ್ತಿದ್ದಂತೆ ಅವರ ಬೆಂಬಲಿಗರು ದಿನಕ್ಕೊಂದು ಹೈಡ್ರಾಮಾ ನಡೆಸುತ್ತಿದ್ದಾರೆ. ಇಂದು ರಮೇಶ್​ ಬೆಂಬಲಿಗರು ಗೋಕಾಕ್​​​ನಲ್ಲಿ ಯರಗಟ್ಟಿ ಹಾಗೂ ಸಂಕೇಶ್ವರ್ ರಸ್ತೆಯನ್ನು ತಡೆದು‌ ಪ್ರತಿಭಟನೆ ನಡೆಸಿದು. ಈ ವೇಳೆ ಸಿಡಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಒತ್ತಾಯಿಸಿದರು.

ಗೋಕಾಕ್​​ನಲ್ಲಿ ಟೈಯರ್​​​ಗೆ ಬೆಂಕಿ ಹಚ್ಚಿ ಪ್ರತಿಭಟನೆ
Ramesh Jarkiholi supporters protest in Gokak

ಬೆಳಗಾವಿ: ಮಾಜಿ ಸಚಿವ ರಮೇಶ್​​ ಜಾರಕಿಹೊಳಿ‌ ಅವರ ನಕಲಿ ಸಿಡಿ ತಯಾರಿಸಿ ಅವರ ತೇಜೋವಧೆ ಮಾಡಲಾಗಿದೆ. ಹೀಗಾಗಿ ಸಿಡಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ರಮೇಶ್​​ ಅಭಿಮಾನಿಗಳು ಗೋಕಾಕ್​​​ನಲ್ಲಿ ಯರಗಟ್ಟಿ ಹಾಗೂ ಸಂಕೇಶ್ವರ್ ರಸ್ತೆಯನ್ನು ತಡೆದು‌ ಪ್ರತಿಭಟನೆ ನಡೆಸಿದರು.

ಗೋಕಾಕ್​ನಲ್ಲಿ ಪ್ರತಿಭಟನೆ ನಡೆಸುತ್ತಿದ ರಮೇಶ್​ ಬೆಂಬಲಿಗರು

ಗೋಕಾಕ್ ತಾಲೂಕಿನ ಮಾಲದಿನ್ನಿ ಕ್ರಾಸ್ ಬಳಿ ಉಪ್ಪಾರಟ್ಟಿ, ಮಾಲದಿನ್ನಿ ಹಾಗೂ ಬೆಣಚಿನಮರಡಿ ಗ್ರಾಮಸ್ಥರು ಯರಗಟ್ಟಿ ಸೆಂಕೇಶ್ವರ್ ರಸ್ತೆ ಬಂದ್ ಮಾಡಿ ‌ನಡು ರಸ್ತೆಯಲ್ಲಿ ಟೈಯರ್​​ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.

ಸಾಮಾಜಿಕ ಸಾಮಾಜಿಕ ಕಾರ್ಯಕರ್ತ ದಿನೇಶ್​​ ಕಲ್ಲಹಳ್ಳಿ ನಕಲಿ‌ ಸಿಡಿ ತಯಾರಿಸಿ ರಮೇಶ್​ ತೇಜೊವಧೆ ಮಾಡಿದ್ದಾರೆ. ಅವರ ರಾಜಕೀಯ ಜೀವನ ಮುಗಿಸಲು ಹುನ್ನಾರ ಮಾಡುತ್ತಿದ್ದಾರೆ. ಹೀಗಾಗಿ ಸಿಡಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವ ಮೂಲಕ ರಮೇಶ್​ ಅವರಿಗೆ ‌ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.

ಬಸ್​ಗಳಿಲ್ಲದೇ ವಿದ್ಯಾರ್ಥಿಗಳು ಪರದಾಟ:

ರಮೇಶ್​​ ಜಾರಕಿಹೊಳಿ‌ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಗೋಕಾಕ್​ನಲ್ಲಿ‌ ಶಾಲೆ - ಕಾಲೇಜುಗಳು ಬಂದ್​ ಆಗಿದ್ದು, ಇತ್ತ ಬಸ್​ಗಳ ಸಂಚಾರ ಸ್ಥಗಿತಗೊಂಡಿದೆ. ಇದರಿಂದ ಶಾಲಾ ಕಾಲೇಜುಗಳಿಗೆ ತೆರಳಿದ್ದ ವಿದ್ಯಾರ್ಥಿಗಳು ಪರದಾಡುತ್ತಿದ್ದು, ಪ್ರಯಾಣಿಕರು ಪರದಾಡುತ್ತಿದ್ದಾರೆ.

ಓದಿ: ಸಿದ್ದರಾಮಯ್ಯ ಯಾವ ಹಿನ್ನೆಲೆಯಿಂದ ಬಂದವರು, ಅವರ ಹಿನ್ನೆಲೆ ಏನು ಗೊತ್ತಿದೆ: ಸಿಎಂ ಕಿಡಿ

ರಮೇಶ್​ ಬೆಂಬಲಿಗರ ಹೈಡ್ರಾಮಾ:

don't take this video

ನಕಲಿ ಸಿಡಿ ತಯಾರಿಸಿ ರಮೇಶ್ ಜಾರಕಿಹೊಳಿ‌ ತೇಜೋವಧೆ ಆರೋಪ ಹಿನ್ನೆಲೆಯಲ್ಲಿ ಮಾಲದಿನ್ನಿ ಕ್ರಾಸ್ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸುವ ವೇಳೆ ಇಬ್ಬರು ಬೆಂಬಲಿಗರು ಡೀಸೆಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ತಕ್ಷಣ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ಆ್ಯಂಬುಲೆನ್ಸ್‌ನಲ್ಲಿ ಸಾಗಿಸಿದರು. ಬಳಿಕ ಪೊಲೀಸರು ಪ್ರತಿಭಟನಾ ನಿರತ ಬೆಂಬಲಿಗರ ಮನವೊಲಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿ ಕೊಟ್ಟರು.

ಬೆಂಕಿಗೆ ಜಿಗಿದು‌ ಆತ್ಮಹತ್ಯೆಗೆ ಯತ್ನಿಸಿದ ರಮೇಶ್​ ಬೆಂಬಲಿಗ, ಅದೃಷ್ಟವಶಾತ್ ತಪ್ಪಿದ ಭಾರಿ ಅನಾಹುತ:

ಬೆಂಕಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ರಮೇಶ್​ ಬೆಂಬಲಿಗ

ನಗರದ ಬಸವೇಶ್ವರ ವೃತ್ತದಲ್ಲಿ ರಮೇಶ್​ ಜಾರಕಿಹೊಳಿ ಬೆಂಬಲಿಗರು ಟೈಯರ್​ಗೆ ಬೆಂಕಿ ಹಚ್ಚಿ ದಿನೇಶ್​ ಕಲ್ಲಹಳ್ಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಈ ವೇಳೆ ಬೆಂಬಲಿಗನೋರ್ವ ಓಡಿ ಬಂದು ಏಕಾಏಕಿ ಬೆಂಕಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಈ ವೇಳೆ ಪೊಲೀಸರ ತಕ್ಷಣ ಆತನನ್ನು ರಕ್ಷಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಘಟನೆಯಲ್ಲಿ ವ್ಯಕ್ತಿಯ ಕೈ,ಕಾಲು ಹಾಗೂ ತೊಡೆ ಭಾಗಕ್ಕೆ ಸುಟ್ಟು ಗಾಯಗಳಾಗಿದ್ದು ಕೂಡಲೇ ಸ್ಥಳದಲ್ಲಿದ್ದ ಅಗ್ನಿಶಾಮಕದ ಸಿಬ್ಬಂದಿ ಬೆಂಕಿ ನಂದಿಸಿ ಆತನನ್ನು ತಾಲೂಕು ಆಸ್ಪತ್ರೆಗೆ ರವಾಸಿದರು.

ರಮೇಶ್​ ಬೆಂಬಲಿಗರಿಂದ ಬೃಹತ್ ಪಾದಯಾತ್ರೆ :

ಕೊಣ್ಣೂರ ಗ್ರಾಮದಲ್ಲಿ ಬೃಹತ್ ಪಾದಯಾತ್ರೆ ನಡೆಸಿದ ರಮೇಶ್​ ಬೆಂಬಲಿಗರು

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ದಿನೇಶ್​ ಕಲ್ಲಹಳ್ಳಿ ನಕಲಿ ವಿಡಿಯೋ ತಯಾರಿಸಿ ಅವರ ತೆಜೋವಧೆ ಮಾಡುತ್ತಿದ್ದಾನೆ. ಅವರ ವಿರುದ್ಧ ಪೊಲೀಸರು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ‌ಕೊಣ್ಣೂರ ಗ್ರಾಮದಿಂದ ಗೋಕಾಕ್ ಡಿವೈಎಸ್ಪಿ ಕಚೇರಿವರೆಗೆ ರಮೇಶ್​ ಜಾರಕಿಹೊಳಿ ಬೆಂಬಲಿಗರು ಬೃಹತ್ ಪಾದಯಾತ್ರೆ ನಡೆಸಿದರು.

ಕೊಣ್ಣೂರ ಗ್ರಾಮದಲ್ಲಿರುವ ರೈಲು ನಿಲ್ದಾಣದಿಂದ ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗಿದ್ದು, ಮೆರವಣಿಗೆ ಉದ್ದಕ್ಕೂ ದಿನೇಶ್ ಕಲ್ಲಹಳ್ಳಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ದಿನೇಶ್​ ಕಲ್ಲಹಳ್ಳಿ ಬಿಡಿಗಡೆ ಮಾಡಿರುವ ನಕಲಿಸಿಡಿ ಸೂಕ್ತ ತನಿಖೆ ಆಗಬೇಕೆಂದು ಒತ್ತಾಯಿಸಿ ಗೋಕಾಕ್ ಡಿವೈಎಸ್ಪಿ ಕಾರ್ಯಾಲಯದವರೆಗೆ ತೆರಳಿ ಡಿವೈಎಸ್ಪಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದಾರೆ.

Last Updated : Mar 5, 2021, 1:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.