ಬೆಳಗಾವಿ : ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಪ್ರತಿಪಕ್ಷ ನಾಯಕ ದೇವೇಂದ್ರ ಫಡ್ನವಿಸ್ ಅವರನ್ನು ಸಚಿವ ರಮೇಶ್ ಜಾರಕಿಹೊಳಿ ಮತ್ತೊಮ್ಮೆ ಭೇಟಿಯಾಗಿದ್ದಾರೆ. ಒಂದೇ ತಿಂಗಳಲ್ಲಿ ಉಭಯ ನಾಯಕರ ಮಧ್ಯೆ ಇದು ಎರಡನೇ ಭೇಟಿಯಾಗಿದೆ.
ಗುರುವಾರ ದಿಢೀರ್ ಮುಂಬೈಗೆ ತೆರಳಿದ ರಮೇಶ್ ಜಾರಕಿಹೊಳಿ, ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿಯಾಗಿ ಒಂದು ಗಂಟೆ ಕಾಲ ಚರ್ಚಿಸಿದ್ದು, ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ರಾಜ್ಯದ ಮೈತ್ರಿ ಸರ್ಕಾರ ಉರುಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಮೇಶ್ ಜಾರಕಿಹೊಳಿ ಮಹಾ ಮೈತ್ರಿ ಉರಳಿಸಲು ಮಹಾರಾಷ್ಟ್ರ ಬಿಜೆಪಿಗೆ ಸಹಕಾರ ನೀಡುತ್ತಿದ್ದಾರಾ? ಎಂಬ ಅನುಮಾನ ಎಲ್ಲರಲ್ಲಿ ಮೂಡತೊಡಗಿದೆ.
![Ramesh Jarakiholi and devendra padnavis met again](https://etvbharatimages.akamaized.net/etvbharat/prod-images/kn-bgm-02-8-fadnavis-ramesh-didhir-meet-7201786_08102020233421_0810f_1602180261_1044.jpg)
ದೆಹಲಿಯಲ್ಲಿ ಈ ಹಿಂದೆ ಫಡ್ನವಿಸ್ ಭೇಟಿಯಾಗಿದ್ದ ರಮೇಶ್ ಜಾರಕಿಹೊಳಿ ಬೆಳಗಾವಿಗೆ ಬಂದಾಗ ಮಾಧ್ಯಮದವರಿಗೆ ಏನೂ ಇಲ್ಲ.. ಏನೂ ಇಲ್ಲ ಅಂದಿದ್ದರು. ಏನೂ ಇಲ್ಲ ಎನ್ನುತ್ತಲೇ ಉಭಯ ನಾಯಕರ ಮಧ್ಯೆ ರಾಜಕೀಯ ಲೆಕ್ಕಾಚಾರ ನಡೆಯುತ್ತಿದೆಯಾ ಎಂಬ ಮಾತುಗಳು ಕೇಳಿಬಂದಿವೆ.
ವಿಶೇಷ ಅಂದ್ರೆ ಫಡ್ನವಿಸ್ ಅವರ ತುರ್ತು ಫೋನ್ ಕರೆ ಹಿನ್ನೆಲೆಯಲ್ಲಿ ಗೋಕಾಕ್ ಸಾಹುಕಾರ್, ಅಲ್ಲಿಗೆ ತೆರಳಿದ್ದಾರೆ. ಇಬ್ಬರು ನಾಯಕರ ಭೇಟಿ ಮತ್ತಷ್ಟು ಕುತೂಹಲ ಕೆರಳಿಸಿದೆ.