ETV Bharat / state

ಸೀಜ್​ ಮಾಡಿದ ವಾಹನಗಳನ್ನು ಸಾರ್ವಜನಿಕರು ಕೋರ್ಟ್​ನಲ್ಲೇ ಬಿಡಿಸಿಕೊಳ್ಳಬೇಕು: ಡಿಸಿಪಿ ಡಾ ವಿಕ್ರಮ ಆಮಟೆ

ಸರ್ಕಾರದ ಮಾರ್ಗಸೂಚಿಗಳನ್ವಯ ಜಿಲ್ಲೆಯಲ್ಲಿ ಗಂಭೀರವಾಗಿ ಕಟ್ಟುನಿಟ್ಟಿನ ಲಾಕ್​ಡೌನ್​ ಜಾರಿಗೊಳಿಸಲಾಗಿದ್ದು, ಜಿಲ್ಲೆಯ ಜನರು‌ ಉತ್ತಮ ರೀತಿಯಲ್ಲಿ ಸಹಕಾರ ನೀಡುತ್ತಿದ್ದಾರೆ‌ ಎಂದು ಡಿಸಿಪಿ ಡಾ. ವಿಕ್ರಮ ಆಮಟೆ ತಿಳಿಸಿದ್ದಾರೆ.

public-must-receive-the-vehicle-from-court-if-police-siezed-the-vehicle-says-dcp
ಡಿಸಿಪಿ ಡಾ ವಿಕ್ರಮ ಆಮಟೆ
author img

By

Published : May 11, 2021, 3:58 PM IST

ಬೆಳಗಾವಿ: ಲಾಕ್​ಡೌನ್​ ಸಂದರ್ಭದಲ್ಲಿ ಅನಗತ್ಯವಾಗಿ ಓಡಾಡುವ ಜನರ ಬೈಕ್ ಮತ್ತು ವಾಹನಗಳನ್ನು ಒಮ್ಮೆ ಸೀಜ್ ಮಾಡಿದರೆ, ಅವುಗಳನ್ನು ಸಾರ್ವಜನಿಕರು ಕೋರ್ಟ್​ನಲ್ಲೇ ಬಿಡಿಸಿಕೊಳ್ಳಬೇಕಾಗುತ್ತೆ ಎಂದು ಡಿಸಿಪಿ ಡಾ. ವಿಕ್ರಮ ಆಮಟೆ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರದ ಮಾರ್ಗಸೂಚಿಗಳನ್ವಯ ಜಿಲ್ಲೆಯಲ್ಲಿ ಗಂಭೀರವಾಗಿ ಕಟ್ಟುನಿಟ್ಟಿನ ಲಾಕ್​ಡೌನ್​ ಜಾರಿಗೊಳಿಸಲಾಗಿದ್ದು, ಜಿಲ್ಲೆಯ ಜನರು‌ ಕೂಡ ಉತ್ತಮ ರೀತಿಯಲ್ಲಿ ಸಹಕಾರ ನೀಡುತ್ತಿದ್ದಾರೆ‌ ಎಂದರು.

ಡಿಸಿಪಿ ಡಾ ವಿಕ್ರಮ ಆಮಟೆ

ಬೆಳಗಾವಿಯಲ್ಲಿ ದಿನದ 24 ಗಂಟೆಯೂ ಕಠಿಣ ಲಾಕ್​ಡೌನ್​ ಜಾರಿ ಮಾಡಿದ್ದರಿಂದ ನಿನ್ನೆಗೆ ಹೋಲಿಕೆ ಮಾಡಿದ್ರೆ, ಇವತ್ತು ಜನರು ತಮ್ಮ ಓಡಾಟವನ್ನು ಬಹಳಷ್ಟು ಕಡಿಮೆ ಮಾಡಿದ್ದು, ಅನಾವಶ್ಯಕವಾಗಿ ಓಡಾಡುವ ಜನರಿಗೆ ಬುದ್ಧಿ ಕಲಿಸುವ ಸಲುವಾಗಿ 150 ಬೈಕ್​ಗಳನ್ನು ಸೀಜ್ ಮಾಡಿ, 230 ಜನರ ವಿರುದ್ಧ ಮಾಸ್ಕ್​, ಸಾಮಾಜಿಕ ‌ಅಂತರ ಕಾಯ್ದುಕೊಳ್ಳದ್ದಕ್ಕೆ ಕೇಸ್ ಹಾಕಿದ್ದೇವೆ. ಇನ್ನು ಮುಂದೆ ಸೀಜ್ ಮಾಡುವ ಬೈಕ್ ಹಾಗೂ ವಾಹನಗಳನ್ನು ಸಾರ್ವಜನಿಕರಿಗೆ ಯಾವುದೇ ಕಾರಣಕ್ಕೂ ಕೊಡೋದಿಲ್ಲ. ಅವುಗಳನ್ನು ಕೋರ್ಟ್​ಗೆ ಬರೆಯುತ್ತೇವೆ. ನಂತರ ಸಾರ್ವಜನಿಕರು ತಮ್ಮ ವಾಹನಗಳನ್ನು ಕೋರ್ಟ್​ನಲ್ಲೇ ಬಿಡಿಸಿಕೊಳ್ಳಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇದರ ಜೊತೆಗೆ ಮುಂದಿನ ದಿನಗಳಲ್ಲಿ ಲಾಕ್​ಡೌನ್​ ಇನ್ನಷ್ಟು ಕಠಿಣ ಆಗಲಿದ್ದು, ಜನರು ತಮಗೆ ಏನು ಅವಶ್ಯಕತೆ ಇದೆಯೂ ಅದನ್ನು ಮಾತ್ರ ಕೊಂಡುಕೊಳ್ಳಲು ಬರಬೇಕು. ಕೊರೊನಾ ಚೈನ್ ಬ್ರೇಕ್ ಮಾಡಲು ಸಹಕರಿಸಬೇಕು. ಇದಲ್ಲದೇ ಮುಂದೇ ಬರುವ ಬಸವ ಜಯಂತಿ ಹಾಗೂ ರಂಜಾನ್ ಹಬ್ಬ ಸೇರಿದಂತೆ ಇತರ ಹಬ್ಬಹರಿದಿನಗಳಿಗೆ ಅವಕಾಶವಿರುವುದಿಲ್ಲ. ಈಗಿರುವ ‌ಸಂದರ್ಭದಲ್ಲಿ ಎಲ್ಲವನ್ನೂ ನಿರ್ಬಂಧಿಸಲಾಗಿದೆ. ಹೀಗಾಗಿ, ಈಗಾಗಲೇ ಆಯಾ ಸಮುದಾಯದ ಮುಖಂಡರೊಂದಿಗೆ ಚರ್ಚೆ ನಡೆಸಿದ್ದು, ಕೊರೊನಾ ತಡೆಗೆ ಎಲ್ಲ ಸಹಕಾರ ನೀಡುವುದಾಗಿ ಅವರು ತಿಳಿಸಿದ್ದಾರೆ ಎಂದರು.

ಓದಿ: ಸಿಗದ ಆಂಬ್ಯುಲೆನ್ಸ್: ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಬೈಕ್ ಮೇಲೆಯೇ ಕೊಂಡೊಯ್ದರು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.