ETV Bharat / state

ಗಣೇಶ ಚತುರ್ಥಿಗೆ ದಿನಗಣನೆ.. 6 ದಶಕಗಳಿಂದ ಬೆಳಗಾವಿಯಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿಸುತ್ತಿರುವ ಕುಟುಂಬ

ಬೆಳಗಾವಿಯ ಕುಂಬಾರಿಕೆ ಕುಟುಂಬವೊಂದು ಆರು ದಶಕಗಳಿಂದ ಮಣ್ಣಿನ ಗಣೇಶ ಮೂರ್ತಿಗಳನ್ನು ತಯಾರಿಸುತ್ತ ಪರಿಸರ ಪ್ರೇಮ ಮೆರೆಯುತ್ತಿದೆ.

pottery-family-doing-eco-friendly-ganesha-idols-in-belgavi
ಗಣೇಶ ಚತುರ್ಥಿಗೆ ದಿನಗಣನೆ: ಬೆಳಗಾವಿಯಲ್ಲಿ ತಯಾರಾಗುತ್ತಿವೆ ಪರಿಸರ ಸ್ನೇಹಿ ಗಣೇಶ ಮೂರ್ತಿಗಳು
author img

By ETV Bharat Karnataka Team

Published : Aug 27, 2023, 8:40 PM IST

Updated : Aug 27, 2023, 9:14 PM IST

6 ದಶಕಗಳಿಂದ ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿಸುತ್ತಿರುವ ಕುಟುಂಬ

ಬೆಳಗಾವಿ: ಗಣೇಶೋತ್ಸವಕ್ಕೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಇವೆ. ಹೀಗಾಗಿ ಗಣೇಶ ಮೂರ್ತಿ ತಯಾರಕರು ಹಗಲು ರಾತ್ರಿ ಎನ್ನದೇ ಕೆಲಸ ಮಾಡುತ್ತಿದ್ದಾರೆ. ಬೆಳಗಾವಿಯಲ್ಲಿ ಎಲ್ಲೆಡೆ ಪಾಸ್ಟರ್ ಆಫ್ ಪ್ಯಾರಿಸ್ ಗಣೇಶ ಮೂರ್ತಿಗಳೇ ರಾರಾಜಿಸುತ್ತಿವೆ. ಆದರೆ ಇಲ್ಲೊಂದು ಕುಟುಂಬ ಆರು ದಶಕಗಳಿಂದ ಮಣ್ಣಿನ ಗಣಪನಿಗೆ ಪ್ರಾಶಸ್ತ್ಯವನ್ನು ಕೊಟ್ಟಿದ್ದು, ನಮಗೆ ಎಷ್ಟೇ ಶ್ರಮವಾದರೂ ಕೂಡ ನಾವು ಮಣ್ಣಿನ ಗಣಪನನ್ನೇ ತಯಾರಿಸುತ್ತೇವೆ ಎನ್ನುತ್ತಿದ್ದಾರೆ.

ಹೌದು, ಬೆಳಗಾವಿಯ ಕಪಿಲೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ಶ್ರೀ ಗಣೇಶ ಚಿತ್ರಕಲಾದ ಮಾಲೀಕ 70 ವರ್ಷದ ಮಾರುತಿ ಜ್ಯೋತಿಬಾ ಕುಂಬಾರ ತಮ್ಮ ಇಳಿ ವಯಸ್ಸಿನಲ್ಲೂ ಶ್ರದ್ಧೆಯಿಂದ ಮೂರ್ತಿ ತಯಾರಿಸುವ ಕಾಯಕದಲ್ಲಿ ತೊಡಗಿದ್ದಾರೆ. 1962ರಿಂದ ಬೆಳಗಾವಿಯಲ್ಲಿ ಮಾರುತಿ ಅವರ ತಂದೆ ಜ್ಯೋತಿಬಾ ಮೂರ್ತಿ ತಯಾರಿಸಲು ಆರಂಭಿಸಿದ್ದರು. ಎರಡನೇ ತರಗತಿಗೆ ವಿದ್ಯಾಭ್ಯಾಸ ಮೊಟಕುಗೊಳಿಸಿದ ಮಾರುತಿ ತಂದೆಯ ಕಾಯಕವನ್ನೆ ಮುಂದುವರಿಸಿದರು. ಈಗ ಮಾರುತಿ, ಅವರ ಮಕ್ಕಳಾದ ಸಾಗರ, ವಿನಾಯಕ ಸೇರಿ ಐವರು ಕಾರ್ಮಿಕರೊಂದಿಗೆ ಗಣೇಶ ಮೂರ್ತಿ ತಯಾರಿಸುತ್ತಿದ್ದಾರೆ.

ಈ ಕುರಿತು ಈಟಿವಿ ಭಾರತದ ಜೊತೆ ಮಾತನಾಡಿದ ಕಲಾವಿದ ಮಾರುತಿ ಕುಂಬಾರ, ಮಣ್ಣಿನ ಗಣಪತಿ ಮಾಡುವುದು ಎಂದರೆ ನಮಗೆ ಬಲುಪ್ರೀತಿ. ಪಿಒಪಿ ಮೂರ್ತಿಗಳನ್ನು ಬಹಳ ಬೇಗನೇ ತಯಾರಿಸಬಹುದು, ಕೆಲಸವೂ ಹಗುರವೇ. ಆದರೆ, ಅವುಗಳಿಂದ ಬಹಳಷ್ಟು ಪರಿಸರ ಮಾಲಿನ್ಯ ಉಂಟಾಗುತ್ತದೆ. ಖಾನಾಪುರ ಅರಣ್ಯ ಪ್ರದೇಶದಿಂದ ಜೇಡಿ ಮಣ್ಣು ತಂದು ಮಣ್ಣಿನ ಮೂರ್ತಿ ಮಾಡುತ್ತೇವೆ. ಐದು ತಿಂಗಳು ಮೊದಲೇ ಸಿದ್ಧತೆ ಮಾಡಿಕೊಳ್ಳುತ್ತೇವೆ. ಇನ್ನು 1 ರಿಂದ 5 ಅಡಿಯವರೆಗೆ ಮನೆ ಗಣಪತಿ ಮಾಡುತ್ತಿದ್ದು, ಇವುಗಳ ಬೆಲೆ 2 ಸಾವಿರದಿಂದ 8 ಸಾವಿರ ರೂ. ಇದೆ. 5 ರಿಂದ 12 ಅಡಿ ಸಾರ್ವಜನಿಕ ಮೂರ್ತಿಗಳಿದ್ದು, ಇವುಗಳಿಗೆ 12 ಸಾವಿರದಿಂದ 1 ಲಕ್ಷ ರೂ. ವರೆಗೆ ದರವಿದೆ. ಈ ಬಾರಿ 400ಕ್ಕೂ ಹೆಚ್ಚು ಮೂರ್ತಿ ತಯಾರಿಸಿದ್ದೇವೆ. ನಮ್ಮಲ್ಲಿ ಬರುವ ಎಲ್ಲರೂ ಮಣ್ಣಿನ ಮೂರ್ತಿಗಳಿಗೆ ಬೇಡಿಕೆ ಇಡುತ್ತಾರೆ ಎಂದರು.

ಸೆ.19ಕ್ಕೆ ಗಣೇಶೋತ್ಸವ ಹಿನ್ನೆಲೆಯಲ್ಲಿ ಮೂರ್ತಿ ತಯಾರಿಕೆ ಭರದಿಂದ ಸಾಗಿದ್ದು, ಈಗಾಗಲೇ ಬಹುತೇಕ ಮೂರ್ತಿ ತಯಾರಿಕೆ ಪೂರ್ಣವಾಗಿ ಬಣ್ಣದ ಕೆಲಸ ನಡೆಯುತ್ತಿದೆ. ಮೂರ್ತಿ ತಯಾರಕರು ವಿಘ್ನನಿವಾರಕನಿಗೆ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ. ದಗಡುಶೇಟ, ಲಾಲಬಾಗಚಾ ರಾಜಾ, ಚಿಂತಾಮಣಿ, ಸಿಂಹಾಸನಾರೂಢ, ಗಜಮುಖ, ಶಿವನ ಅವತಾರ, ರಾಧಾಕೃಷ್ಣ, ಕಮಲದಲ್ಲಿ ಪಾರ್ವತಿಯ ತೊಡೆಯ ಮೇಲೆ ಕುಳಿತಿರುವ ಗಣಪ ಸೇರಿ ಮತ್ತಿತರ ಶೈಲಿಯ ಮಣ್ಣಿನ ಮೂರ್ತಿಗಳು ಕಲಾವಿದರ ಕುಂಚದಿಂದ ಅರಳಿದ್ದು, ಮೂರ್ತಿಕಾರರ ಕೈಚಳಕ ಎದ್ದು ಕಾಣುತ್ತಿದೆ.

ಕಲಾವಿದ ಮಹೇಶ ಬಾಗವೆ ಮಾತನಾಡಿ, ನಮ್ಮಲ್ಲಿಂದ ಜಮ್ಮು ಕಾಶ್ಮೀರ ಸೇನಾ ಘಟಕಕ್ಕೆ 1.5 ಅಡಿಯ ಎರಡು ಗಣಪತಿ ಮೂರ್ತಿಗಳನ್ನು ಎಂಟು ದಿನಗಳ ಹಿಂದೆ ರೈಲಿನ ಮೂಲಕ ಕಳಿಸಿಕೊಟ್ಟಿದ್ದೇವೆ. ಹಿಂದಿನ ವರ್ಷ ಅಮೆರಿಕಾಗೂ ಒಂದು ಮೂರ್ತಿ ಕಳಿಸಲಾಗಿತ್ತು. ಮಣ್ಣಿನಿಂದ ಗಣಪತಿ ತಯಾರಿಸಿ, ನೈಸರ್ಗಿಕ ಬಣ್ಣವನ್ನೇ ನಾವು ಹಚ್ಚುತ್ತೇವೆ ಎಂದರು.

ಗ್ರಾಹಕ ಲಕ್ಷ್ಮಣ ಬುರುಡ ಮಾತನಾಡಿ, 25 ವರ್ಷಗಳಿಂದ ಮಣ್ಣಿನಲ್ಲೇ ನಮಗೆ ಹೇಗೆ ಬೇಕೊ ಅಂತಹ ಗಣಪತಿಯನ್ನು ಮಾರುತಿ ಕುಂಬಾರ ಅವರು ಮಾಡಿಕೊಡುತ್ತಾರೆ. ದಯವಿಟ್ಟು ಎಲ್ಲರೂ ಮಣ್ಣಿನ ಗಣಪತಿಯನ್ನೇ ಪೂಜಿಸುವಂತೆ ವಿನಂತಿಸಿದರು. ವಿಶಾಲ ಆನಂದಾಚೆ ಎಂಬ ಗ್ರಾಹಕ ಮಾತನಾಡಿ, ನಮ್ಮ ತಂದೆಯವರ ಕಾಲದಿಂದಲೂ ಇಲ್ಲೆ ಮಣ್ಣಿನ ಗಣಪತಿಯನ್ನು ಖರೀದಿಸುತ್ತಿದ್ದೇವೆ. ಎರಡ್ಮೂರು ತಿಂಗಳು ಮೊದಲೇ ಆರ್ಡರ್ ಕೊಟ್ಟು ನಮ್ಮ ಇಷ್ಟದ ಮೂರ್ತಿ ಕೊಳ್ಳುತ್ತೇವೆ. ನಾನು ಚಿಕ್ಕಂದಿನಿಂದ ನೋಡುತ್ತಿದ್ದೇನೆ ಬಹಳ ಸುಂದರ ಗಣಪತಿ ಮೂರ್ತಿಗಳನ್ನು ಇವರು ತಯಾರಿಸುತ್ತಾರೆ ಎಂದು ಹೇಳಿದರು.

ಒಟ್ಟಾರೆ ಪಾಸ್ಟರ್ ಆಫ್ ಪ್ಯಾರಿಸ್​ ಗಣಪತಿ ಮೂರ್ತಿ ಕಾಲದಲ್ಲಿ ಮಣ್ಣಿನಿಂದ ಗಣಪತಿ ಮೂರ್ತಿಗಳನ್ನೇ ತಯಾರಿಸುತ್ತಿರುವ ಮಾರುತಿ ಕುಂಬಾರ ಇತರರಿಗೆ ಮಾದರಿಯಾಗಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ ‌ಈದ್ಗಾ ಮೈದಾನದಲ್ಲಿ ‌ಗಣೇಶ ಮೂರ್ತಿ‌ ಪ್ರತಿಷ್ಠಾಪನೆಗೆ ಶ್ರೀರಾಮಸೇನೆ ಮನವಿ

Last Updated : Aug 27, 2023, 9:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.