ಚಿಕ್ಕೋಡಿ: ಮಹಾಮಾರಿ ಕೊರೊನಾ ನಿಯಂತ್ರಿಸಲು ಶ್ರಮಿಸುತ್ತಿರುವ ಕೊರೊನಾ ವಾರಿಯರ್ಸ್ ತಂಡಕ್ಕೆ ಹಾಗೂ 200ಕ್ಕೂ ಅಧಿಕ ಬಡವರಿಗೆ ಊಟ, ಮಾಸ್ಕ್ ಹಾಗೂ ಹ್ಯಾಂಡ್ ಗ್ಲೌಸ್ ವಿತರಿಸುವ ಮೂಲಕ ಪುರಸಭೆ ಮಾಜಿ ಸದಸ್ಯರೊಬ್ಬರು ತಮ್ಮ ಜನ್ಮದಿನ ಆಚರಿಸಿಕೊಂಡಿದ್ದಾರೆ.
![municipality former member celebrating birth day](https://etvbharatimages.akamaized.net/etvbharat/prod-images/kn-ckd-4-badavarige-mask-senitaisara-vitarane-script-ka10023_23042020175327_2304f_1587644607_643.jpg)
ಜಿಲ್ಲೆಯ ಹುಕ್ಕೇರಿ ಪಟ್ಟಣ ಪುರಸಭೆಯ ಮಾಜಿ ಸದಸ್ಯ ಬಸವೇಶ್ವರ ಪಟ್ಟಣಶೆಟ್ಟಿ ತಮ್ಮ 36ನೇ ಜನ್ಮದಿನವನ್ನು ಈ ರೀತಿ ಆಚರಿಸಿಕೊಂಡಿದ್ದಾರೆ. ಪಟ್ಟಣದ ಹೊರವಲಯದ ಗಜಬರವಾಡೆಯಲ್ಲಿರುವ 200 ಬಡ ಜನರಿಗೆ ಆಹಾರದ ಪೊಟ್ಟಣಗಳನ್ನು ವಿತರಿಸಿದರು. ಹುಕ್ಕೇರಿ ಪೊಲೀಸ್ ಠಾಣೆಯ ಸಿಬ್ಬಂದಿಗೆ ಠಾಣೆ ಆವರಣದಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆ ಕೂಡಾ ಮಾಡಿಸಿದ್ದಾರೆ.
ಇದೇ ವೇಳೆ ಪೊಲೀಸ್ ಸಿಬ್ಬಂದಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸಲಾಯಿತು. ನಂತರ ಹುಕ್ಕೇರಿ ಪುರಸಭೆಯ ಪೌರಕಾರ್ಮಿಕರಿಗೆ ಹ್ಯಾಂಡ್ ಗ್ಲೌಸ್, ಮಾಸ್ಕ್ ಹಾಗೂ ಸ್ಯಾನಿಟೈಸರ್ ನೀಡಿದ್ದಾರೆ.