ETV Bharat / state

ವಿಲೇವಾರಿ ಸಮಸ್ಯೆ: ಟ್ರ್ಯಾಕ್ಟರ್​​​ನಲ್ಲಿ ಕಸ ತಂದು ಬೆಳಗಾವಿ ಪಾಲಿಕೆ ಆಯುಕ್ತರ ಮನೆ ಮುಂದೆ ಸುರಿದ ಶಾಸಕ!

ತನ್ನ ಕ್ಷೇತ್ರದಲ್ಲಿ ಕಸ ವಿಲೇವಾರಿ ಮಾಡಿಲ್ಲವೆಂದು ಆಕ್ರೋಶಗೊಂಡ ಶಾಸಕರು ಟ್ರ್ಯಾಕ್ಟರ್​ನಲ್ಲಿ ಕಸ ತುಂಬಿಸಿ ಪಾಲಿಕೆ ಆಯುಕ್ತರ ಮನೆ ಮುಂದೆ ಸುರಿದಿದ್ದಾರೆ. ಸಮಸ್ಯೆಗೆ ಪರಿಹಾರ ನೀಡದಿದ್ದರೆ ಪ್ರತಿ ಭಾನುವಾರ ಕಸ ಸುರಿಯುವುದಾಗಿ ಎಚ್ಚರಿಸಿದ್ದಾರೆ.

mla-damped-trash-infront-of-palike-commissioner-house-at-belagavi
ಟ್ರ್ಯಾಕ್ಟರ್​​​ನಲ್ಲಿ ಕಸ ತಂದು ಬೆಳಗಾವಿ ಪಾಲಿಕೆ ಆಯುಕ್ತರ ಮನೆ ಮುಂದೆ ಸುರಿದ ಶಾಸಕ!
author img

By

Published : Jul 25, 2021, 11:43 AM IST

Updated : Jul 25, 2021, 12:20 PM IST

ಬೆಳಗಾವಿ: ನಗರದಲ್ಲಿ ಕಸ ವಿಲೇವಾರಿ ಸರಿಯಾಗಿ ಆಗದ ಹಿನ್ನೆಲೆ ಮಹಾನಗರ ಪಾಲಿಕೆ ಆಯುಕ್ತರ ಮನೆ ಮುಂದೆಯೇ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ಕಸ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.

ತಮ್ಮ ಕ್ಷೇತ್ರದಲ್ಲಿ‌ ಸರಿಯಾಗಿ ತ್ಯಾಜ್ಯ ವಿಲೇವಾರಿ ಆಗುತ್ತಿಲ್ಲ ಎಂದು ಇಲ್ಲಿನ ವಿಶ್ವೇಶ್ವರಯ್ಯ ನಗರದಲ್ಲಿರುವ ಪಾಲಿಕೆ ಆಯುಕ್ತ ಜಗದೀಶ್ ಕೆ.ಹೆಚ್. ಅವರ ನಿವಾಸದ ಮುಂದೆ ಶಾಸಕ ಅಭಯ್ ಪಾಟೀಲ ಸ್ವತಃ ಟ್ರ್ಯಾಕ್ಟರ್ ಚಲಾಯಿಸಿಕೊಂಡ ಬಂದು ಕಸ ಸುರಿದಿದ್ದಾರೆ.

ಟ್ರ್ಯಾಕ್ಟರ್​​​ನಲ್ಲಿ ಕಸ ತುಂಬಿ ಪಾಲಿಕೆ ಆಯುಕ್ತರ ಮನೆ ಮುಂದೆ ಸುರಿದ ಶಾಸಕ

ಬಳಿಕ ಮಹಾನಗರ ಪಾಲಿಕೆ ಸಿಬ್ಬಂದಿ ಕಸವನ್ನು ಸ್ವಚ್ಛಗೊಳಿಸಿದರು. ಈ ವೇಳೆ ಮಾತನಾಡಿದ ಶಾಸಕ ಅಭಯ್ ಪಾಟೀಲ್, ಕಸ ವಿಲೇವಾರಿಗೆ ಸಂಬಂಧಿಸಿದಂತೆ ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ‌ಪ್ರಯೋಜನವಾಗಲಿಲ್ಲ. ಹೀಗಾಗಿ ಪಾಲಿಕೆ ಆಯುಕ್ತರ ಖುದ್ದು ಭೇಟಿಯಾಗಿ ತಿಳಿಸಿದರೂ ಕ್ರಮಕೈಗೊಂಡಿಲ್ಲ, ಅನಿವಾರ್ಯವಾಗಿ ಕಸ ಹಾಕಿದ್ದೇನೆ. ಸಮಸ್ಯೆ ಬಗೆಹರಿಯದಿದ್ದರೆ ಪ್ರತಿ ಭಾನುವಾರ ಕಸ ಸುರಿಯುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.

ಓದಿ: ಜೊಲ್ಲೆ ರಾಜೀನಾಮೆ ನೀಡೋವರೆಗೂ ಅವರ ನಿತ್ಯ ಮೊಟ್ಟೆ ನೀಡುವ ಚಳವಳಿ: ಕುಸುಮಾ ಹನುಮಂತರಾಯಪ್ಪ

Last Updated : Jul 25, 2021, 12:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.