ಬೆಳಗಾವಿ : ನೇಕಾರರಿಂದ ನೇರವಾಗಿ ಸೀರೆ ಖರೀದಿಸುವ ಮೂಲಕ ಸಂಕಷ್ಟದ ಸಮಯದಲ್ಲಿ ನೆರವಿಗೆ ಧಾವಿಸುವಂತೆ ರಾಜ್ಯದ 224 ಶಾಸಕರಿಗೆ ಪತ್ರ ಬರೆಯಲಾಗಿದೆ ಎಂದು ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಲಾಕ್‌ಡೌನ್ ಹಿನ್ನೆಲೆ ನೇಕಾರಿಕೆ ಮಾಡಿ ಜೀವನ ನಡೆಸುತ್ತಿದ್ದ ಜನರು ತುತ್ತು ಅನ್ನಕ್ಕಾಗಿ ಕಷ್ಟ ಪಡುತ್ತಿದ್ದಾರೆ. ಹೀಗಾಗಿ ತಮ್ಮ ಕ್ಷೇತ್ರದ ಕೊರೊನಾ ವಾರಿಯರ್ಸ್ಗೆ ಶಾಸಕರು ಸನ್ಮಾನ ಮಾಡುವಾಗ ನೇಕಾರರಿಂದ ನೇರವಾಗಿ ಸೀರೆ ಖರೀದಿಸುವಂತೆ ರಾಜ್ಯದ ಎಲ್ಲಾ ಶಾಸಕರಿಗೆ ಪತ್ರ ಬರೆದಿರುವುದಾಗಿ ತಿಳಿಸಿದರು.
![MLA Abhay Patil's plea to buy saris directly from weavers](https://etvbharatimages.akamaized.net/etvbharat/prod-images/kn-bgm-03-05-mla-abhaya-pattil-photo-01-ka10029_05062020204040_0506f_03503_875.jpeg)
ರಾಜ್ಯದ ಎಲ್ಲಾ ಶಾಸಕರು ನೇಕಾರರಿಂದ ಸೀರೆ ಖರೀದಿ ಮಾಡಿದರೆ ಅವರು ಜೀವನ ನಡೆಸಲು ಸಹಾಯಕವಾಗಲಿದೆ. ಜೊತೆಗೆ ಕೊರೊನಾ ವಾರಿಯರ್ಸ್ಗೆ ಗೌರವ ಸಲ್ಲಿಸಿದಂತೆಯೂ ಆಗುತ್ತದೆ. ಕೊರೊನಾ ವಾರಿಯರ್ಸ್ಗಳಾದ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಪೊಲೀಸ್ ಸಿಬ್ಬಂದಿ ಸೇರಿ ಮತ್ತಿತರರಿಗೆ ಹಂಚಿಕೆ ಮಾಡಲು ನೇಕಾರರಿಂದ ನೇರವಾಗಿ ಸೀರೆ ಖರೀದಿಸುವಂತೆ ಸರ್ಕಾರಕ್ಕೆ ಈಗಾಗಲೇ ಮನವಿ ಮಾಡಿದ್ದೇನೆ ಎಂದರು.