ETV Bharat / state

21 ದಿನ ಲಾಕ್​ಡೌನ್ ಆದೇಶವನ್ನು ಪ್ರತಿಯೊಬ್ಬರು ಪಾಲಿಸಿ : ಸಚಿವ ಶ್ರೀಮಂತ ಪಾಟೀಲ - ಸಚಿವ ಶ್ರೀಮಂತ ಪಾಟೀಲ ಹೇಳಿಕೆ

ಕೊರೊನಾ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ‌ ಕರೆ ನೀಡಿರುವ 21 ದಿನಗಳ ಲಾಕ್​ಡೌನ್​ಗೆ ಎಲ್ಲರೂ ಬೆಂಬಲಿಸೋಣ ಎಂದು ಸಚಿವ ಶ್ರೀಮಂತ ಪಾಟೀಲ ಮನವಿ ಮಾಡಿದ್ದಾರೆ.

Shrimant Patil
ಶ್ರೀಮಂತ ಪಾಟೀಲ
author img

By

Published : Mar 31, 2020, 12:50 PM IST

ಚಿಕ್ಕೋಡಿ : ದೇಶಾದ್ಯಂತ ಆವರಿಸಿರುವ ಕೊರೊನಾ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ‌ 21 ದಿನಗಳ ವರೆಗೆ ಲಾಕ್​ಡೌನ್ ಘೋಷಣೆ ಮಾಡಿದ್ದಾರೆ. ನಾವೆಲ್ಲರು ಇದಕ್ಕೆ ಬೆಂಬಲ ನಿಡೋಣ ಎಂದು ಸಚಿವ ಶ್ರೀಮಂತ ಪಾಟೀಲ ಹೇಳಿದರು.

ಸಚಿವ ಶ್ರೀಮಂತ ಪಾಟೀಲ ಮನವಿ

ಕಾಗವಾಡ ತಾಲೂಕಿನ ಕೆಂಪವಾಡ ಗ್ರಾಮದಲ್ಲಿ‌ ಮಾಧ್ಯಮದವರಂದಿಗೆ ಮಾತನಾಡಿದ ಅವರು, ನನ್ನ ಕ್ಷೇತ್ರದ ಹಾಗೂ ನಾಡಿನ ಜನತೆಗೆ ಮನವಿ ಮಾಡುತ್ತೇನೆ, ದಯಮಾಡಿ ಯಾರೂ ತಮ್ಮ-ತಮ್ಮ ಮನೆಯಿಂದ ಹೊರ ಬರಬೇಡಿ. ಎಲ್ಲ ನಾಗರಿಕರಿಗೆ ದಿನನಿತ್ಯ ಉಪಯೋಗಿಸುವ ಎಲ್ಲಾ ಅಗತ್ಯ ವಸ್ತುಗಳನ್ನು ಪೂರೈಸಲು ಸರ್ಕಾರ ಕ್ರಮಕೈಗೊಂಡಿದೆ. ಸಾರ್ವಜನಿಕರು ತಮ್ಮ ಮನೆಗಳಿಂದ ಹೊರಗೆ ಬರದೆ 21 ದಿನಗಳ ಕಾಲ ಮನೆಯಲ್ಲಿದ್ದು ಕೊರೊನಾ ಹರಡದಂತೆ ನೀವು ಹಾಗೂ ನಿಮ್ಮ ಕುಟುಂಬದವರು ಎಚ್ಚರದಿಂದಿರಿ ಎಂದು ಹೇಳಿದರು.

ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ವೈದ್ಯಾಧಿಕಾರಿಗಳು ನಮಗಾಗಿ ಹಗಲು-ರಾತ್ರಿ ಎನ್ನದೆ ಶ್ರಮಿಸುತ್ತಿದ್ದಾರೆ. ಅವರ ಮನವಿಗೆ ಸ್ಪಂದಿಸಿ ಸಹಕರಿಸಬೇಕಾಗಿ ವಿನಂತಿ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.