ಚಿಕ್ಕೋಡಿ : ರಾಜ್ಯದಲ್ಲಿ ಯಾವುದೇ ರೀತಿಯ ಬದಲಾವಣೆ ಆಗೊದಿಲ್ಲ. ಎಲ್ಲವೂ ಊಹಾಪೋಹಗಳಷ್ಟೆ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.
ತಾಲೂಕಿನ ಅಂಕಲಿ ಗ್ರಾಮದಲ್ಲಿ ಹಿರಿಯ ಸಚಿವರು ರಾಜೀನಾಮೆ ನೀಡಿ ಹೊಸಬರಿಗೆ ಅವಕಾಶ ನೀಡಲಾಗುತ್ತದೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಯಾವುದೇ ಬದಲಾವಣೆ ಆಗೋದಿಲ್ಲ. ಎಲ್ಲವೂ ಸುಳ್ಳು, ಎಲ್ಲಾ ಊಹಾಪೋಹಗಳು. ಕೆಲವರು ತಮ್ಮ ತಮ್ಮ ಮನಸ್ಸಿಗೆ ಬಂದಂತೆ ಸೃಷ್ಟಿ ಮಾಡಿಕೊಂಡು ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆದರೆ, ರಾಜ್ಯದಲ್ಲಿ ಯಾವುದೇ ರೀತಿಯ ಬದಲಾವಣೆ ಇಲ್ಲ. ಇವತ್ತು ಅಧಿವೇಶನ ನಡೆಯುತ್ತಿದೆ. ಬಿಜೆಪಿ ರೈತರ ಪರವಾಗಿ, ಹಿಂದುಳಿದವರ ಪರವಾಗಿ ಕೆಲಸ ಮಾಡುತ್ತಾ, ಅಭಿವೃದ್ಧಿಯತ್ತ ಸಾಗುತ್ತಿದೆ. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ. ಸಹಿಸಿಕೊಳ್ಳಲಾಗದವರು ಈ ರೀತಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಕಾಶ್ಮೀರಿ ಫೈಲ್ಸ್ ಚಿತ್ರದ ವಿವಾದ ವಿಚಾರಕ್ಕೆ ಪ್ರತಿಕ್ರಿಯಿಸಿ, ಒಂದು ಚಿತ್ರ ರಾಷ್ಟ್ರೀಯ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದೆ. ದೇಶದ ಸಮಸ್ಯೆಯನ್ನು ಜನರಿಗೆ ತಲುಪಿಸಿದರೆ ಅದು ಕೋಮುವಾದವಲ್ಲ. ಕಾಶ್ಮೀರಿ ಫೈಲ್ಸ್ ಚಿತ್ರ ನಾನು ನೋಡಿಲ್ಲ, ಚೆನ್ನಾಗಿದೆ ಅಂದಿದ್ದಾರೆ. ನಾನು ಕೂಡ ಆ ಚಿತ್ರವನ್ನ ನೋಡುತ್ತೇನೆ.
ಕಾಂಗ್ರೇಸ್‌ನವರೆ ಒಂದು ಸಮುದಾಯದವನ್ನ ಇಟ್ಟುಕೊಂಡು ಕೋಮುವಾದ ಸೃಷ್ಟಿಸುತ್ತಿದ್ದಾರೆ. ಕಾಂಗ್ರೆಸ್‌ನವರು ಹಿಜಾಬ್ ವಿವಾದ ಸೃಷ್ಟಿಸಿದ್ದರು. ವಿಶ್ಲೇಷಣೆ ಮಾಡಲು ಆಗದೇ ಅಧಿವೇಶನದಿಂದ ಧರಣಿ ಸತ್ಯಾಗ್ರಹ ಮಾಡಿ ಹೋಗಿದ್ದರು ಎಂದು ಕಿಡಿಕಾರಿದರು.