ಚಿಕ್ಕೋಡಿ: ಹಾಲು ಸಿಗುವುದಿಲ್ಲ ಎಂದು ಗಾಬರಿಯಾಗಬೇಡಿ. ರಾಜ್ಯದ ಎಲ್ಲಾ ಕಡೆ ನಂದಿನಿ ಹಾಲನ್ನು ಪೂರೈಕೆ ಮಾಡಲಾಗುತ್ತದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಭರವಸೆ ನೀಡಿದರು.
ನಿತ್ಯ ಬೇಕಾಗುವ ಮುಖ್ಯ ವಸ್ತುಗಳಲ್ಲಿ ಹಾಲು ಕೂಡಾ ಒಂದು. ಉತ್ಪಾದನಾ ಘಟಕದಲ್ಲಿ ಕೆಲಸ ಮಾಡುವ ಕಾರ್ಮಿಕರು ಅಂತರ ಕಾಯ್ದುಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ. ಎಲ್ಲ ರೈತರು, ಗ್ರಾಹಕರು ಸಹಕಾರ ನೀಡಿ ಎಂದು ಮಾಧ್ಯಮಗೋಷ್ಠಿಯಲ್ಲಿ ಮನವಿ ಮಾಡಿದರು.
ಕೊರೊನಾವನ್ನು ಕೊನೆಗಾಣಿಸಿ, ಆರೋಗ್ಯಕರ ಕರ್ನಾಟಕ ಕಟ್ಟೋಣ. ಇದಕ್ಕೆ ಎಲ್ಲರೂ ಸಹಕರಿಸುವಂತೆ ವಿನಂತಿಸಿಕೊಂಡರು.