ETV Bharat / state

ರಾಜ್ಯೋತ್ಸವ ಸಮೀಪಿಸುತ್ತಿದ್ದಂತೆ ಬೆಳಗಾವಿಯಲ್ಲಿ ಮತ್ತೆ ಬಾಲ ಬಿಚ್ಚಿದ ಎಂಇಎಸ್ ಪುಂಡರು - ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದ ಎಂಇಎಸ್ ಕಾರ್ಯಕರ್ತರು

ಇಂದು ಎಂಇಎಸ್ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಈ ವೇಳೆ, ಪಾಲಿಕೆ ಎದುರಿನ ಕನ್ನಡ ಧ್ವಜಸ್ತಂಭ ತೆರವುಗೊಳಿಸಬೇಕು ಹಾಗೂ ನಗರದಲ್ಲಿ ಮರಾಠಿ ಬೋರ್ಡ್ ಹಾಕಲು ಅನುಮತಿ ನೀಡಬೇಕೆಂದು ಆಗ್ರಹಿಸಿದರು.

MES activists protested in Belgaum
ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದ ಎಂಇಎಸ್ ಕಾರ್ಯಕರ್ತರು
author img

By

Published : Oct 25, 2021, 4:07 PM IST

ಬೆಳಗಾವಿ: ಪಾಲಿಕೆ ಎದುರಿನ ಕನ್ನಡಧ್ವಜಸ್ತಂಭ ತೆರವುಗೊಳಿಸಬೇಕು ಹಾಗೂ ನಗರದಲ್ಲಿ ಮರಾಠಿ ಬೋರ್ಡ್ ಹಾಕಲು ಅನುಮತಿ ನೀಡಬೇಕೆಂದು ಆಗ್ರಹಿಸಿ ನಾಡದ್ರೋಹಿ ಎಂಇಎಸ್ ಪುಂಡರು ನಗರದಲ್ಲಿಂದು ಪ್ರತಿಭಟನಾ ಮೆರವಣಿಗೆ ನಡೆಸಿದರು.

ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದ ಎಂಇಎಸ್ ಕಾರ್ಯಕರ್ತರು

ಇಲ್ಲಿನ ಸಂಭಾಜೀ ವೃತ್ತದಲ್ಲಿ ಸೇರಿದ ಎಂಇಎಸ್ ಕಾರ್ಯಕರ್ತರು, ಡಿಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಇದಕ್ಕೂ ಮೊದಲು ಸಂಭಾಜೀ ವೃತ್ತದಲ್ಲಿ ಧರಣಿ ಕುಳಿತ ಕಾರ್ಯಕರ್ತರು ರಸ್ತೆಯಲ್ಲಿ ಹಾಕಿದ್ದ ಬ್ಯಾರಿಕೇಡ್ ತಳ್ಳಿ ಪುಂಡಾಟ ನಡೆಸಿ ಪೊಲೀಸರ ಜೊತೆ ವಾಗ್ವಾದ ನಡೆಸಿದರು.

ಮರಾಠಿ ಭಾಷಿಕರ ಮೇಲೆ ಅನ್ಯಾಯವಾಗುತ್ತಿದೆ. ಗಡಿ ಭಾಗದ ಪ್ರದೇಶಗಳಾದ ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಮೆರವಣಿಗೆ ಉದ್ಧಕ್ಕೂ ಘೋಷಣೆ ಕೂಗಿದರು.

ವಿವಿಧ ಬೇಡಿಗೆಗಳನ್ನು ಡಿಸಿ ಮುಂದಿಟ್ಟ ಎಂಇಎಸ್ ಕಾರ್ಯಕರ್ತರು :

ಪ್ರತಭಟನಾ ಸ್ಥಳಕ್ಕೆ ಮನವಿ ಸ್ವೀಕರಿಸಲು ಬಂದ ಅಪರ ಜಿಲ್ಲಾಧಿಕಾರಿ ಅಶೋಕ್ ದುಡಗುಂಟಿ ಎದುರೆ ಪುಂಡರು ನಾಡದ್ರೋಹಿ ಘೋಷಣೆ ಕೂಗಿದರು. ಮಹಾನಗರ ಪಾಲಿಕೆ ಎದುರಿನ ಕನ್ನಡ ಧ್ಚಜ ತೆರವು ಮಾಡಬೇಕು. ಸ್ಮಾರ್ಟ್ ಸಿಟಿ ಬೋರ್ಡ್‌ಗಳಲ್ಲಿ ಮರಾಠಿ ಭಾಷೆ ಬೋರ್ಡ್ ಅಳವಡಿಸಬೇಕು. ಮರಾಠಿ ಭಾಷೆಯಲ್ಲಿ ಸರ್ಕಾರಿ ದಾಖಲೆ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.

ಎಡಿಸಿಗೆ ಪುಂಡರ ಅವಾಜ್:

ಮನವಿ ಸ್ವೀಕರಿಸಲು ಬಂದಿದ್ದ ಅಪರ ಜಿಲ್ಲಾಧಿಕಾರಿಗೆ ಎಂಇಎಸ್ ಪುಂಡರು ಅಪಮಾನ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಎಡಿಸಿ ಅಶೋಕ್ ದುಡಗುಂಟಿ ಅವರ ಮೇಲೆ ಏಕವಚನದಲ್ಲೇ ವಾಗ್ದಾಳಿ ನಡೆಸಿ ಪುಂಡಾಟಿಕೆ ಪ್ರದರ್ಶಿಸಿದರು. ಮೊದಲು ಮಹಾನಗರ ಪಾಲಿಕೆ ಎದುರುಗಿನ ಕೆಂಪು ಹಳದಿ ಬಾವುಟ ಕಿತ್ತೆಸಿ ಎಂದ ಏಕವಚನದಲ್ಲೇ ಎಡಿಸಿಗೆ ಎಂಇಎಸ್ ಪುಂಡರು ಅವಾಜ್ ಹಾಕಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಅಡಕೆ ಕಳ್ಳರ ಕಾಟಕ್ಕೆ ಬೆಸತ್ತ ದಾವಣಗೆರೆ ರೈತರು: ಪೊಲೀಸರು ಏನ್​ ಮಾಡ್ತಿದ್ದಾರೆ ಅಂತ ಕೇಳ್ಬೇಡಿ..!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.