ಅಥಣಿ(ಬೆಳಗಾವಿ): ಬೆಳಗಾವಿ ಜಿಲ್ಲೆಯ ಕೃಷ್ಣಾ ನದಿ ತೀರದಲ್ಲಿ ನೀರಿನ ಹರಿವು ಹೆಚ್ಚುತ್ತಿರುವ ಬೆನ್ನಲ್ಲೇ ಜಿಲ್ಲಾಡಳಿತ ಹೈಅಲರ್ಟ್ ಘೋಷಿಸಿದೆ.
ಈ ಹಿನ್ನೆಲೆ ಅಥಣಿ ತಹಶೀಲ್ದಾರ ದುಂಡಪ್ಪಾ ಕೋಮಾರ ನದಿ ತೀರದ ಗ್ರಾಮಗಳಾದ ಇಂಗಳಗಾಂವ, ಸಪ್ತಸಾಗರ, ತೀರ್ಥ, ದರೂರ, ಕವಟಕೊಪ್ಪ, ಹಲ್ಯಾಳ ಸೇರಿ ಹಲವು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮುನ್ನೆಚ್ಚರಿಕಾ ಕ್ರಮವಾಗಿ ಜನರಿಗೆ ನದಿ ತೀರದ ಕಡೆಗೆ ತೆರಳದಂತೆ ಸೂಚಿಸಲಾಗಿದೆ ಹಾಗೂ ಜಾನುವಾರುಗಳ ಮೇಲೆ ನಿಗಾ ಇಡುವಂತೆ ಡಂಗುರ ಸಾರಲಾಗಿದೆ. ನೀರಿನ ಪ್ರಮಾಣ ಹೆಚ್ಚಾದರೆ ನದಿ ತೀರದ ಜನರನ್ನು ಸ್ಥಳಾಂತರಿಸಿ ಕಾಳಜಿ ಕೇಂದ್ರಗಳಲ್ಲಿ ಇರಿಸಲು ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಜನರು ಸಹಕರಿಸುವಂತೆ ತಹಶೀಲ್ದಾರ್ ದುಂಡಪ್ಪಾ ಕೋಮಾರ ಮನವಿ ಮಾಡಿದ್ದಾರೆ.