ETV Bharat / state

ಮತ್ತೆ ಸುರಿದ ಧಾರಾಕಾರ ಮಳೆಗೆ ತಬ್ಬಿಬ್ಬಾದ ಗಡಿ‌ಭಾಗದ ರೈತರು!

ಚಿಕ್ಕೋಡಿ ತಾಲೂಕಿನಲ್ಲಿ ಪ್ರಸಕ್ತ ಸಾಲಿನ ಪ್ರವಾಹ ಮತ್ತು ಸುರಿದ ಮಳೆಯ ಅಬ್ಬರದಿಂದಾಗಿ ಕೃಷ್ಣಾ, ದೂಧಗಂಗಾ, ವೇದಗಂಗಾ, ಪಂಚಗಂಗಾ‌ ಮತ್ತು ಚಿಕೋತ್ರಾ ನದಿ ತೀರದ 30 ಕ್ಕೂ ಹೆಚ್ಚು ಗ್ರಾಮಗಳಲ್ಲಿ 31 ಸಾವಿರ ಹೆಕ್ಟೆರ್​ಗಿಂತ ಹೆಚ್ಚು ಬೆಳೆ ಹಾನಿಯಾಗಿದೆ.

author img

By

Published : Oct 14, 2019, 6:11 AM IST

ಮತ್ತೆ ಸುರಿದ ಧಾರಾಕಾರ ಮಳೆಗೆ ತಬ್ಬಿಬ್ಬಾದ ಗಡಿ‌ಭಾಗದ ರೈತರು

ಚಿಕ್ಕೋಡಿ: ಪ್ರಸಕ್ತ ಸಾಲಿನಲ್ಲಿನ ಮುಂಗಾರು ಮಳೆಯ ಅಬ್ಬರದಿಂದ ಬಂದೆರಗಿದ ಪ್ರವಾಹದಿಂದಾಗಿ ರೈತರು ಕುಗ್ಗಿಹೋಗಿದ್ದಾರೆ. ಇನ್ನೇನು ಚೇತರಿಸಿಕೊಳ್ಳುವಷ್ಟರಲ್ಲೇ ಮತ್ತೆ ಕಳೆದ ನಾಲ್ಕೈದು ದಿನದಿಂದ ನಿರಂತರ ಸುರಿದ ಧಾರಾಕಾರ ಮಳೆಯಿಂದಾಗಿ ಬೆಳೆದ ಪೈರುಗಳು ನಾಶವಾಗಿದ್ದು, ರೈತರು ಇನ್ನಷ್ಟು ಆತಂಕಕ್ಕೊಳಗಾಗಿದ್ದಾರೆ.

ಮತ್ತೆ ಸುರಿದ ಧಾರಾಕಾರ ಮಳೆಗೆ ತಬ್ಬಿಬ್ಬಾದ ಗಡಿ‌ಭಾಗದ ರೈತರು

ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಶೇಂಗಾ, ಮೆಣಸಿನಕಾಯಿ, ಸೌತೆಕಾಯಿ, ಟೊಮೆಟೊ, ಚೆಂಡು ಹೂಗಳು, ತಂಬಾಕು, ಬೆಳೆದು ನಿಂತ ಮೆಕ್ಕೆಜೋಳ ಮತ್ತು 15 ದಿನಗಳ ಹಿಂದೆಯಷ್ಟೆ ನಾಟಿ ಮಾಡಿದ್ದ ಕಬ್ಬು ಹೀಗೆ ವಿವಿಧ ಬೆಳೆಗಳಿಗೆ ಹಾನಿ ಉಂಟಾಗಿದೆ. ಇದರಿಂದಾಗಿ ರೈತರ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ಚಿಕ್ಕೋಡಿ ತಾಲೂಕಿನಲ್ಲಿ ಪ್ರಸಕ್ತ ಸಾಲಿನ ಪ್ರವಾಹ ಮತ್ತು ಸುರಿದ ಮಳೆಯ ಅಬ್ಬರದಿಂದಾಗಿ ಕೃಷ್ಣಾ, ದೂಧಗಂಗಾ, ವೇದಗಂಗಾ, ಪಂಚಗಂಗಾ‌ ಮತ್ತು ಚಿಕೋತ್ರಾ ನದಿ ತೀರದ 30 ಕ್ಕೂ ಹೆಚ್ಚು ಗ್ರಾಮಗಳಲ್ಲಿ 31 ಸಾವಿರ ಹೆಕ್ಟೆರ್​ಗಿಂತ ಹೆಚ್ಚು ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

ರೈತರ ಬದುಕು ಹಸನಾಗಲು ಸರ್ಕಾರ, ಸ್ಥಳೀಯ ಜನಪ್ರತಿನಿಧಿಗಳು ಮತ್ತು‌ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಿ ಶೀಘ್ರವೆ ಪರಿಹಾರ ಒದಗಿಸಿಕೊಡಲು ಪ್ರಯತ್ನಿಸಬೇಕೆಂಬುವುದು ರೈತರ ಒತ್ತಾಸೆಯಾಗಿದೆ.

Intro:ಮತ್ತೆ ಧಾರಾಕಾರ ಮಳೆ : ಆತಂಕದಲ್ಲಿ ಗಡಿ‌ಭಾಗದ ರೈತರು Body:

ಚಿಕ್ಕೋಡಿ :
ಸ್ಟೋರಿ

ಪ್ರಸಕ್ತ ಸಾಲಿನಲ್ಲಿನ ಮುಂಗಾರು ಮಳೆಯ ಅಬ್ಬರದಿಂದ ಸುರಿದ ಮಳೆ ಹಾಗೂ ಬಂದೆರಗಿದ ಪ್ರವಾಹದಿಂದಾಗಿ ರೈತರು ಚೇತರಿಸಿಕೋಳ್ಳುವಸ್ಟರಲ್ಲೆ ಮತ್ತೆ ಕಳೆದ ನಾಲ್ಕೈದು ದಿನದಿಂದ ನಿರಂತರ ಸುರಿದ ಧಾರಾಕಾರ ಮಳೆಯಿಂದಾಗಿ ಬೆಳೆದ ಪೈರುಗಳು ನಾಶವಾಗಿದ್ಧು ರೈತರು ಇನ್ನಷ್ಟು ಆತಂಕಕ್ಕೊಳಗಾಗಿದ್ದಾರೆ.

ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಶೇಂಗಾ, ಮೆನಸಿನಕಾಯಿ, ಸೌತೆಕಾಯಿ, ಟೊಮೆಟೊ, ಚೆಂಡು ಹೂಗಳು, ತಂಬಾಕು, ಬೆಳೆದು ನಿಂತ ಮೆಕ್ಕೆಜೋಳ ಮತ್ತು 15 ದಿನಗಳ ಹಿಂದೆ ನಾಟಿ ಮಾಡಿದ ಕಬ್ಬು ಹೀಗೆ ವಿವಿಧ ಬೆಳೆಗಳಿಗೆ ಹಾನಿ ಉಂಟಾಗಿದೆ ಇದರಿಂದಾಗಿ ರೈತರ ಕೈಗೆ ಬಂದ ತುತ್ತು ಬಾಯಿಗೆ ಬರುತ್ತಿಲ್ಲ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ನಿರಂತರ ಮಳೆಯಿಂದಾಗಿ ಹೊಲ - ಗದ್ದೆಗಳಲ್ಲಿನ ನೀರು ಹೆಚ್ಚಾಗಿ ರಸ್ತೆ ಬದಿಗೆ ಕಾಲುವೆಯಂತೆ ಹರಿಯುತ್ತಿದೆ. ಮೆಕ್ಕೆಜೋಳ, ಶೇಂಗಾ ಮತ್ತು ಸೋಯಾ ತಗೆಯಲು ಮಳೆ ಅಡ್ಡಿ ಮಾಡಿದೆ. ಹೊಲ-ಗದ್ದೆಗಳಲ್ಲಿ ಹಸಿ ಇರುವುದರಿಂದ ಕಸ ಬೆಳೆದಿದ್ದು, ಹೊಲದಲ್ಲಿ ಕೆಲಸ ಮಾಡಲು ಕಾರ್ಮಿಕರು ಹಿಂಜರಿಯುತ್ತಿದ್ದಾರೆ.

ನಿರಂತರ ಮಳೆಯಿಂದಾಗಿ ಶೇಂಗಾ ಮತ್ತು ಸೋಯಾ ಮೊಳಕೆ ಒಡೆಯಬಹುದೆಂದು ಆತಂಕ ರೈತರಲ್ಲಿ ಕಾಡುತ್ತಿದೆ. ಕಳೆದ ಮೂರು ತಿಂಗಳಿಂದ ಕಬ್ಬಿನ ಗದ್ದೆಗಳಲ್ಲಿ ನೀರು ನಿಂತಿರುವುದರಿಂದ ಕಬ್ಬಿನ ಇಳುವರಿ ಕಡಿಮೆಯಾಗುತ್ತದೆ ಎನ್ನುತ್ತಿದ್ದಾರೆ ಕಬ್ಬು ಬೆಳೆಗಾರರು. ಕಳೆದ ಎರಡು ದಿನಗಳಿಂದ ಸುರಿದ ಗುಡುಗು ಮಿಂಚಿನ ಮಳೆ ನಡುಕು ಹುಟ್ಟಿಸಿದೆ.

ರೈತರ ಬದುಕು ಹಸನಾಗಲು ಸರ್ಕಾರ ಸ್ಥಳೀಯ ಜನಪ್ರತಿನಿಧಿಗಳು ಮತ್ತು‌ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಿ ಸರ್ಕಾರದಿಂದ ಶೀಘ್ರ ಪರಿಹಾರ ಒದಗಿಸಿಕೊಡಲು ಪ್ರಯತ್ನಿಸಬೇಕೆಂಬುವುದು ರೈತರ ಒತ್ತಾಸೆಯಾಗಿದೆ.

ಬೆಳೆ ಪರಿಹಾರಕ್ಕೆ ಒತ್ತಾಯ :

ಚಿಕ್ಕೋಡಿ ತಾಲೂಕಿನಲ್ಲಿ ಪ್ರಸಕ್ತ ಸಾಲಿನ ಪ್ರವಾಹ ಮತ್ತು ಸುರಿದ ಮಳೆಯ ಅಬ್ಬರದಿಂದಾಗಿ ಕೃಷ್ಣಾ, ದೂಧಗಂಗಾ, ವೇದಗಂಗಾ, ಪಂಚಗಂಗಾ‌ ಮತ್ತು ಚಿಕೋತ್ರಾ ನದಿ ತೀರದ 30 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕಬ್ಬು, ಸೊಯಾ, ಗೋವಿನಜೋಳ, ಮೆಕ್ಕೆಜೋಳ, ಶೇಂಗಾ ಸೇರಿದಂತೆ 31 ಸಾವಿರ ಹೆಕ್ಟೇರ್ ಗಿಂತ ಹೆಚ್ಚು ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

ಸರ್ಕಾರ ಆದಷ್ಟು ಬೇಗ ಬೆಳೆ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ಒದಗಿಸಿ ಕೊಡಿ ಎಂದು ನದಿ ತೀರದ ಸಂತ್ರಸ್ಥರು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತಿದ್ದಾರೆ.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.