ETV Bharat / state

ಬೆಳಗಾವಿಯಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ: ತಾತ್ಕಾಲಿಕ ಮಾರುಕಟ್ಟೆಗಳ ಶೆಡ್​​ ನೆಲಸಮ - ಬೆಳಗಾವಿಯಲ್ಲಿ ತಾತ್ಕಾಲಿಕ ಮಾರುಕಟ್ಟೆ

ಬಿರುಗಾಳಿ ಸಹಿತ ಭಾರಿ ಮಳೆ ಸುರಿದಿದೆ. ಇದರಿಂದ ಬೆಳಗಾವಿ ನಗರದ ಮಾಲಿನಿ ಸಿಟಿಯಲ್ಲಿ ತಾತ್ಕಾಲಿಕವಾಗಿ ಸ್ಥಾಪಿಸಿದ್ದ ಮಾರುಕಟ್ಟೆ ಶೆಡ್​ಗಳು ಹಾರಿ ಹೋಗಿವೆ. ಮಾರಾಟಕ್ಕೆ ಬಂದಿದ್ದ ರೈತರು ಕಂಗಾಲಾಗಿದ್ದಾರೆ.

heavy rain fall in belgavi
ಬಿರುಗಾಳಿ ಸಹಿತ ಭಾರಿ ಮಳೆ
author img

By

Published : Apr 16, 2020, 6:05 PM IST

ಬೆಳಗಾವಿ: ಕುಂದಾನಗರಿಯಲ್ಲಿ ಇಂದು ಸುರಿದ ಬಿರುಗಾಳಿ ಸಹಿತ ಭಾರಿ ಮಳೆಗೆ ತಾತ್ಕಾಲಿಕ ತರಕಾರಿ ಮಾರುಕಟ್ಟೆ ಶೆಡ್ ನೆಲಕ್ಕುರಳಿದೆ.

ಬಿರುಗಾಳಿ ಸಹಿತ ಭಾರಿ ಮಳೆ

ಲಾಕ್​ಡೌನ್​ ಹಿನ್ನೆಲೆ ನಗರದ ಮಾಲಿನಿ ಸಿಟಿಯಲ್ಲಿ ತಾತ್ಕಾಲಿಕ ತರಕಾರಿ‌ ಮಾರುಕಟ್ಟೆ ನಿರ್ಮಿಸಲಾಗಿತ್ತು. ಈ ಹಿಂದೆ ಎಪಿಎಂಸಿ ಆವರಣದಲ್ಲಿದ್ದ ಮಾರುಕಟ್ಟೆಯಲ್ಲಿ ಜನ ಜಂಗುಳಿ ಹೆಚ್ಚುತ್ತಿತ್ತು.

ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆ ಜಿಲ್ಲಾಡಳಿತ ನಗರದ ನಾಲ್ಕು ಕಡೆ ತಾತ್ಕಾಲಿಕ ತರಕಾರಿ ಮಾರುಕಟ್ಟೆ ನಿರ್ಮಿಸಲಾಗಿತ್ತು. ಇಂದು ಸುರಿದ ಮಳೆ, ಗಾಳಿಗೆ ಮಾರುಕಟ್ಟೆಯ ಶೆಡ್​ಗಳು ಹಾರಿ ಹೋಗಿವೆ. ಇನ್ನು ತರಕಾರಿ ಮಾರಾಟಕ್ಕೆ ಬಂದಿದ್ದ ರೈತರು ಪರದಾಡಿದರು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.