ETV Bharat / state

ಕೃಷಿ ಬಳಕೆಗೆ ಭೂಮಿ ಪಡೆದು ಮನೆ ನಿರ್ಮಾಣಕ್ಕೆ ಮುಂದಾದರೆ ಸರ್ಕಾರ ತಡೆಯಲೇಬೇಕಾಗುತ್ತದೆ: ಮಾಧುಸ್ವಾಮಿ

author img

By

Published : Dec 13, 2021, 7:40 PM IST

ಕೃಷಿ ಬಳಕೆಯ ಭೂಮಿಯನ್ನು ಮನೆ ನಿರ್ಮಾಣ ಮಾಡಿಕೊಳ್ಳಲು ಬಳಸಿದರೆ ಅದನ್ನು ಸರ್ಕಾರ ತಡೆಯುತ್ತದೆ ಎಂದು ಸಚಿವ ಮಾಧುಸ್ವಾಮಿ ಹೇಳಿದರು.

Government has to stop if the land for agricultural use goes ahead and build house: Madhuswamy
ಮಾಧುಸ್ವಾಮಿ

ಬೆಳಗಾವಿ: ಕೃಷಿ ಬಳಕೆಗೆ ಭೂಮಿ ಬಳಸಿದರೆ ನೀಡಲು ಅಭ್ಯಂತರ ಇಲ್ಲ. ಆದರೆ ಅಲ್ಲಿ ಮನೆ ಕಟ್ಟಲು ಮುಂದಾದರೆ ಸರ್ಕಾರ ತಡೆಯಲೇಬೇಕಾಗುತ್ತದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು. ವಿಧಾನ ಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಗಮನ ಸೆಳೆಯುವ ಸೂಚನೆ ಅಡಿ ಕೇಳಿದ ಪ್ರಶ್ನೆಗೆ ಕಂದಾಯ ಸಚಿವ ಆರ್. ಅಶೋಕ್ ಪರವಾಗಿ ಉತ್ತರಿಸಿ, ವಿಶೇಷ ಪ್ರಕರಣದಲ್ಲಿ ವಿನಾಯಿತಿ ನೀಡುವ ಅಧಿಕಾರ ಅಧಿಕಾರಿಗಳಿಗೆ ಇರಲಿದೆ. ಜನ ಕಾನೂನು ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಸಲಹೆ ನೀಡಿದರು.

ಕರ್ನಾಟಕ ಭೂಕಂದಾಯ ಅಧಿನಿಯಮ 1964 ರ 108 ರಡಿ ಕೃಷಿ ಉದ್ದೇಶಕ್ಕಾಗಿ ಬಳಸಲಾಗುವ ಭೂಮಿಯನ್ನು ಒಳಗೊಂಡ ಸರ್ವೆ ನಂ. ನ ಕನಿಷ್ಠ ವಿಸ್ತೀರ್ಣವನ್ನು ರಾಜ್ಯದ ಕೊಡಗು, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರಕನ್ನಡ ಜಿಲ್ಲೆಗಳಲ್ಲಿ 3 ಗುಂಟೆ ಇನ್ನುಳಿದ ಜಿಲ್ಲೆಗಳಲ್ಲಿ 5 ಗುಂಟೆಗೆ ನಿಗದಿಪಡಿಸಿ ಆದೇಶ ನೀಡಲಾಗಿದೆ.

ಇದರಿಂದ ರಾಜ್ಯದಲ್ಲಿನ ಸಣ್ಣ ಹಿಡುವಳಿ ಜಮೀನು ಹೊಂದಿರುವ (ಉದಾ: 5 ಗುಂಟೆ - 10 ಗುಂಟೆ) ರೈತರುಗಳು ತಮ್ಮ ಚಿಕ್ಕ ಹಿಡುವಳಿ ಜಮೀನುಗಳನ್ನು ತಮ್ಮ ಕುಟುಂಬದಲ್ಲಿ ವಿಭಾಗ ಮಾಡಿಕೊಳ್ಳಲು ಹಾಗೂ ತಮ್ಮ ಅವಶ್ಯಕತೆಗಾಗಿ ಬೇರೆಯವರಿಗೆ ಮಾರಾಟ ಮಾಡಲು ಸಾಧ್ಯವಾಗಿರುವುದಿಲ್ಲ. ಆದ್ದರಿಂದ, ಈ ಆದೇಶವನ್ನು ವಾಪಸ್ಸು ಪಡೆಯಬೇಕು ಎಂಬ ಮನವಿಯನ್ನ ಕೆ ಟಿ ಶ್ರೀಕಂಠೇಗೌಡ ಮಾಡಿದರು. ಇದಕ್ಕೆ ಮತ್ತೋರ್ವ ಜೆಡಿಎಸ್ ಸದಸ್ಯ ಭೋಜೆಗೌಡ ಸಹ ಬೆಂಬಲ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ನಲ್ಲಿ ಮಾಧುಸ್ವಾಮಿ ಉತ್ತರ

ಸರ್ಕಾರದ ನಿಲುವು ಸ್ಪಷ್ಟಪಡಿಸಿದ ಸಚಿವ ಮಾಧುಸ್ವಾಮಿ

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಮಾಧುಸ್ವಾಮಿ, ಕರ್ನಾಟಕ ಭೂಕಂದಾಯ ಅಧಿನಿಯಮ 1964 ರ ಕಲಂ 108 ರಡಿ ಕೃಷಿ ಉದ್ದೇಶಕ್ಕಾಗಿ ಬಳಸಲಾಗುವ ಭೂಮಿಯನ್ನು ಒಳಗೊಂಡಿರುವ ಸರ್ವೆ ನಂಬರ್ ಕಾಲಕಾಲಕ್ಕೆ ರಾಜ್ಯ ಸರ್ಕಾರದ ಮಂಜೂರಾತಿಯನ್ನು ಮಾಡಿದ್ದು, ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ನಿರ್ದೇಶಕರು (ಆಯುಕ್ತರು) ಪ್ರತಿಯೊಂದು ಜಿಲ್ಲೆಯಲ್ಲಿನ ವಿವಿಧ ವರ್ಗದ ಭೂಮಿಗಳಾಗಿ ಗೊತ್ತುವಡಿಸುವ ಕನಿಷ್ಠ ವಿಸ್ತೀರ್ಣಕ್ಕಿಂತ ಕಡಿಮೆ ಇರತಕ್ಕದ್ದಲ್ಲ ಎಂದು ನಿರ್ದಿಷ್ಟ ಪಡಿಸಲಾಗಿದೆ.

ರಾಜ್ಯಾದ್ಯಂತ ಕೃಷಿ ಭೂಮಿಯನ್ನು ತುಂಡು ತುಂಡು ಮಾಡಿ ಮಾರಾಟ ಮಾಡುತ್ತಿರುವುದು ಕಂಡು ಬಂದಿದ್ದು, ಈ ರೀತಿ ಮಾರಾಟ ಮಾಡಲಾದ ಭೂಮಿಗಳನ್ನು ಕೃಷಿ ಉದ್ದೇಶಕ್ಕೆ ಬಳಸುವ ಬದಲು ನಿವೇಶನಗಳನ್ನಾಗಿ ಬಳಸಲಾಗುತ್ತಿದೆ ಎಂದರು.

ಇದನ್ನೂ ಓದಿ: ನಾಡಿನ ರೈತರ ಬದುಕು ಚಿತ್ರಾನ್ನ; ಕೇಂದ್ರದಿಂದ ನಯಾಪೈಸೆ ಪರಿಹಾರ ಹಣ ಬಂದಿಲ್ಲ: ಸಿದ್ದರಾಮಯ್ಯ ಕೆಂಡಾಮಂಡಲ

ಇಂತಹ ಪ್ರವೃತ್ತಿಯು ನಗರ ಪುದೇಶಗಳ ಸುತ್ತ ಮುತ್ತ ಹೆಚ್ಚಾಗಿ ನಡೆಯುತ್ತಿದ್ದು, ಈ ರೀತಿಯ ವಹಿವಾಟುಗಳಿಂದ ಕ್ರಮಬದ್ಧವಾದ ನಗರೀಕರಣ ಸಾಧ್ಯವಾಗದೇ ಅವಶ್ಯಕ ಮೂಲ ಸೌಕರ್ಯಗಳಾದ ರಸ್ತೆ ಒಳಚರಂಡಿ ನೀರು ಇತ್ಯಾದಿಗಳನ್ನು ಪೂರೈಸಲು ಕಷ್ಟಕರವಾಗುತ್ತದೆ.

ಕಾರಣಗಳ ಹಿನ್ನೆಲೆಯಲ್ಲಿ ಕರ್ನಾಟಕ ಭೂಕಂದಾಯ ಅಧಿನಿಯಮ 1964 ರ ಕಲಂ 108 ರಡಿ ಕೃಷಿ ಉದ್ದೇಶಕ್ಕಾಗಿ ಬಳಸಲಾಗುವ ಭೂಮಿಯನ್ನು ಒಳಗೊಂಡಿರುವ ಸರ್ವೆ ನಂಬರಿನ (ಹಿಸ್ಸಾ ಸರ್ವೆ ನಂಬರ್ ಗಳನ್ನೊಳಗೊಂಡು) ಕನಿಷ್ಟ ವಿಸ್ತೀರ್ಣವನ್ನು ರಾಜ್ಯದ ಕೊಡಗು ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ, 3 ಗುಂಟೆ ಇನ್ನುಳಿದ ಜಿಲ್ಲೆಗಳಲ್ಲಿ 5 ಗುಂಟೆಗೆ ನಿಗದಿಪಡಿಸಲು ಆಯುಕ್ತರು, ಭೂಮಾಪನ ಇಲಾಖೆ ಇವರಿಗೆ ಅನುಮತಿಸಲಾಗಿರುತ್ತದೆ ಎಂದು ವಿವರಿಸಿದರು.

ನಿರ್ಬಂಧ ಜಾರಿಗೆ ನಿರ್ದೇಶನ

ಸದರಿ ಪತ್ರದಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಸರ್ವೆ ನಂಬರ್ ಹಾಗೂ ಪಹಣಿಗಳಲ್ಲಿ ಕನಿಷ್ಠ ವಿಸ್ತೀರ್ಣಕ್ಕಿಂತ ಕಡಿಮೆ ಇದ್ದಲ್ಲಿ ಹಾಗೆಯೇ ಮುಂದುವರಿಸಲು ಹಾಗೂ ಈ ನಿರ್ಬಂಧವನ್ನು ಜಾರಿಗೆ ತರುವಂತೆ ನಿರ್ದೇಶನ ನೀಡಲಾಗಿತ್ತು ಎಂದು ತಿಳಿಸಿದರು. ಈ ನಿರ್ದೇಶನದ ಮೇಲೆ ಭೂಮಾಪನ ಇಲಾಖೆ ಆಯುಕ್ತರು ಡಿಸೆಂಬರ್ 7ರಂದು ಹೊರಡಿಸಿರುವ ಆದೇಶದಂತೆ ಈ ಆದೇಶವು ಈಗಾಗಲೇ ಅಸ್ತಿತ್ವದಲ್ಲಿರುವ ಸರ್ವೆ ನಂಬರುಗಳು ಹೊಸ ಆದೇಶದಲ್ಲಿ ಸೂಚಿಸಲಾದ ಕನಿಷ್ಠ ವಿಸ್ತೀರ್ಣಕ್ಕಿಂತ ಕಡಿಮೆ ಇದ್ದರೂ ಸಹ ಅದಕ್ಕೆ ಅನ್ವಯಿಸುವುದಿಲ್ಲ.

ಇದಲ್ಲದೆ, ಸದರಿ ಆದೇಶವು ಕುಟುಂಬದೊಳಗೆ ಅನುವಂಶಿಕತೆ ಅಥವಾ ಉತ್ತರಾಧಿಕಾರವನ್ನು ನಿಗದಿಪಡಿಸಲು ಇನ್ನೂ ಸಣ್ಣ ಪ್ರಮಾಣದಲ್ಲಿ - ಜಮೀನನ್ನು ವಿಭಜನೆ ಮಾಡುವುದನ್ನು ನಿರ್ಬಂಧಿಸುವುದಿಲ್ಲ. ಪ್ರಸ್ತುತ ಜಂಟಿ ಅಥವಾ ಬಹುಮಾಲೀಕತ್ವ ಹೊಂದಿರುವ ಜಮೀನಿನ ವಹಣಿಗಳನ್ನು ಅಸ್ತಿತ್ವದಲ್ಲಿರುವ ಹಕ್ಕಿನ ಅನುಸಾರ ವಿಭಜಿಸಬಹುದಾಗಿದೆ ಎಂದು ಸಚಿವರು ವಿವರಿಸಿದರು.

ಹೊಸ ಆದೇಶವು ಕರ್ನಾಟಕ ಭೂಕಂದಾಯ ಅಧಿನಿಯಮ, 1964 ಮತ್ತು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯಿದೆಗಳ ಉಲ್ಲಂಘನೆಯನ್ನು ತಡೆಗಟ್ಟಲು ಹಾಗೂ ವಸತಿ ಪುದೇಶಗಳ ಯೋಜನಾ ಅಭಿವೃದ್ಧಿ ಮತ್ತು ಕೃಷಿಯ ರಕ್ಷಣೆಗಾಗಿ ಅವಶ್ಯಕವಾಗಿದೆ ಎಂಬ ವಿವರಣೆಯನ್ನು ಸಚಿವ ಮಾಧುಸ್ವಾಮಿ ವಿವರಣೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.