ಬೆಳಗಾವಿ: ಅನರ್ಹ ಶಾಸಕರು ಹಾಗೂ ಸುಪ್ರೀಂಕೋರ್ಟ್ ತೀರ್ಪಿನ ವಿಚಾರದಲ್ಲಿ ವ್ಯತಿರಿಕ್ತ ಹೇಳಿಕೆ ನೀಡುತ್ತಿರುವ ಮಾಜಿ ಸ್ಪೀಕರ್ ರಮೇಶ್ ಕುಮಾರ ಮಾನಸಿಕ ಅಸ್ವಸ್ಥ ಎಂದು ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಪಚುನಾವಣೆಯಲ್ಲಿ ಅನರ್ಹರು ಸೋಲಬೇಕು. ಈ ಮೂಲಕ ಸಂವಿಧಾನಕ್ಕೆ ಗೆಲುವು ಸಿಗಬೇಕು ಎಂಬ ಹೇಳಿಕೆಗೆ ಗೋಕಾಕ್ನಲ್ಲಿ ಪ್ರತಿಕ್ರಿಯಿಸಿದ ನಡಹಳ್ಳಿ, ಮಾಜಿ ಸ್ಪೀಕರ್ ಮಾನಸಿಕ ಅಸ್ವಸ್ಥನ ರೀತಿ ಮಾತನಾಡುತ್ತಿದ್ದಾರೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಎರಡು ನಾಲಿಗೆ, ಎರಡು ನಡೆ ಇರೋ ವ್ಯಕ್ತಿ. ಇವರನ್ನು ರಾಜ್ಯದ ಜನರು ನಂಬಲು ಸಾಧ್ಯವಿಲ್ಲ. ರಮೇಶ ಕುಮಾರ್ ಹೇಳಿಕೆಗಳು ಬಾಲಿಶವಾಗಿವೆ. ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಶಾಸಕರ ರಾಜೀನಾಮೆ ಅಂಗೀಕಾರ ಮಾಡಬೇಕಿತ್ತು ಎಂದು ಹೇಳಿದೆ.
ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಕುತಂತ್ರ ರಾಜಕಾರಣ ವಿರುದ್ಧ ಬಿಜೆಪಿ ಹೋರಾಟ ನಡೆಸುತ್ತಿದೆ. ರಾಜ್ಯದಲ್ಲಿ ಸ್ಥಿರ, ಅಭಿವೃದ್ಧಿ ಪರ ಸರ್ಕಾರ ರಚನೆಗೆ ಈ ಉಪಚುನಾವಣೆ ನಡೆಯುತ್ತಿದೆ ಎಂದರು.