ETV Bharat / state

ಈಟಿವಿ ಭಾರತ ಫಲಶೃತಿ: ಚಿಕ್ಕೋಡಿಯ 12 ಗ್ರಾಮಗಳಿಗೆ ಕುಡಿಯುವ ನೀರಿನ ವ್ಯವಸ್ಥೆ - ಈಟಿವಿ ಭಾರತ ಇಂಪ್ಯಾಕ್ಟ್

12 ಗ್ರಾಮಗಳ ಜನತೆ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದರು. ದಿನಂಪ್ರತಿ ನಾಲ್ಕೈದು ಕಿ.ಮೀ. ದೂರ ಕ್ರಮಿಸಿ ಬಾವಿಗಿಳಿದು ನೀರು ತರುವ ಪ್ರಸಂಗ ಎದುರಾಗಿತ್ತು. ಈ ಕುರಿತಂತೆ ಈಟಿವಿ ಭಾರತ ಪ್ರಕಟಿಸಿದ್ದ ವರದಿಗೆ ಅಲ್ಲಿನ ಅಧಿಕಾರಿಗಳು ಸ್ಪಂದಿಸಿದ್ದು, ನೀರಿನ ವ್ಯವಸ್ಥೆ ಮಾಡಿದ್ದಾರೆ.

ETV Bharat Impact
ಈಟಿವಿ ಭಾರತ ಇಂಪ್ಯಾಕ್ಟ್: 12 ಗ್ರಾಮಗಳಿಗೆ ಕುಡಿಯುವ ನೀರಿನ ವ್ಯವಸ್ಥೆ
author img

By

Published : Feb 29, 2020, 11:24 PM IST

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜೈನಾಪೂರ, ತೋರಣಹಳ್ಳಿ, ಕರೋಶಿ, ಮುಗಳಿ, ವಡ್ರಾಳ, ಬಂಬಲವಾಡ, ಕಮತೆನಟ್ಟಿ, ಮುಗಳಿ, ಬಿದರಳ್ಳಿ ಹೀಗೆ ಒಟ್ಟು 12 ಗ್ರಾಮಗಳ ಜನತೆ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದರು. ದಿನಂಪ್ರತಿ ನಾಲ್ಕೈದು ಕಿ.ಮೀ. ದೂರ ಕ್ರಮಿಸಿ ಬಾವಿಗಿಳಿದು ನೀರು ತರುವ ಪ್ರಸಂಗ ಈ ಗ್ರಾಮಗಳಿಗೆ ಎದುರಾಗಿತ್ತು.

ಈಟಿವಿ ಭಾರತ ಇಂಪ್ಯಾಕ್ಟ್: 12 ಗ್ರಾಮಗಳಿಗೆ ಕುಡಿಯುವ ನೀರಿನ ವ್ಯವಸ್ಥೆ

ಇದನ್ನು ಓದಿ: ಕೋಟ್ಯಂತರ ರೂ. ವೆಚ್ಚದ ಕಾಮಗಾರಿ ಸ್ಥಗಿತ, ಜೀವಜಲಕ್ಕಾಗಿ 12 ಗ್ರಾಮಗಳ ಜನರ ಪರದಾಟ

ಕೋಟ್ಯಂತರ ರೂ. ವೆಚ್ಚದ ಕಾಮಗಾರಿ ಸ್ಥಗಿತ, ಜೀವ ಜಲಕ್ಕಾಗಿ 12 ಗ್ರಾಮಗಳ ಜನರ ಪರದಾಟ ಎನ್ನುವ ಶೀರ್ಷಿಕೆಯಡಿ ಈಟಿವಿ ಭಾರತ ಈ ಕುರಿತಂತೆ ಸುದ್ದಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಹಾಗೂ ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಪರಿಶೀಲನೆ ನಡೆಸಿ ಈ 12 ಗ್ರಾಮಗಳಿಗೆ ಕುಡಿಯಲು ನೀರು ಒದಗಿಸಲು ಟ್ಯಾಂಕರ್ ವ್ಯವಸ್ಥೆ ಮಾಡಿಸಿದ್ದಾರೆ.

ಇಲ್ಲಿನ ಜನರಿಗೆ ಕಳೆದ 20ಕ್ಕೂ ಹೆಚ್ಚು ದಿನಗಳಿಂದ ನೀರಿಲ್ಲದೆ ತೊಂದರೆಯಾಗುತ್ತಿತ್ತು. ಈಗಾಗಲೇ ಪೈಪ್ ಲೈನ್ ಒಡೆದಿತ್ತು. ಅವುಗಳ ದುರಸ್ತಿ ಕಾರ್ಯ ಮುಗಿದಿದೆ. ಹೀಗಾಗಿ ನಾಳೆ ಈ ಗ್ರಾಮಗಳಿಗೆ ನೀರು ಬರುತ್ತದೆ ಎಂದು ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.