ETV Bharat / state

ಸಾವಿರಾರು ಬಡ ಕುಟುಂಬಕ್ಕೆ ಸತ್ಯ ಸಂಗಮ ಪ್ರತಿಷ್ಠಾನದಿಂದ ಪಡಿತರ ಹಂಚಿಕೆ - Satya Sangam Foundation

ಲಾಕ್​​​​ಡೌನ್ ಹಿನ್ನೆಲೆಯಲ್ಲಿ ಡಿಸಿಎಂ ಲಕ್ಷ್ಮಣ್ ಸವದಿ ಮಾರ್ಗದರ್ಶನ ಮೆರೆಗೆ ಅವರ ಪುತ್ರ ಚಿದಾನಂದ ಸವದಿ ಬಿಪಿಎಲ್ ಕಾರ್ಡ್ ಕುಟುಂಬಗಳಿಗೆ ಅಥಣಿ ಪಟ್ಟಣದಲ್ಲಿ ಆಹಾರ ಧಾನ್ಯಗಳನ್ನು ವಿತರಿಸಲಾಯಿತು.

Distribution of rations to thousands of families by Satya Sangam Foundation
ಸತ್ಯ ಸಂಗಮ ಪ್ರತಿಷ್ಠಾನದಿಂದ ಸಾವಿರಾರು ಬಡ ಕುಟುಂಬಕ್ಕೆ ಪಡಿತರ ವಿತರಣೆ
author img

By

Published : Apr 16, 2020, 3:45 PM IST

ಅಥಣಿ : ಲಾಕ್​​ ಡೌನ್​​​ ಹಿನ್ನೆಲೆಯಲ್ಲಿ ಅಥಣಿ ಪಟ್ಟಣದ ಪ್ರತಿ ವಾರ್ಡ್​​ಗಳಲ್ಲಿ ಸತ್ಯ ಸಂಗಮ ಗ್ರಾಮವಿಕಾಸ ಪ್ರತಿಷ್ಠಾನದಿಂದ ಧವಸ, ಧಾನ್ಯ ಹಂಚಲಾಯಿತು.

ಇದೇ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ ಲಕ್ಷ್ಮಣ್ ಸವದಿ ಪುತ್ರ ಚಿದಾನಂದ ಸವದಿ, ಪ್ರತಿ ಬಿಪಿಎಲ್ ಪಡಿತರ ಚೀಟಿ ಹೊಂದಿದ ಬಡ ಮತ್ತು ಅರ್ಹ ಕುಟುಂಬಗಳಿಗೆ ಐದು ಕೆಜಿ ಗೋದಿ, ಐದು ಕೆ.ಜಿ ಜೋಳ ಹಂಚುವ ಮೂಲಕ ಕ್ಷೇತ್ರದ ಜನರ ಹಿತ ಕಾಯಲು ಮುಂದಾಗಿದ್ದು, ನಮಗೆ ಸಿಕ್ಕ ಜನರ ಬೆಂಬಲ, ಪ್ರೀತಿ, ವಿಶ್ವಾಸಗಳಿಗೆ ನಾವು ಎಷ್ಟು ಉಪಕಾರ ತೀರಿಸಿದರೂ ಕಡಿಮೆ ಎಂದರು.

ಸತ್ಯ ಸಂಗಮ ಪ್ರತಿಷ್ಠಾನದಿಂದ ಸಾವಿರಾರು ಬಡ ಕುಟುಂಬಕ್ಕೆ ಪಡಿತರ ವಿತರಣೆ

ಜಾಗತಿಕ ಮಹಾಮಾರಿ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ನಿತ್ಯದ ದುಡಿಮೆಯನ್ನೇ ನಂಬಿದ ಬಡ ಮತ್ತು ಮಧ್ಯಮ ವರ್ಗದ ಜನರು ಸದ್ಯ ಸಂಕಷ್ಟಕ್ಕೆ ಸಿಲುಕಿದ್ದು ಅಥಣಿ ಪಟ್ಟಣದ ಪ್ರತಿ ವಾರ್ಡ ಗೆ ತೆರಳಿ ಪಡಿತರ ಆಧಾರದ ಮೇಲೆ ಜೋಳ ಮತ್ತು ಗೋಧಿ ಮತ್ತು ಮಾಸ್ಕಗಳನ್ನು ಉಚಿತವಾಗಿ ಪೂರೈಕೆ ಮಾಡುತ್ತಿದ್ದೇವೆ.

ಇಂತಹ ಸಂದಿಗ್ದ ಸ್ಥಿತಿಯಲ್ಲಿ ಜನರು ಅನವಶ್ಯಕವಾಗಿ ಮನೆಯಿಂದ ಹೊರಗೆ ಬರಬಾರದು ಲಾಕ್ ಡೌನ ಪಾಲನೆ ಮಾಡುವ ಮೂಲಕ ಜೀವರಕ್ಷಣೆಗೆ ಆದ್ಯತೆ ಕೊಟ್ಟು ಕೊರೊನಾ ಹರಡದಂತೆ ಕಾಯುವ ಮೂಲಕ ಆರಕ್ಷಕ, ಆರೋಗ್ಯ ಇಲಾಖೆ ಮತ್ತು ಪೌರ ಕಾರ್ಮಿಕರಿಗೆ ಸಹಕರಿಸಿ ಸಮಾಜದ ಸ್ವಾಸ್ಥ್ಯ ಕಾಪಾಡಬೇಕು ಎಂದು ಬಿಜೆಪಿ ಚಿಕ್ಕೋಡಿ ಯುವ ಮೊರ್ಚಾ ಅಧ್ಯಕ್ಷ ಹಾಗೂ ಸತ್ಯ ಸಂಗಮ ಗ್ರಾಮ ವಿಕಾಸ ಪ್ರತಿಷ್ಠಾನದ ಚಿದಾನಂದ ಸವದಿ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.