ETV Bharat / state

ಆನ್ಲೈನ್ ಮುಖಾಂತರ ದಸರಾ ಉತ್ಸವ ವೀಕ್ಷಣೆ ಮಾಡುತ್ತಿರುವ ಹುಕ್ಕೇರಿ‌ ಹಿರೇಮಠದ ಭಕ್ತರು.... - Chikkodi Hookery Hiremath Dasara Program

ಬೆಳಗಾವಿ ಜಿಲ್ಲೆಯ ಹುಕ್ಕೇರಿ ಹೀರೆಮಠದಲ್ಲಿ ಪ್ರತಿ ವರ್ಷ ದಸರಾ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಿದ್ದ ಹುಕ್ಕೇರಿ ಹಿರೇಮಠವು ಈ ಬಾರಿ‌ ಕೊರೊನಾ ಮಹಾಮಾರಿಯಿಂದ ದಸರಾ ಹಬ್ಬವನ್ನು ಯಾವ ಭಕ್ತರಿಗೆ ದೇವಿಯ ದರ್ಶನವಿಲ್ಲದೆ ಪೂಜೆ ಪುನಸ್ಕಾರಗಳನ್ನು ನಡೆಸಲಾಗುತ್ತಿದೆ.

chikkodi
ಬೆಳಗಾವಿ ಜಿಲ್ಲೆಯ ಹುಕ್ಕೇರಿ ಹೀರೆಮಠ
author img

By

Published : Oct 20, 2020, 7:44 PM IST

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ಹೀರೆಮಠವು ತನ್ನದೆಯಾದ ಭಕ್ತ ವೃಂದವನ್ನು ಹೊಂದಿದ್ದು ಈ ಮಠಕ್ಕೆ ದೇಶ ವಿದೇಶದಿಂದ ಭಕ್ತರು ಬಂದು ದೇವರ ದರ್ಶನ ಪಡೆಯುತ್ತಾರೆ. ಪ್ರತಿ ವರ್ಷ ದಸರಾ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಿದ್ದ ಹುಕ್ಕೇರಿ ಹಿರೇಮಠವು ಈ ಬಾರಿ‌ ಕೊರೊನಾ ಮಹಾಮಾರಿಯಿಂದ ದಸರಾ ಹಬ್ಬವನ್ನು ಯಾವ ಭಕ್ತರಿಗೆ ದೇವಿಯ ದರ್ಶನವಿಲ್ಲದೆ ಪೂಜೆ ಪುನಸ್ಕಾರಗಳನ್ನು ನಡೆಸಲಾಗುತ್ತಿದೆ.

ಹಿರೇಮಠದ ಚಂದ್ರಶೇಖರ ಸ್ವಾಮೀಜಿ‌ ಸಮ್ಮುಖದಲ್ಲಿ ದಸರಾ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.

ಅಪಾರ ಭಕ್ತ ಸಮೂಹವನ್ನು ಹೊಂದಿದ ಹುಕ್ಕೇರಿ ಹಿರೇಮಠದ ಭಕ್ತರ ಅನಕೂಲಕ್ಕಾಗಿ ಹಿರೇಮಠದ ಚಂದ್ರಶೇಖರ ಸ್ವಾಮೀಜಿ‌ ಸಮ್ಮುಖದಲ್ಲಿ ದಸರಾ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು ಭಕ್ತರಿಗೆ ದೇವಿಯ ದರ್ಶನ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹುಕ್ಕೇರಿ ಹಿರೇಮಠ್​ (Hukkeri Hiremath) ಎಂಬ ಫೇಸ್​ಬುಕ್ ಪೇಜ್​ನಿಂದ ಕಾರ್ಯಕ್ರಮಗಳನ್ನು ಬಿತ್ತರಿಸಲಾಗುತ್ತಿದ್ದು ಇದರಿಂದ ಭಕ್ತರು ಸಹಿತ ಹುಕ್ಕೇರಿ‌ ಮಠದ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿದ್ದಾರೆ.

ಮುಂಜಾನೆಯ ಅಗ್ನಿಹೋತ್ರ ಚಂಡಿಕಾಯಾಗ ಲಿಂಗ ಪೂಜೆ ಸಂಜೆ ರಥೋತ್ಸವ ಹಾಗೆಯೇ ವಿಶೇಷವಾದ ಗುರುಗಳ ಆಶೀರ್ವಚನ ಮತ್ತು ಸಂಗೀತ ಕಾರ್ಯಕ್ರಮವನ್ನು ವೀಕ್ಷಿಸಿ ದೇಶ ವಿದೇಶದಲ್ಲಿರುವ ಸಾಕಷ್ಟು ಸದ್ಭಕ್ತರು ಸಂತಸವನ್ನು ಪಟ್ಟಿದ್ದಾರೆ.‌

ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಸುಮಾರು ಹತ್ತು ಸಾವಿರ ಜನ ಆನ್ಲೈನ್ ದಸರಾ ಉತ್ಸವವನ್ನು ವೀಕ್ಷಿಸಿದ್ದು ವಿಶೇಷವಾಗಿರುವಂತದ್ದು, ಖ್ಯಾತ ಸಂಗೀತ ವಿದ್ವಾಂಸರಾದ ಕುಮಾರ ನಿರಂಜನ ಬಡಿಗೇರ ಅವರ ಹಿಂದೂಸ್ತಾನಿ ಸಂಗೀತವನ್ನು ಹಲವಾರು ‌ಭಕ್ತ ವೃಂದ ನೋಡಿದೆ ಹಾಗೂ‌ ದೇವಿಯ ಪೂಜೆಯನ್ನು ಸಹಿತ ಭಕ್ತರು ಫೇಸ್​ಬುಕ್ ಪೇಜ್​ ಮೂಲಕ‌ ನೋಡಿ ದೇವಿಯ ದರ್ಶನ ಪಡೆಯುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.