ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆಗಮಿಸುವ ವೇಳೆ ರಮೇಶ್ ಬೆಂಬಲಿಗರ ಗಲಾಟೆ ಮಾಡಿರುವ ಕುರಿತು ವಿಚಾರಕ್ಕೆ ಡಿಸಿಪಿ ಡಾ. ವಿಕ್ರಮ ಆಮಟೆ ಪ್ರತಿಕ್ರಿಯೆ ನೀಡಿದ್ದಾರೆ.
ಓದಿ: ಬೆಳಗಾವಿಯಲ್ಲಿ ಡಿಕೆಶಿಗೆ ಪ್ರತಿಭಟನೆಯ ಸ್ವಾಗತ: ಬೆಂಗಾವಲು ಕಾರಿನ ಮೇಲೆ ದಾಳಿ, ಚಪ್ಪಲಿ ಎಸೆತ
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾರಾದರೂ ಗಲಾಟೆ ಮಾಡಿದ್ದರೆ ಅವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು. ಗಲಾಟೆ ದೃಶ್ಯಾವಳಿಗಳನ್ನ ಪರಿಶೀಲನೆ ಮಾಡುತ್ತೇವೆ ಎಂದರು.
ಡಿ.ಕೆ.ಶಿವಕುಮಾರ್ ವಾಹನ ತೆರಳಿದ ಬಳಿಕ ರಸ್ತೆ ಮೇಲೆ ಕುಳಿತು ಕೆಲವರು ಗಲಾಟೆ ಮಾಡಿದ್ದಾರೆ. ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಡಿಸಿಪಿ ವಿಕ್ರಮ ಆಮಟೆ ಸ್ಪಷ್ಟನೆ ನೀಡಿದರು.