ETV Bharat / state

ಡಿಸಿಎಂ ಸವದಿಗೆ ಬಂತು ತನ್ನ ಸೋಲಿಸಿದವರನ್ನು ಗೆಲ್ಲಿಸಬೇಕಾದಂತಹ ದುಸ್ಥಿತಿ

author img

By

Published : Nov 15, 2019, 12:54 PM IST

ರಾಜ್ಯದಲ್ಲಿ ಬದಲಾದ ರಾಜಕಾರಣದಿಂದಾಗಿ ಸೋಲಿಸಿದವರನ್ನು ಗೆಲ್ಲಿಸುವಂತ ಪ್ರಸಂಗ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಒದಗಿ ಬಂದಿದ್ದು, ಸವದಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಡಿಸಿಎಂ ಸವದಿ, ಮಹೇಶ್​ ಕುಮಟಳ್ಳಿ

ಚಿಕ್ಕೋಡಿ : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಲಕ್ಷ್ಮಣ್​ ಸವದಿ ಅವರನ್ನು ಸೋಲಿಸಿದ್ದ ಮಹೇಶ್​ ಕುಮಟಳ್ಳಿ ಈಗ ಬದಲಾದ ರಾಜಕಾರಣದಿಂದಾಗಿ ಬಿಜೆಪಿ ಸೇರಿ ಮತ್ತೆ ಚುನಾವಣೆಗೆ ನಿಂತಿದ್ದಾರೆ. ಆದರೆ ಅಂದು ಬಿಜೆಪಿಯಿಂದ ನಿಂತು ಸೋತಿದ್ದ ಲಕ್ಷ್ಮಣ್​ ಸವದಿ ಈಗ ತಮ್ಮನ್ನೇ ಸೋಲಿಸಿದ್ದ ಮಹೇಶ್​ ಕುಮಟಳ್ಳಿ ಪರ ಪ್ರಚಾರ ಮಾಡಿ ಗೆಲ್ಲಿಸಬೇಕಾದಂತಹ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ.

2018ರ ಚುನಾವಣೆಯಲ್ಲಿ ಗೆದ್ದಿದ್ದ ಮಹೇಶ ಕುಮಟಳ್ಳಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದರಿಂದ ಅವರು ಅನರ್ಹ ಶಾಸಕ ಎನಿಸಿದ್ದಾರೆ. ಇದರಿಂದಾಗಿ ಉಪಚುನಾವಣೆ ನಡೆಯುತ್ತಿದೆ. ಈಗ ಅವರು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯೂ ಆಗಿದ್ದಾರಲ್ಲದೇ, ಆ ಪಕ್ಷದ ಟಿಕೆಟ್‌ ಕೂಡ ಸಿಕ್ಕಿದೆ. ಆದರೆ ಹಿಂದಿನ 2 ಚುನಾವಣೆಗಳಲ್ಲಿ ತಮ್ಮ ವಿರುದ್ಧ ಸ್ಪರ್ಧಿಸಿ ಒಮ್ಮೆ ಸೋತು, ಒಮ್ಮೆ ಗೆದ್ದಿರುವ ಸಾಂಪ್ರದಾಯಿಕ ಎದುರಾಳಿ ಕುಮಟಳ್ಳಿ ಪರವೇ ತಾವು ಕೆಲಸ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಸವದಿ ಅವರದ್ದಾಗಿದೆ.

ಕಳೆದ ಚುನಾವಣೆಯಲ್ಲಿ ಮಹೇಶ ಕುಮಟಳ್ಳಿ ಅವರನ್ನು ಗೆಲ್ಲಿಸುವಲ್ಲಿ ರಮೇಶ ಜಾರಕಿಹೊಳಿ ಪ್ರಮುಖ ಪಾತ್ರ ವಹಿಸಿದ್ದರು. ಅಥಣಿಯಲ್ಲಿ ಹಲವಾರು ಸಮಾವೇಶಗಳನ್ನು ನಡೆಸುವ ಮೂಲಕ ಮತದಾರರನ್ನು ಸೆಳೆದಿದ್ದರು. ರಮೇಶ್​ಗೆ ತಕ್ಕ ಪ್ರತ್ಯುತ್ತರ ನೀಡಲು, ಆಗ ರಾಜ್ಯ ಕೃಷಿ ಮೋರ್ಚಾದ ಅಧ್ಯಕ್ಷರಾಗಿದ್ದ ಸವದಿ, ಚುನಾವಣೆ ಸಂದರ್ಭದಲ್ಲಿ ಅಮಿತ್​ ಶಾ ಅವರ ಸಮಾವೇಶವನ್ನು ಗೋಕಾಕ್​ನಲ್ಲಿ ಆಯೋಜಿಸಿದ್ದರು. ಅದರ ಉಸ್ತುವಾರಿಯನ್ನು ತಾವೇ ವಹಿಸಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಶಾ ಅವರ ಸಮಾವೇಶ ರದ್ದಾಗಿತ್ತು. ಆದರೆ ಅದೇ ರಮೇಶರನ್ನು ಈಗ ಬಿಜೆಪಿ ತಲೆ ಮೇಲೆ ಹೊತ್ತುಕೊಂಡು ಮೆರೆಸುತ್ತಿರುವುದು ಸವದಿ ಅವರಿಗೆ ನುಂಗಲಾರದ ತುತ್ತಾಗಿದೆ.

ಕ್ಷೇತ್ರದ ಜನಪ್ರತಿನಿಧಿ ಶಾಸಕ ಸ್ಥಾನದಿಂದ ಅನರ್ಹಗೊಂಡ ಕಾರಣಕ್ಕೆ ಉಪಚುನಾವಣೆ ನಡೆಯುತ್ತಿರುವುದು ಇದೇ ಮೊದಲು. ಅಲ್ಲಿ 1967 ರಿಂದ 2018ರ ವರೆಗೆ 12 ಚುನಾವಣೆಗಳು ನಡೆದಿವೆ. ಆರಂಭದಲ್ಲಿ ಈ ಕ್ಷೇತ್ರ ಕಾಂಗ್ರೆಸ್‌ ಭದ್ರಕೋಟೆಯಾಗಿತ್ತು. ಡಿ.ಬಿ.ಪವಾರ ದೇಸಾಯಿ 3 ಬಾರಿ ಕ್ಷೇತ್ರ ಪ್ರತಿನಿಧಿಸಿದ್ದರು. ಒಂದು ಸಲ ಮಹಿಳೆಯೊಬ್ಬರಿಗೂ (ಲೀಲಾದೇವಿ ಆರ್. ಪ್ರಸಾದ್) ಮತದಾರರು ಮಣೆ ಹಾಕಿದ್ದಾರೆ. ಅಲ್ಪಸಂಖ್ಯಾತ ಸಮುದಾಯದ ಶಹಜಹಾನ್ ಇಸ್ಮಾಯಿಲ್ ಡೊಂಗರಗಾಂವ ಅವರು ಕೂಡ ಇಲ್ಲಿ ಅವಕಾಶ ಪಡೆದಿದ್ದರು. 2004 ರಿಂದ 2013ರವರೆಗೆ ಬಿಜೆಪಿಯ ಸವದಿ ಗೆಲುವಿನ ಹ್ಯಾಟ್ರಿಕ್‌ ಸಾಧನೆ ಮಾಡಿದ್ದರು. ಆದರೆ 2018ರಲ್ಲಿ ಕಾಂಗ್ರೆಸ್‌ನ ಮಹೇಶ ಕುಮಠಳ್ಳಿ ವಿರುದ್ಧ ಸೋತಿದ್ದರು.

ಈ ನಡುವೆ ಟಿಕೆಟ್ ಕೈತಪ್ಪಿದ್ದರಿಂದ ಆಕ್ರೋಶಗೊಂಡ ಸವದಿ ಬೆಂಬಲಿಗರು ಇವತ್ತು ಭಾರೀ ಪ್ರತಿಭಟನೆ ಮತ್ತು ಪಾದಾಯಾತ್ರೆಗಳನ್ನು ಆಯೋಜಿಸಿದ್ದರು. ಆದರೆ, ಹೈಕಮಾಂಡ್ ತರಾಟೆಗೆ ತೆಗೆದುಕೊಳ್ಳುತ್ತಲೇ ಸವದಿಯವರು ತಮ್ಮ ಬೆಂಬಲಿಗರಿಗೆ ಮನವಿ ಮಾಡಿ ಪ್ರತಿಭಟನೆಯನ್ನು ಕೈಬಿಡುವಂತೆ ಮಾಡಿದ್ದಾರೆ.

ಈ ನಡುವೆ ಅಥಣಿ ಮತಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಯಾರಾಗುತ್ತಾರೆ ಎನ್ನುವ ಕುತೂಹಲ ಇನ್ನೂ ಉಳಿದಿದೆ. ಆಡಳಿತಾರೂಢ ಪಕ್ಷದ ಅಭ್ಯರ್ಥಿ ಸೋಲಿಸಲು ಪ್ರಬಲ ಅಭ್ಯರ್ಥಿಗಾಗಿ ಕೈ ಬಹಳಷ್ಟು ಲೆಕ್ಕಾಚಾರ ನಡೆಸಿದೆ. ಇಲ್ಲಿ ಕಾಂಗ್ರೆಸ್​ನಿಂದ ಯಾರ ಕೈಗೆ ಟಿಕೆಟ್ ಸಿಗುತ್ತದೆ ಎಂಬುವುದನ್ನು ಕಾಯ್ದು ನೋಡಬೇಕಿದೆ.

Intro:ಸೋಲಿಸಿದವರನ್ನು ಗೆಲ್ಲಿಸಬೇಕಾದ ಸ್ಥಿತಿ ಡಿಸಿಎಂ ಸವದಿ ಹೆಗಲೇರಿದೆBody:

ಚಿಕ್ಕೋಡಿ :

ಸೋಲಿಸಿದವರನ್ನು ಗೆಲ್ಲಿಸುವಂತ ಪ್ರಸಂಗ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಶತ್ರುವಿಗೂ ಬರಬಾರದ ಸ್ಥಿತಿ ಒದಗಿ ಬಂದಿದ್ದು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ತನ್ನನ್ನು ಸೋಲಿಸಿ ಮುಖಭಂಗ ಮಾಡಿದ ಕಟ್ಟಾ ಪ್ರತಿಸ್ಪರ್ಧಿಯನ್ನೆ ಈಗ ಗೆಲ್ಲಿಸಿಕೊಂಡು ಬರಬೇಕಾದ ಅನಿವಾರ್ಯತೆ ಸವದಿಗೆ ಎದುರಾಗಿದೆ.

2018ರ ಚುನಾವಣೆಯಲ್ಲಿ ಗೆದ್ದಿದ್ದ ಮಹೇಶ ಕುಮಠಳ್ಳಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದರಿಂದ ಅವರು ಅನರ್ಹ ಶಾಸಕ ಎನಿಸಿದ್ದಾರೆ. ಇದರಿಂದಾಗಿ ಉಪಚುನಾವಣೆ ನಡೆಯುತ್ತಿದೆ. ಈಗ ಅವರು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯೂ ಆಗಿದ್ದಾರಲ್ಲದೇ, ಆ ಪಕ್ಷದ ಟಿಕೆಟ್‌ ಕೂಡ ಸಿಕ್ಕಿದೆ. ಹಿಂದಿನ 2 ಚುನಾವಣೆಗಳಲ್ಲಿ ತಮ್ಮ ವಿರುದ್ಧ ಸ್ಪರ್ಧಿಸಿ ಒಮ್ಮೆ ಸೋತು, ಒಮ್ಮೆ ಗೆದ್ದಿರುವ ಸಾಂಪ್ರದಾಯಿಕ ಎದುರಾಳಿ ಕುಮಠಳ್ಳಿ ಪರವೇ ಕೆಲಸ ಮಾಡಬೇಕಾದ ಅನಿವಾರ್ಯ ಸವದಿ ಅವರದ್ದಾಗಿದೆ.

ಕಾಂಗ್ರೆಸ್‌ ಗೆ ರಾಜೀನಾಮೆ ನೀಡಿ ರಾಜ್ಯದಲ್ಲಿ ಬಿಜೆಪಿಯು ಅಧಿಕಾರಕ್ಕೆ ಬರಲು ಸಹಾಯ ಮಾಡಿದ ಮಹೇಶ ಕುಮಠಳ್ಳಿ ಅವರಿಗೆ ಬಿಜೆಪಿ ಪಕ್ಷವು ಮಣೆ ಹಾಕಿದೆ. ಪಕ್ಷವು ಕ್ಷೇತ್ರದ ಉಸ್ತುವಾರಿಯನ್ನು ಲಕ್ಷ್ಮಣ ಸವದಿ ಅವರಿಗೆ ವಹಿಸಿದ್ದು, ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರಲೇಬೇಕೆಂದು ಖಡಕ್ಕಾಗಿ ಹೇಳಿದೆ.

ಕಳೆದ ಚುನಾವಣೆಯಲ್ಲಿ ಮಹೇಶ ಕುಮಠಳ್ಳಿ ಅವರನ್ನು ಗೆಲ್ಲಿಸಲು ರಮೇಶ ಜಾರಕಿಹೊಳಿ ಪ್ರಮುಖ ಪಾತ್ರ ವಹಿಸಿದ್ದರು. ಅಥಣಿಯಲ್ಲಿ ಹಲವಾರು ಸಮಾವೇಶಗಳನ್ನು ನಡೆಸುವ ಮೂಲಕ ಮತದಾರರನ್ನು ಸೆಳೆದಿದ್ದರು. ರಮೇಶಗೆ ತಕ್ಕ ಪ್ರತ್ಯುತ್ತರ ನೀಡಲು, ಆಗ ರಾಜ್ಯ ಕೃಷಿ ಮೋರ್ಚಾದ ಅಧ್ಯಕ್ಷರಾಗಿದ್ದ ಸವದಿ, ಚುನಾವಣೆ ಸಂದರ್ಭದಲ್ಲಿ ಅಮಿತ ಶಾ ಅವರ ಸಮಾವೇಶವನ್ನು ಗೋಕಾಕನಲ್ಲಿ  ಆಯೋಜಿಸಿದ್ದರು. ಅದರ ಉಸ್ತುವಾರಿಯನ್ನು ತಾವೇ ವಹಿಸಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಶಾ ಅವರ ಸಮಾವೇಶ ರದ್ದಾಗಿತ್ತು. ಆದರೆ ಅದೇ ರಮೇಶರನ್ನು ಈಗ ಬಿಜೆಪಿ ತಲೆ ಮೇಲೆ ಹೊತ್ತುಕೊಂಡು ಮೆರೆಸುತ್ತಿದ್ದು ಸವದಿ ಸಂದಿಗ್ಧಕ್ಕೆ ಸಿಲುಕಿದ್ದಾರೆ. ರಮೇಶ  ವಿರುದ್ಧವೂ ಸವದಿ ಅವರು ಈಗ ತುಟಿ ಬಿಚ್ಚುವಂತಿಲ್ಲ. 

ಕ್ಷೇತ್ರದ ಜನಪ್ರತಿನಿಧಿ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದರಿಂದ ಉಪಚುನಾವಣೆ ನಡೆಯುತ್ತಿರುವುದು ಇದೇ ಮೊದಲು. ಅಲ್ಲಿ 1967 ರಿಂದ 2018ರ ವರೆಗೆ 12 ಚುನಾವಣೆಗಳು ನಡೆದಿವೆ. ಆರಂಭದಲ್ಲಿ ಇದು ಕಾಂಗ್ರೆಸ್‌ ಭದ್ರಕೋಟೆಯಾಗಿತ್ತು. ಡಿ.ಬಿ.ಪವಾರ ದೇಸಾಯಿ 3 ಬಾರಿ ಕ್ಷೇತ್ರ ಪ್ರತಿನಿಧಿಸಿದ್ದರು. ಮಹಿಳೆಯೊಬ್ಬರಿಗೆ (ಲೀಲಾದೇವಿ ಆರ್. ಪ್ರಸಾದ್) ಮತದಾರರು ಮಣೆ ಹಾಕಿದ್ದಾರೆ. ಅಲ್ಪಸಂಖ್ಯಾತ ಸಮುದಾಯದ ಶಹಜಹಾನ್ ಇಸ್ಮಾಯಿಲ್ ಡೊಂಗರಗಾಂವ ಅವರು ಅವಕಾಶ ಪಡೆದಿದ್ದರು. 2004 ರಿಂದ 2013ರವರೆಗೆ ಬಿಜೆಪಿಯ ಸವದಿ ಗೆಲುವಿನ ಹ್ಯಾಟ್ರಿಕ್‌ ಸಾಧನೆ ಮಾಡಿದ್ದರು. 2018ರಲ್ಲಿ ಕಾಂಗ್ರೆಸ್‌ನ ಮಹೇಶ ಕುಮಠಳ್ಳಿ ವಿರುದ್ಧ ಸೋತಿದ್ದರು.

ಟಿಕೆಟ್ ಕೈತಪ್ಪಿದ್ದರಿಂದ ಆಕ್ರೋಶಗೊಂಡ ಸವದಿ ಬೆಂಬಲಿಗರು ಇವತ್ತು ಭಾರೀ ಪ್ರತಿಭಟನೆ ಮತ್ತು ಪಾದಯಾತ್ರೆಗಳನ್ನು ಆಯೋಜಿಸಿದ್ದರು. ಆದರೆ, ಹೈಕಮಾಂಡ್ ತರಾಟೆಗೆ ತೆಗೆದುಕೊಳ್ಳುತ್ತಲೇ ಸವದಿಯವರು ತಮ್ಮ ಬೆಂಬಲಿಗರಿಗೆ ಮನವಿ ಮಾಡಿ ಪ್ರತಿಭಟನೆಯನ್ನು ಕೈಬಿಡುವಂತೆ ಮಾಡಿದ್ದಾರೆ.

ಅಥಣಿ ಮತಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಯಾರಾಗುತ್ತಾರೆ ಎನ್ನುವುದೂ ಕುತೂಹಲ ಮೂಡಿಸಿದೆ. ಆಡಳಿತಾರೂಢ ಪಕ್ಷದ ಅಭ್ಯರ್ಥಿ ಸೋಲಿಸಲು ಪ್ರಬಲ ಅಭ್ಯರ್ಥಿಗಾಗಿ ಕೈ ಬಹಳಷ್ಟು ಲೆಕ್ಕಾಚಾರ ನಡೆಸಿದೆ. ಇಲ್ಲಿ ಕಾಂಗ್ರೆಸ್ ನಿಂದ ಯಾರ ಕೈಗೆ ಟಿಕೇಟ್ ಸಿಗುತ್ತದೆ ಎಂಬುವುದು ಕಾಯ್ದು ನೋಡಬೇಕಿದೆ.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.